ಬಿಜೆಪಿಯ ಹಿರಿಯ ಸಚಿವ ಕೆ ಎಸ್ ಈಶ್ವರಪ್ಪ ಅವರು ಗುತ್ತಿಗೆದಾರನಿಂದ 40 ಪರ್ಸೆಂಟ್ ಕಮಿಷನ್ ಗೆ ಬೇಡಿಕೆಯಿಟ್ಟು ಅವರದ್ದೇ ಪಕ್ಷದ ಮುಖಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣವಾಗಿರುವುದನ್ನು ಶಿವಮೊಗ್ಗ ಜಿಲ್ಲಾ NSUI ತೀವ್ರವಾಗಿ ಖಂಡಿಸುತ್ತದೆ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಬಿಜೆಪಿಯ ಮುಖಂಡರಾಗಿದ್ದು ಕೆಲ ದಿನಗಳ ಹಿಂದೆಯೇ ಕೆಎಸ್ ಈಶ್ವರಪ್ಪನವರು ಗುತ್ತಿಗೆ ಬಿಲ್ ಪಾಸ್ ಮಾಡಲು 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರಿಗೆ ಅವರಿಗೆ ಪತ್ರ ಬರೆದಿದ್ದರು ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ತನಿಖೆ ನಡೆಸಿದ್ದಾರೆ ಸಂತೋಷ್ ಆತ್ಮಹತ್ಯೆ ಆಗುತ್ತಿರಲಿಲ್ಲ
ಗುತ್ತಿಗೆದಾರ ಸಂತೋಷ್ ಪಾಟೀಲ್ ತಮ್ಮ ಸಾವಿಗೆ ಈಶ್ವರಪ್ಪ ಅವರ ನೇರ ಕಾರಣ ಎಂದು ವಾಟ್ಸಪ್ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಹಾಗಾಗಿ ಕೂಡಲೇ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಸಂತೋಷ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು
ಸಂತೋಷ್ ಪಾಟೀಲ್ ಬಿಜೆಪಿಯ ಮುಖಂಡರಾಗಿದ್ದರು ಅವರಿಂದಲೇ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂದರೆ ಬೇರೆ ಪಕ್ಷದ ಕಾರ್ಯಕರ್ತರು ಅಥವಾ ಸಾಮಾನ್ಯ ಗುತ್ತಿಗೆದಾರರ ಪಾಡೇನು ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಬೇಕು.

ಇಂದು ಶಿವಮೊಗ್ಗ ಜಿಲ್ಲಾ ಎನ್ಎಸ್ಯುಐ ವತಿಯಿಂದ ಪಂಜಿನ ಮೆರವಣಿಗೆ ನಡೆಸಿ ಈಶ್ವರಪ್ಪ ಅವರ ಕಚೇರಿಗೆ ಮುತ್ತಿಗೆ ಹಾಕಲಾಗುತ್ತಿದೆ ಕೂಡಲೇ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಇದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಈ ಮೂಲಕ ಎಚ್ಚರ ಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್ ಪ್ರಸನ್ನಕುಮಾರ್,ಕಲಗೋಡು ರತ್ನಾಕರ್ ,ಎನ್ ರಮೇಶ್,ಪಲ್ಲವಿ ,YHನಾಗರಾಜ್ , ಮಹಾನಗರ ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ ,ಯಮುನಾ ರಂಗೇಗೌಡ ,ಮೆಹಕ್ ಶರೀಫ್ ,ಅಲ್ಪಸಂಖ್ಯಾತ ಕಾಂಗ್ರೆಸ್ ಮಹಮ್ಮದ್ ನಿಹಾಲ್,ಚಿರಂಜೀವಿ ಬಾಬು ಯುವ ಕಾಂಗ್ರೆಸ್ ಮುಖಂಡರಾದ ಮಧುಸೂದನ್,ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್,NSUI ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್, ನಗರ ಅಧ್ಯಕ್ಷರಾದ ಚರಣ್ ಕಾರ್ಯಾಧ್ಯಕ್ಷರಾದ ರವಿಕಾಟಿಕೆರೆ , ಅಕ್ಬರ್, ಚಂದ್ರುಜಿ ರಾವ್ ,ರವಿ,ವಿಕ್ರಂ ,ಮಲವಗೊಪ್ಪ ಶಿವು , ಕಿರಣ್ ,ವಿಶಾಲ್ ,ಸಂಜಯ್, ಮಂಜು, ಆಕಾಶ್ ಹಿತೇಶ್ ,ಪ್ರತೀಕ್ ,ಬಸವರಾಜ್ ಕಿರಣ್, ಜಗದೀಶ್,ಆಸಿಫ್ ಮಸೂದ್ ಮುಂತಾದವರು ಪಾಲ್ಗೊಂಡಿದ್ದರು.

ವರದಿ ಮಂಜುನಾಥ್ ಶೆಟ್ಟಿ…