ಶಿವಮೊಗ್ಗ ನಗರದಲ್ಲಿ ಏಪ್ರಿಲ್ 10 ರಂದು ಶ್ರೀರಾಮ ನವಮಿ ಮತ್ತು ಏಪ್ರಿಲ್ 14 ರಂದು ಮಹಾವೀರ ಜಯಂತಿ ಹಾಗೂ ಡಾ|| ಅಂಬೇಡ್ಕರ್ ಜಯಂತಿ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದ್ದು, ಮಾಂಸ ಮಾರಾಟ ಉದ್ದಿಮೆದಾರರು ಆಯಾ ದಿನಾಂಕಗಳಂದು ಮಾರಾಟ ಬಂದ್ ಮಾಡಿ ಸಹಕರಿಸಲು ಕೋರಲಾಗಿದೆ.
ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ತಿಳಿಸಿದ್ದಾರೆ.