ಶಿವಮೊಗ್ಗ: ಸಾರ್ವಜನಿಕರ ಹಿತದೃಷ್ಠಿಯಿಂದ ಆಸ್ತಿ ತೆರಿಗೆ ದರ ಹೆಚ್ಚಳದ ಪ್ರಸ್ತಾವನೆಯನ್ನು 2022 -23 ನೇ ಸಾಲಿಗೆ  ಕೈಬಿಡುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕೆಂದು ಇಂದು ಮಹಾನಗರ ಪಾಲಿಕೆ ಆಡಳಿತ ಪಕ್ಷದ ಸದಸ್ಯರು ಆಯುಕ್ತರ ಮೂಲಕ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ರಾಜ್ಯದ ಎಲ್ಲಾ ನಗರ ಹಾಗೂ ಪಟ್ಟಣಗಳಲ್ಲಿ 2022 -23 ನೇ ಸಾಲಿಗೆ ಕನಿಷ್ಠ ಶೇ. 3 ರಿಂದ ಶೇ. 5 ರಷ್ಟು ಆಸ್ತಿ ತೆರಿಗೆ ದರ ಪರಿಷ್ಕರಣೆ ಮಾಡಲು ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ಆಸ್ತಿ ತೆರಿಗೆ ದರ ಹೆಚ್ಚಳ ಮಾಡಲು ಕ್ರಮ ವಹಿಸುವಂತೆ ಪೌರಾಡಳಿತ ನಿರ್ದೇಶನಾಲಯದಿಂದ ಅಧಿಕೃತವಾಗಿ ಸೂಚನೆ ನೀಡಲಾಗಿದೆ. ಅದರಂತೆ ತೆರಿಗೆ ದರ ಪರಿಷ್ಕರಣೆ ಮಾಡುವ ಪ್ರಸ್ತಾವನೆಯನ್ನು ಆಯುಕ್ತರು ಸಲ್ಲಿಸಿದ್ದಾರೆ.ವಾಸ್ತವವಾಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಕಟ್ಟಡಗಳು ಮತ್ತು ನಿವೇಶನಗಳಿಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ಶೇ. 15 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಬೇಕೆಂದು ಇದ್ದ ನಿಯಮಗಳ ಅನ್ವಯ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕಟ್ಟಡಗಳು ಮತ್ತು ನಿವೇಶನಗಳಿಗೆ ಈಗಾಗಲೇ 2020 -21 ನೇ ಸಾಲಿನಲ್ಲಿ 3 ವರ್ಷಗಳಿಗೆ ಅಂದರೆ 2020 -21, 2021 -22, 2022 -23 ನೇ ಸಾಲಿಗೆ ಅನ್ವಯವಾಗುವಂತೆ ಶೇ. 15 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಿ ತೆರಿಗೆ ವಸೂಲಿ ಮಾಡಲಾಗುತ್ತಿದೆ ಮನವಿಯಲ್ಲಿ ತಿಳಿಸಲಾಗಿದೆ.

ಅಲ್ಲದೇ, 2021 -22 ಕ್ಕೆ ಜಾರಿಗೆ ಬಂದ ಹೊಸ ನಿಯಮದಂತೆ ಆ ವರ್ಷದಲ್ಲಿಯೂ ಸಾರ್ವಜನಿಕರಿಗೆ ತೆರಿಗೆ ಮೊತ್ತ ಹೆಚ್ಚಾಗಿರುತ್ತದೆ. ಪ್ರಸ್ತುತ ವರ್ಷವನ್ನು ಒಳಗೊಂಡಂತೆ ಈಗಾಗಲೇ ಹೆಚ್ಚುವರಿ ಮಾಡಲಾದ ತೆರಿಗೆ ದರ ಹೆಚ್ಚಳವಾಗುತ್ತಿರುವುದರಿಂದ ಪೌರಾಡಳಿತ ನಿರ್ದೇಶಕರ ಪತ್ರದ ಸೂಚನೆಯನ್ವಯ ತೆರಿಗೆ ದರ ಹೆಚ್ಚಿಗೆ ಮಾಡಿದಲ್ಲಿ ಕೋವಿಡ್ ಕಾರಣದಿಂದಾಗಿ ಈಗಾಗಲೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ. ಅಲ್ಲದೇ, ಹಿಂದೆ ಇದ್ದ ನಿಯಮಗಳ ಅಡಿಯಲ್ಲಿ ಈಗಾಗಲೇ ಶೇ. 15 ರಷ್ಟು ಆಸ್ತಿ ತೆರಿಗೆ ಹೆಚ್ಚಳವಾಗಿರುವ 2022 -23 ನೇ ಸಾಲಿಗೆ ಪುನಹ ಹೊಸ ನಿಯಮದ ಹೆಸರಿನಲ್ಲಿ ಕನಿಷ್ಠ ಶೇ. 3 ರಿಂದ ಶೇ. 5 ರಷ್ಟು ಆಸ್ತಿ ತೆರಿಗೆ ದರ ಪರಿಷ್ಕರಣೆ ಮಾಡುವುದು ಸಮಂಜಸವಾದುದಲ್ಲ. ಆದ್ದರಿಂದ ಸಾರ್ವಜನಿಕರ ಹಿತದೃಷ್ಠಿಯಿಂದ ಆಸ್ತಿ ತೆರಿಗೆ ದರ ಹೆಚ್ಚಳದ ಪ್ರಸ್ತಾವನೆ ಕೈಬಿಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ನಗರ ಬಿಜೆಪಿ ಅಧ್ಯಕ್ಷ ಎನ್. ಜಗದೀಶ್, ಆಡಳಿತ ಪಕ್ಷದ ಸದಸ್ಯರಾದ ಎಸ್. ಜ್ಞಾನೇಶ್ವರ್, ಸುರೇಖಾ ಮುರಳೀಧರ್, ಲತಾ ಗಣೇಶ್, ಯು.ಹೆಚ್. ವಿಶ್ವನಾಥ್, ಅನಿತಾ ರವಿಶಂಕರ್, ಪ್ರಭು, ಲಕ್ಷ್ಮಿ,  ಎಸ್.ಆರ್. ಸುರೇಶ್, ಇನ್ನಿತರರು ಇದ್ದ

ವರದಿ ಮಂಜುನಾಥ್ ಶೆಟ್ಟಿ…