
ಶಿವಮೊಗ್ಗ: ಸೀಳು ತುಟಿ ಮತ್ತು ಸೀಳು ಅಂಗಳ ಪೀಡಿತರನ್ನು ಗುರುತಿಸಿ ಆಯ್ಕೆಯಾದ ವ್ಯಕ್ತಿಗಳನ್ನು ಭಗವಾನ್ ಮಹಾವೀರ ಆಸ್ಪತ್ರೆಯ ಸಿಬ್ಬಂದಿ ಬೆಂಗಳೂರಿಗೆ ಕರೆತಂದು ಉಚಿತ ಶಸ್ತç ಚಿಕಿತ್ಸೆ ಮಾಡಿ ಮತ್ತೆ ಮರಳಿ ಸ್ಥಳಗಳಿಗೆ ತಲುಪಿಸುತ್ತೇವೆ ಎಂದು ಭಗವಾನ್ ಮಹಾವೀರ ಆಸ್ಪತ್ರೆಯ ವೈದ್ಯ ಡಾ. ಸುಚಿತ್ ಹೇಳಿದರು.



ರಾಜೇಂದ್ರನಗರದ ರೋಟರಿ ಶಾಲೆ ಆವರಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ, ಇನ್ನರ್‌ವ್ಹೀಲ್ ಕ್ಲಬ್, ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ ಮತ್ತು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಯುಕ್ತ ಆಶ್ರಯದಿಂದ ಆಯೋಜಿಸಿದ್ದ “ಸೀಳು ತುಟಿ ಮತ್ತು ಸೀಳು ಅಂಗಳ ಪೀಡಿತರನ್ನು ಗುರುತಿಸುವಿಕೆ ಮತ್ತು ಉಚಿತ ಶಸ್ತç ಚಿಕಿತ್ಸಾ ಶಿಬಿರ”ದಲ್ಲಿ ಮಾತನಾಡಿದರು.
ಸೀಳು ತುಟಿ ಮತ್ತು ಸೀಳು ಅಂಗಳ ಬರುವುದು, ಗರ್ಭಿಣಿಯರಿಗೆ ವೈರಲ್ ಇನ್ಫೆಕ್ಷನ್, ಮಗುವಿಗೆ ತೊಂದರೆ ಆಗುವುದು, ಪೂರ್ವಜರ ಜನರಿಗೆ ಸೀಳುತುಟಿ ಇರುವುದು ಹೀಗೆ ವಿವಿಧ ಕಾರಣಗಳಿಗೆ ಬರುತ್ತದೆ. ಸೀಳು ತುಟಿ ಸಮಸ್ಯೆಯಿರುವವರಿಗೆ ಶಸ್ತç ಚಿಕಿತ್ಸೆ ಮಾಡಿ ಗುಣಪಡಿಸಬಹುದು. ಸೀಳು ಅಂಗಳ ಪೀಡಿತರಿಗೆ ಮಾತನಾಡುವುದು ಕಷ್ಟವಾಗುತ್ತದೆ. ಅದನ್ನು ಪರೀಕ್ಷೆ ಮಾಡಿ ಸ್ಪೀಚ್ ಥೆರಪಿ ಮುಖಾಂತರ ಗುಣಪಡಿಸುತ್ತೇವೆ. ಶಿವಮೊಗ್ಗ ನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿAದ 25 ಜನರು ರೋಗಿಗಳು ಭಾಗವಹಿಸಿ ಬೆಂಗಳೂರಿನಲ್ಲಿ ಉಚಿತವಾಗಿ ಶಸ್ತç ಚಿಕಿತ್ಸೆ ಮಾಡಿ ರೋಗಿಗಳನ್ನು ತಮ್ಮ ಊರಿಗೆ ಕರೆತರಲಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ ಪಿಆರ್‌ಒ ಮನೋಹರ್ ಮಾತನಾಡಿ, ಸೀಳು ತುಟಿ ಮತ್ತು ಸೀಳು ಅಂಗಡಿ ಪೀಡಿತರನ್ನು ಗುರುತಿಸುವಿಕೆ ಹಾಗೂ ಉಚಿತ ಶಸ್ತç ಚಿಕಿತ್ಸೆ ಮಾಡಿಸುವ ಆಶಯದಿಂದ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ ಬೆಂಗಳೂರು ವತಿಯಿಂದ ಆರು ವರ್ಷಗಳಿಂದ ಶಿಬಿರ ನಡೆಸಲಾಗುತ್ತಿದೆ. ಶಿವಮೊಗ್ಗದ ಅನೇಕ ಭಾಗಗಳಿಂದ ರೋಗಿಗಳು ಬಂದಿದ್ದು, ಎಲ್ಲರಿಗೂ ಪರೀಕ್ಷೆ ಮಾಡಿ ಅವಶ್ಯಕತೆಯಿರುವವರಿಗೆ ಶಸ್ತç ಚಿಕಿತ್ಸೆಗೆ ಆಯ್ಕೆ ಮಾಡಲಾಗುವುದು ಎಂದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ ಕದಂ ಮಾತನಾಡಿ, ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ದಶಕಗಳಿಂದ ಸೀಳುತುಟಿ ಶಸ್ತç ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ಇನ್ನೂ ಅನೇಕ ಸಮಸ್ಯೆಗಳಿಗೆ ಆರೋಗ್ಯ ಶಿಬಿರಗಳು ನಡೆಸುತ್ತಿದ್ದೇವೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಸಮುದಾಯ ಸೇವೆಗಳ ನಿರ್ದೇಶಕ ಜಿ.ವಿಜಯ್ ಕುಮಾರ್, ನೇಚರ್ ಬೆಲ್ ರೆಮಿಡೀಸ್ ಆಸ್ಪತ್ರೆಯ ಡಾ. ಹನುಮಂತಪ್ಪ ಸುಂಕಾಪುರ್ , ಇನ್ನರ್‌ವ್ಹೀಲ್ ಅಧ್ಯಕ್ಷೆ ಜಯಂತಿ ವಾಲಿ, ಕಾರ್ಯದರ್ಶಿ ಬಿಂದು ವಿಜಯ್ ಕುಮಾರ್ ಉಪಸ್ಥಿತರಿದ್ದರು.