ಕೊರೋನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಮುಂದುವರೆದಿದ್ದು, ಇದರಿಂದ ಕೂಲಿ ಕಾರ್ಮಿಕರು, ನಿರಾಶ್ರಿತರು, ನಿರ್ಗತಿಕರು, ಬಡವರ್ಗದವರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಯವರ ಅಶೀರ್ವಾದ ಹಾಗೂ ಸಹಕಾರದೊಂದಿಗೆ ಹಾಗೂ ಮಲೆನಾಡು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಶಿವಮೊಗ್ಗ, ಚುಂಚಾದ್ರಿ ಮಹಿಳಾ ಸೌಹಾರ್ದ ಸಹಕಾರಿ ನಿ, ಶಿವಮೊಗ್ಗ ಮತ್ತು ಚುಂಚಾದ್ರಿ ಮಹಿಳಾ ವೇದಿಕೆ ಇದರ ಸಹಭಾಗಿತ್ವದಲ್ಲಿ “ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ” ವತಿಯಿಂದ ಶಿವಮೊಗ್ಗ ನಗರದಲ್ಲಿ ವಾಸಿಸುತ್ತಿರುವ ಆದಿವಾಸಿಗಳು, ನಿರ್ಗತಿಕರು, ನಿರಾಶ್ರಿತರು ಹಾಗೂ ಒಕ್ಕಲಿಗ ಸಮಾಜದ ಶ್ರಮಿಕ ವರ್ಗ ಹಾಗೂ ಬಡ ಕುಟುಂಬದವರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಜಿಲ್ಲಾ ಒಕ್ಕಲಿಗ ಮುಖಂಡರಾದ ಶ್ರೀ ರಮೇಶ್ ಹೆಗ್ಡೆರವರು, ಶ್ರೀಮತಿ ಯಮುನಾ ರಂಗೇಗೌಡರವರು, ಕಾಂಗ್ರೆಸ್ ಮುಖಂಡರಾದ ರಂಗೇಗೌಡರವರು, ಮಲೆನಾಡು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಶ್ರೀ ಕೆ.ಎನ್.ರಾಮಕೃಷ್ಣರವರು, ಮಾಜಿ ನಗರಸಭಾ ಸದಸ್ಯರಾದ ಶ್ರೀ ಗಾಡಿಕೊಪ್ಪ ರಾಜಣ್ಣ, ಚುಂಚಾದ್ರಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಭಾರತಿ ರಾಮಕೃಷ್ಣರವರು, ಚುಂಚಾದ್ರಿ ಮಹಿಳಾ ಸೌಹಾರ್ದ ಸಹಕಾರಿ ನಿ, ಶಿವಮೊಗ್ಗದ ಅಧ್ಯಕ್ಷರಾದ ಶಾರದಾ ಶೇಷಗಿರಿ ಗೌಡರವರು, ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷರು, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರು, ರಾಜ್ಯ ಕಾಂಗ್ರೆಸ್ ಯುವ ಮುಖಂಡರಾದ ಶ್ರೀ ಚೇತನ್ ಗೌಡರವರು, ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿಗಳಾದ ರಘುಗೌಡರವರು, ಯುವ ವೇದಿಕೆಯ ಮುಖಂಡುರುಗಳಾದ ಎಸ್.ಕೆ.ರಾಘವೇಂದ್ರ, ಗುರು, ಪ್ರಮೋದ್, ಧನಂಜಯ್, ಸುನಿಲ್, ಅರುಣ್, ಶಿವರಾಜ್, ಸಂಜಯ್ ಸೇರಿದಂತೆ ಹಲವಾರು ಒಕ್ಕಲಿಗ ಯುವ ಮುಖಂಡರುಗಳು ಉಪಸ್ಥಿತರಿದ್ದರು

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153