ಶಿವಮೊಗ್ಗ : ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ರಾಷ್ಟ್ರೀಯ ಶಿಕ್ಷಣ ಸಮಿತಿಯ ಘನತೆಯನ್ನು ಮತ್ತಷ್ಟು ಎತ್ತಿಹಿಡಿಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಎನ್ಇಎಸ್ ನೂತನ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಹೇಳಿದರು.
ಇಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಛೇರಿ ಆವರಣದಲ್ಲಿರುವ ಎಸ್.ಆರ್.ನಾಗಪ್ಪಶೆಟ್ಟಿಯವರ ಪ್ರತಿಮೆಯ ಮುಂಭಾಗ ನೂತನ ಪಧಾದಿಕಾರಿಗಳ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಲೆನಾಡಿನ ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿರುವ ಎನ್ಇಎಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಿರಿಯರ ಸೇವೆ ಅನನ್ಯವಾಗಿದ್ದು ಅವರೆಲ್ಲರ ಆದರ್ಶಯುತ ಗುಣಗಳು ನಮಗೆ ಸದಾ ಮಾರ್ಗದರ್ಶಕ.
ಸಂಘಟನೆಯ ಯಶಸ್ಸಿಗೆ ಜ್ಞಾನ, ತಾಳ್ಮೆ ಮತ್ತು ಜಾಣ್ಮೆ ಅವಶ್ಯಕ ವಿಷಯಗಳಾಗಿದ್ದು ಪರಿಣಾಮಕಾರಿ ಅನುಷ್ಠಾನದ ಮೂಲಕ ಸಂಸ್ಥೆಯನ್ನು ಮತ್ತಷ್ಟು ಉನ್ನತಿಕರಣಗೊಳಿಸಲು ಸಾಧ್ಯ.
ಮೂಲತಃ ತೀರ್ಥಹಳ್ಳಿ ತಾಲ್ಲೂಕಿನವನಾದ ನನಗೆ ಸಿಕ್ಕ ಈ ಅವಕಾಶಕ್ಕಾಗಿ ಇಡೀ ತಾಲ್ಲೂಕಿನ ಪರವಾಗಿ ಸಂಸ್ಥೆಯ ಎಲ್ಲಾ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ ನೂತನ ಅಧ್ಯಕ್ಷರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ವೇಳೆ ನೂತನ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ, ಖಜಾಂಚಿಗಳಾದ ಡಿ.ಜಿ.ರಮೇಶ್, ನಿರ್ದೇಶಕರಾದ ಡಿ.ಎಸ್.ಅರುಣ್, ಎಂ.ಎಸ್.ಅನಂತದತ್ತ, ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎನ್.ಟಿ.ನಾರಾಯಣರಾವ್, ಎಸ್.ಮಾಧುರಾವ್, ಮೈಲಾರಪ್ಪ, ಎಂ.ಜಿ.ರಾಮಚಂದ್ರಮೂರ್ತಿ, ಹೆಚ್.ಸಿ.ಶಿವಕುಮಾರ್, ಸೀತಾಲಕ್ಷ್ಮೀ, ಸುಧೀರ್.ಜಿ.ಎನ್ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕುಲಸಚಿವರಾದ ಪ್ರೊ. ಹೂವಯ್ಯಗೌಡ, ಸಹಾಯಕ ಕುಲಸಚಿವರಾದ ಪ್ರೊ.ಹರಿಯಪ್ಪ ಸೇರಿದಂತೆ ಅಜೀವ ಸದಸ್ಯರು ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಎನ್ಇಎಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.