ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ರಾಷ್ಟ್ರೀಯ ಸಮ್ಮೇಳನವು ಇತ್ತೀಚೆಗೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನಲ್ಲಿ ನಡೆಯಿತು.
ಈ ಸಮ್ಮೇಳನದಲ್ಲಿ ನಮ್ಮ ಶಿವಮೊಗ್ಗ ನಗರದ, ಪ್ರಪಂಚದ ಪ್ರಪ್ರಥಮ ಮಹಿಳಾ ಘಟಕ ಎಂಬ ಹೆಗ್ಗಳಿಕೆಯ ಶಿವಮೊಗ್ಗ ಭಾವನಾ ಲೀಜನ್ ಘಟಕವು ಹಲವಾರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತು.





- ಔಟ್ ಸ್ಟ್ಯಾಂಡಿಂಗ್ ನ್ಯೂ ಲೀಜನ್ – ವಿನ್ನರ್
- ಆಲ್ ಲೇಡೀಸ್ ಸೆಂಚುರಿಯನ್ ನ್ಯೂ ಲೀಜನ್ – ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ (ಗ್ರೋತ್ ಅಂಡ್ ಡೆವಲಪ್ಮೆಂಟ್) ಸಾಧನೆಗಾಗಿ ಪ್ರಶಸ್ತಿ.
3. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್
ಗ್ರೋತ್ ಬೂಸ್ಟರ್ ಪ್ರಶಸ್ತಿ.
- ಸಾಂಸ್ಕೃತಿಕ ಕಲಾ ಸ್ಪರ್ಧಾ ವಿಭಾಗ ಪ್ರಥಮ ಬಹುಮಾನ..
(5000 ನಗದು) - ಸಮೇಳನದಲ್ಲಿ ಹೆಚ್ಚು ಸದಸ್ಯರ ನೋಂದಣಿ ಹಾಗೂ ಪಾಲ್ಗೊಳ್ಳುವಿಕೆ ದ್ವಿತೀಯ ಪ್ರಶಸ್ತಿ.
- 105 ಸದಸ್ಯತ್ವಕ್ಕಾಗಿ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಶೆಟ್ಟಿರವರಿಗೆ ರಾಷ್ಟ್ರೀಯ ಸಂಯೋಜಕರಾದ ನವೀನ್ ಅಮೀನ್ ರವರಿಂದ ವಿಶೇಷ ಪುರಸ್ಕಾರ.



ಹೀಗೆ ಹಲವಾರು ರಾಷ್ಟ್ರೀಯ ಪ್ರಶಸ್ತಿಗಳನ್ನು ಹೊತ್ತುತಂದ ಭಾವನಾ ಲೀಜನ್ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸಂಭ್ರಮಾಚರಣೆ ಹಾಗೂ ಸದಸ್ಯರಿಂದ ಅನುಭವ ಹಂಚಿಕೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಹಿರಿಯ ಉಪಾಧ್ಯಾಯರಾದ ಶ್ರೀಯುತ ಎಸ್ .ವಿ. ಶಾಸ್ತ್ರಿಯವರನ್ನು ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಷ್ಪ ಶೆಟ್ಟಿಯವರು ವಹಿಸಿದ್ದರು ಕಾರ್ಯದರ್ಶಿ ಸುರೇಖ ಮುರಳೀಧರ್, ಸಹಕಾರ್ಯದರ್ಶಿ ಮೃದುಲ ಮಂಜುನಾಥ್, ಉಪಾಧ್ಯಕ್ಷೆ ಹೇಮಾ ಅಪ್ಪಾಜಿ , ಮಾಲ ರಾಮಪ್ಪ, ಪ್ರತಿಮಾ ಡಾಕಪ್ಪ ಗೌಡ, ಲಲಿತಾ ಗುರುಮೂರ್ತಿ, ರಂಜನಿ ದತ್ತಾತ್ರಿ , ಶಾಂತಾ ಶೆಟ್ಟಿ, ಜಯಲಕ್ಷ್ಮಿ ಚಂದ್ರಹಾಸ, ಮಧುಮತಿ, ಶೋಭ ಸತ್ಯನಾರಾಯಣ್ ಹಾಗೂ ಇನ್ನೂ ಅನೇಕ ಸದಸ್ಯರು ಉಪಸ್ಥಿತರಿದ್ದರು.