ದಿನಾಂಕಃ-02-04-2022 ರಂದು ಮದ್ಯಾಹ್ನ ಮಾಲತೇಶ್ ನಾಯ್ಕ, ಕೊಮ್ಮಾನಾಳ್ ಗ್ರಾಮ ಶಿವಮೊಗ್ಗ ಮತ್ತು ಉಮೇಶ್, ಬನ್ನಿಕೆರೆ ಗ್ರಾಮ ಶಿವಮೊಗ್ಗ ರವರುಗಳು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಮನೆ ರಸ್ತೆ ಜಂಬ್ಬಣ್ಣ ರೈಸ್ ಮಿಲ್ ಹತ್ತಿರ ಖಾಲಿ ಜಾಗದಲ್ಲಿ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿಎಸ್ಐ ದೊಡ್ಡಪೇಟೆ ಮತ್ತು ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಗಳಾದ 1)ಉಮೇಶನಾಯ್ಕ, 48 ವರ್ಷ, ಬನ್ನೀಕೆರೆ ಗ್ರಾಮ ಶಿವಮೊಗ್ಗ 2)ನಿತಿನ್, 23 ವರ್ಷ, ನವುಲೆ, ಶಿವಮೊಗ್ಗ, 3)ರಾಹಿಲ್ ಖಾನ್, 23 ವರ್ಷ, ಬಾಪೂಜಿ ನಗರ, ಶಿವಮೊಗ್ಗ, 4)ಶ್ರೇಯಸ್, 25 ವರ್ಷ, ಹನುಮಂತನಗರ,ಶಿವಮೊಗ್ಗ, 5)ನಿತಿನ್ ಕುಮಾರ್, 26 ವರ್ಷ, ಹನುಮಂತನಗರ, ಶಿವಮೊಗ್ಗ ರವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 70,000/- ರೂ ಗಳ ಒಟ್ಟು 1 ಕೆಜಿ 100 ಗ್ರಾಂ ತೂಕದ ಒಣ ಗಾಂಜಾ, ರೂ 3,670/- ನಗದು ಮತ್ತು 01 ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಂಡು ಗುನ್ನೆ ಸಂಖ್ಯೆ 0160/2022 ಕಲಂ 20(b),8(c),20(ii)(B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.