ಸಂವಿಧಾನ ಶಿಲ್ಪಿ ಶೋಷಿತರ ಧ್ವನಿಯಾದ ಡಾ|| ಭೀಮ್‌ರಾಮ್ ರಾಮ್‌ದೇವ್ ಅಂಬೇಡ್ಕರ್‌ರವರ ತತ್ವ, ಆದರ್ಶ ಗುಣಗಳು ಇಂದಿಗೂ ಅಜರಾಮರ. ಈ ದೇಶದಲ್ಲಿ ಪ್ರಚಲಿತ ಇದ್ದ ಅಸಮಾನತೆ, ಅನ್ಯಾಯಗಳ ವಿರುದ್ಧ ಸಿಡಿದ್ದೇದ್ದು, ಸಮಾಜಿಕ ನ್ಯಾಯಕ್ಕಾಗಿ, ಸಮಾನತೆಗಾಗಿ ಹೋರಾಡಿದ ಮಹಾನ್ ವ್ಯಕ್ತಿ ಡಾ|| ಬಿ.ಆರ್.ಅಂಬೇಡ್ಕರ್‌ರವರು ಎಲ್ಲರ ಜನಮಾನಸದಲ್ಲಿ ಉಳಿಯುವಂತಹ ದೀಮಂತ ನಾಯಕರಾಗಿದ್ದಾರೆ ಎಂದು ನಿವೃತ್ತ ಡಿ.ಪಿ.ಐ. ಹಾಗೂ ರೋಟರಿ ಪೂರ್ವ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಚAದ್ರಶೇಖರಯ್ಯ ನುಡಿದರು. ಅವರು ಇಂದು ಬೆಳಿಗ್ಗೆ ರೋಟರಿ ಪೂರ್ವ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ಡಾ|| ಬಿ.ಆರ್.ಅಂಬೇಡ್ಕರ್‌ರವರ ೧೩೧ನೇ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಂಬೇಡ್ಕರ್‌ರವರು ಸಂವಿಧಾನ ರಚನಾಸಮಿತಿಯ ಅಧ್ಯಕ್ಷರಾಗಿ ತಮ್ಮ ಅನುಭವ ಹಾಗೂ ಪ್ರತಿಭೆಯನ್ನು ಬಳಸಿಕೊಂಡು ಇತರೆ ದೇಶಗಳು ಅನುಕರಣೆ ಮಾಡಬಹುದಾದ ಅತ್ಯುತ್ತಮ ಸಂವಿಧಾನವನ್ನು ನೀಡಿದವರು.

ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಎಸ್.ಸಿ. ರಾಮಚಂದ್ರರವರು ಅಂಬೇಡ್ಕರವರ ಮಾರ್ಗದರ್ಶನ ಇಂದಿನ ಮಕ್ಕಳಿಗೆ ದಾರಿದೀಪವಾಗಿದೆ ಎಂದು ನುಡಿದರು. ಖಚಾಂಚಿಗಳಾದ ಜಿ.ವಿಜಯಕುಮಾರ್ ಮಾತನಾಡುತ್ತಾ ಅಂಬೇಡ್ಕರ್‌ರವರು ಹಿಂದು ಧರ್ಮದಲ್ಲಿರುವ ಜಾತಿ ಪದ್ದತಿ, ಅಸಮಾನತೆ ಹಾಗೂ ಅವಮಾನವೀಯತೆಗಳನ್ನು ನಿರ್ಮೂಲ ಮಾಡಿ ಸಹೋದರತೆಯನ್ನು ತರಲು ಪ್ರಯತ್ನಿಸಿದ ದಲಿತ ನಾಯಕ ಹಾಗೂ ಒಂದು ದೇಶ ಕಾನೂನಾತ್ಮಕವಾಗಿ, ಸಂವಿಧಾನತ್ಮಾಕವಾಗಿ ನಡೆಯಲು ಸಂವಿಧಾನ ಅತೀ ಮುಖ್ಯ ಇದನ್ನು ರಚಿಸಿದ ಡಾ|| ಬಿ.ಆರ್.ಅಂಬೇಡ್ಕರ್‌ರವರು ಇಂದಿಗೂ ಸಹ ಅಜರಾಮರ ಎಂದು ನುಡಿದರು.
ಸಮಾರಂಭದಲ್ಲಿ ಇನ್ನರ್‌ವೀಲ್ ಕಾರ್ಯದರ್ಶಿ ಬಿಂದುವಿಜಯಕುಮಾರ್, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪ್ಯಾದ್ಯಾಯಿನಿ ಶ್ರೀಮತಿ ಜಯಶೀಲಬಾಯಿ, ದೈಹಿಕ ಶಿಕ್ಷಕ ಮಹಾಬಲೇಶ್, ರಾಮು, ಬಸವರಾಜ್, ಇಂದ್ರಮ್ಮ, ಚಂದ್ರಕಲ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…