ಶಿವಮೊಗ್ಗ: ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ನಿಯಮಿತದ 7ನೇ ಶಾಖೆಯ ಉದ್ಘಾಟನೆಯು ದಿನಾಂಕ ಏ. 11 ರ ಸೋಮವಾರ ಬೆಳಿಗ್ಗೆ 10.30 ಕ್ಕೆ ರಟ್ಟಿಹಳ್ಳಿಯ ತಾವರಗಿ ರಸ್ತೆಯ ಭಗತ್ ಸಿಂಗ್ ಸರ್ಕಲ್ ನ ಸಿ.ಟಿ. ಪಾಟೀಲ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.

ರಟ್ಟಿಹಳ್ಳಿಯ ಕಬ್ಬಿಣ ಕಂಥಿಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸಲಿದ್ದು, ಕೃಷಿ ಸಚಿವ ಬಿ.ಸಿ. ಪಾಟೀಲ್ ಶಾಖೆ ಉದ್ಘಾಟಿಸುವರು. ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಮಹಾಬಲೇಶ್ವರ ಹೆಗೆಡೆ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ ಬಣಕಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ರಾಜ್ಯ ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಶಂಭು ಲಿಂಗನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ, ಶಕ್ತಿ ಇನ್ಫ್ರಾಡೆವಲಪರ್ಸ್ ನ ವ್ಯವಸ್ಥಾಪಕ ಡಾ.ವಿ.ಎಂ.ಶಶಿಕುಮಾರ್ ಮತ್ತಿತರರು ಭಾಗವಹಿಸುವರು.

ತೀರ್ಥಹಳ್ಳಿ ತಾಲೂಕಿನಲ್ಲಿ 2008 ರಲ್ಲಿ ೫.೪೦ ಲಕ್ಷ ರೂ.ಗಳಲ್ಲಿ ಪ್ರಾರಂಭಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘವು 2013 ರವರೆಗೆ ತೀರ್ಥಹಳ್ಳಿ ತಾಲೂಕಿನಲ್ಲಿ ಮಾತ್ರ ಕಾರ್ಯನಿರ್ವಹಿಸಿ 2015 ರಲ್ಲಿ ಶಿಕ್ಷಕರ ಸೌಹಾರ್ದ ಸಹಕಾರಿಯಾಗಿ 5 ಜಿಲ್ಲೆಗಳಿಗೆ ವಿಸ್ತಾರಗೊಂಡಿತು. ತೀರ್ಥಹಳ್ಳಿ, ಶಿವಮೊಗ್ಗ, ಹೊನ್ನಾಳಿ, ಸಾಗರ, ಸಿದ್ದಾಪುರ, ಶಿರಸಿಯಲ್ಲಿ ಶಾಖೆ ಹೊಂದಿರುವ ನಿಯಮಿತವು ಏಪ್ರಿಲ್ 11 ರಂದು ರಟ್ಟೇಹಳ್ಳಿಯಲ್ಲಿ ತನ್ನ 7ನೇ ಶಾಖೆ ಪ್ರಾರಂಭಿಸುತ್ತಿದೆ.ಕಳೆದೆರೆಡು ವರ್ಷಗಳ ಕೋವಿಡ್ ಸಂಕಷ್ಟ ಕಾಲದಲ್ಲಿಯೂ ಸಹ ಲಾಭಗಳಿಸಿ, ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟು 323 ಕೋಟಿ ವಾರ್ಷಿಕ ವಹಿವಾಟನ್ನು ಹೊಂದಿ, ಸಹಕಾರಿಯು 54,58,936 ರೂ. ಲಾಭ ಗಳಿಸಿದೆ ಎಂದು ನಿಯಮಿತದ ಅಧ್ಯಕ್ಷ ಮಹಾಬಲೇಶ್ವರ ಹೆಗೆಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…