ವಿಶ್ವ ಆರೋಗ್ಯ ದಿನದ ಪ್ರಯುಕ್ತ ಜೆಸಿಐ ಶಿವಮೊಗ್ಗ ಶರಾವತಿ ಸಂಸ್ಥೆ ಸವಳಂಗ ರಸ್ತೆಯಲ್ಲಿರುವ ಆಶಾಜ್ಯೋತಿ ಸ್ವಯಂಪ್ರೇರಿತ ರಕ್ತದಾನಿಗಳ ಕೇಂದ್ರದಾಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷರಾದ ಜ್ಯೋತಿ ಅರಳಪ್ಪ ಅವರು ಕೋವಿಡ್ ಪೆಂಡಮಿಕ್ ಸಮಯದಲ್ಲಿ ಜೀವದ ಹಂಗು ತೊರೆದು 24 ಗಂಟೆ ಸೇವೆಸಲ್ಲಿಸಿದ ವೈದ್ಯರು ಮತ್ತು ಸಿಬ್ಬಂದಿಗಳ ಅಮೂಲ್ಯವಾದ ಸೇವೆಯನ್ನು ನೆನಪಿಸಿಕೊಳ್ಳುವ ಮೂಲಕ ಆರೋಗ್ಯ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಪೂರ್ವ ಅಧ್ಯಕ್ಷರಾದ ಗಾರ ಶ್ರೀನಿವಾಸ್ ಅವರು ತುರ್ತು ಸಂದರ್ಭದಲ್ಲಿ ರಕ್ತದ ಮಹತ್ವದ ಬಗ್ಗೆ ಮಾತನಾಡಿದರು.
ಆಶಾಜ್ಯೋತಿ ಸ್ವಯಂಪ್ರೇರಿತ ರಕ್ತದಾನಿಗಳ ಕೇಂದ್ರದ ಮುಖ್ಯಸ್ಥರಾದ ಪ್ರಯೋಗಶಾಲಾ ತಜ್ಞ ಸ್ವಾಮಿ ಅವರು ಜೆಸಿಐ ಸಂಸ್ಥೆಯ ಅಧಿಕಾರಿಗಳು ಸಿಬ್ಬಂದಿಗಳಿಗೆ ರಕ್ತನಿಧಿಯ ಕಾರ್ಯಚಟುವಟಿಕೆಗಳ ಬಗ್ಗೆ ವಿಸ್ತಾರವಾಗಿ ವಿವರಣೆ ನೀಡಿದರು.

ರಕ್ತದಾನಿ, ಆರೋಗ್ಯವಂತ ರಕ್ತದಾನಿಯ ಆಯ್ಕೆ, ವೈದ್ಯಕೀಯ ಪರೀಕ್ಷೆ, ರಕ್ತ ಹೇಗೆ ಪಡೆಯುತ್ತಾರೆ, ದಾನಿಗಳಿಂದ ರಕ್ತ ಪಡೆದು, ವಿವಿಧ ಪರೀಕ್ಷೆಗೆ ಒಳಪಡಿಸಿ, ನಂತರ ಸಂರಕ್ಷಿಸಿ ಅವಶ್ಯಕತೆ ಇದ್ದಾಗ, ಯಾವ ರೀತಿ ರೋಗಿಗಳಿಗೆ ಸೂಕ್ತ ಸಮಯದಲ್ಲಿ ರಕ್ತ ತಲುಪುತ್ತದೆ ಎಂಬ ಮಾಹಿತಿ ನೀಡಿದರು. ಜೆಸಿ ಸದಸ್ಯರಿಗೆ ಇದು ಒಂದು ವಿಶೇಷ ತರಬೇತಿ ಆಗಿತ್ತು.
ವಿಶ್ವ ಆರೋಗ್ಯ ದಿನದ ಅಂಗವಾಗಿ ಅಧ್ಯಕ್ಷರಾದ ಸೌಮ್ಯ ಅರಳಪ್ಪ, ಕಾರ್ಯದರ್ಶಿಗಳಾದ ಮಮತಾ ಶಿವಣ್ಣ , ಶೋಭಾ ಸತೀಶ್, ಇತರ ಸದಸ್ಯರು “Need Blood Call JCI” ಪೋಸ್ಟರ್ಗಳನ್ನು ರಕ್ತನಿಧಿ ಆರೋಗ್ಯ ಕೇಂದ್ರಗಳಲ್ಲಿ ಪೋಸ್ಟರ್ ಹಚ್ಚುವ ಮೂಲಕ. ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇದ್ದಾಗ ಜೆಸಿಐ ಶಿವಮೊಗ್ಗ ಶರಾವತಿ ಸಂಸ್ಥೆ ಸಾರ್ವಜನಿಕರ ಪರವಾಗಿ ನಿಲ್ಲುತ್ತದೆ ಎಂಬ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಸಿ ಸದಸ್ಯರಾದ ಜೆಸಿ ಸಿಗ್ಬದುಲ, ಜೆಸಿ ಅನಿಲ್, ಜೆಸಿ ಮಧುಮತಿ, ಜೆಸಿ ನವೀನ್ ತಲಾರಿ, ರಕ್ತನಿಧಿಯ ರಾಜು ಇತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…