ಶಿವಮೊಗ್ಗ ನಗರದ ಆನಂದ್ ರಾವ್ ಬಡಾವಣೆಯ ಶ್ರೀ ವೀರ ಕೇಸರಿ ಹನುಮಾನ್ ಸೇವಾ ಸಂಘ (ರಿ) ವತಿಯಿಂದ ನಿನ್ನೆ ಹಮ್ಮಿಕೊಂಡಿದ್ದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಗುದ್ದಲಿಪೂಜೆ ಕಾರ್ಯಕ್ರಮವನ್ನು KSSIDC ಉಪಾಧ್ಯಕ್ಷರಾದ ಎಸ್ ದತ್ತಾತ್ರಿ ಯವರು ನೆರವೇರಿಸಿದರು.
ಈ ಸಂಧರ್ಭದಲ್ಲಿ 27ನೇ ವಾರ್ಡ್ ನ ಕಾರ್ಪೊರೇಟರ್ ಶ್ರೀ ವಿಶ್ವನಾಥ್, ವಾರ್ಡ್ ಅಧ್ಯಕ್ಷರಾದ ರವಿ, ಶ್ರೀ ವೀರಕೇಸರಿ ಹನುಮಾನ್ ಸೇವಾ ಸಂಘದ ಗೌರವಾಧ್ಯಕ್ಷರಾದ ಎಂ.ಶಂಕರ್, ಅಧ್ಯಕ್ಷರಾದ ಶಿವಾಜಿ ರಾವ್, ಉಪಾಧ್ಯಕ್ಷರಾದ ರಾಜು, ಕಾರ್ಯದರ್ಶಿಗಳಾದ ಶ್ರೀ ಪ್ರಭಾಕರ್ ಸೇರಿದಂತೆ ಇತರ ಪದಾಧಿಕಾರಿಗಳು, ಸ್ಥಳಿಯರು ಉಪಸ್ಥಿತರಿದ್ದರು.