ರಕ್ತದಾನ ಮಾಡುವುದರಿಂದ ದೇಹ ಮನಸ್ಸು ಸದೃಢವಾಗುವುದರ ಜೊತೆಗೆ ನಮ್ಮ ದೇಹದಲ್ಲಿ ನಮಗೆ ತಿಳಿಯದೇ ಇರುವಂತಹ ಯಾವುದಾದರೂ ಕಾಯಿಲೆಗಳಿದ್ದರೆ ಅದು ರಕ್ತದಾನದಿಂದ ತಿಳಿಯುತ್ತದೆ. ರಕ್ತದಾನ ಒಂದು ಪವಿತ್ರವಾದ ಸಮಾಜ ಮುಖಿ ಕೆಲಸ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಸಹಕಾರ್ಯದರ್ಶಿ ಜಿ.ವಿಜಯಕುಮಾರ್ ನುಡಿದರು. ಅವರು ಇಂದು ಬೆಳಿಗ್ಗೆ ಸಂಜೀವಿನಿ ರಕ್ತನಿದಿಯಲ್ಲಿ ಲಯನ್ಸ್ ಕ್ಲಬ್ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ಜಿಲ್ಲೆಯಲ್ಲಿ ಶೇಕಡ ೫೦% ರಕ್ತ ಕೊರತೆ ಇದೆ, ಅದನ್ನು ನೀಗಿಸಲು ಯುಕವರು, ಸಾರ್ವಜನಿಕರು, ರಕ್ತದಾನಿಗಳು ಮುಂದಾಗಬೇಕು, ಸಕಾಲದಲ್ಲಿ ರಕ್ತ ಸಿಗದೆ ಸಾಕಷ್ಟು ಜನ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಲಯನ್ಸ್ ಸಹ್ಯಾದ್ರಿ ಸಂಸ್ಥೆ ಸಮಾಜಮುಖಿಯಾಗಿ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು ಇಂದು ಈ ಪವಿತ್ರವಾದ ಕಾರ್ಯ ಬಹಳ ಮಹತ್ತರವಾಗಿದೆ ಎಂದು ಅಭಿನಂದಿಸಿದರು. ೧೦೮ ಬಾರಿ ರಕ್ತದಾನ ಮಾಡಿದ ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಅಧ್ಯಕ್ಷರಾದ ಧರಣೇಂದ್ರ ದಿನಕರರವರು ರಕ್ತದಾನ ಮಹತ್ವವನ್ನು ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಶಿವಮೊಗ್ಗ ಸಹ್ಯಾದ್ರಿವತಿಯ ಅಧ್ಯಕ್ಷರಾದ ಶ್ರೀ ಪ್ರವೀಣ್‌ರಾಜ್‌ರವರು ಅಧ್ಯಕ್ಷತೆವಹಿಸಿ ರಕ್ತದಾನ ಮಾಡಿ ಮಾತನಾಡುತ್ತಾ ಇಂದು ನಾವು ಕೊಡುವ ಒಂದು ಯೂನಿಟ್ ರಕ್ತದಿಂದ ಮೂರು ಜನರ ಪ್ರಾಣ ಉಳಿಸಬಹುದಾಗಿದೆ. ಇತ್ತೀಚಿನ ವಿಶ್ವಆರೋಗ್ಯ ಸಂಸ್ಥೆಯ ಪ್ರಕಾರ ರಕ್ತದಾನ ಮಾಡುವುದರಿಂದ ಹೃದಯಘಾತ ಪ್ರಮಾಣ ಕಡಿಮೆ ಆಗುತ್ತದೆ. ರಕ್ತದಾನದಿಂದ ಏಕಾಗ್ರತೆ ಹೆಚ್ಚಾಗದಲ್ಲದೇ ಸದಾ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ ಅಲ್ಲದೇ ಬಹಳ ಮುಖ್ಯವಾಗಿ ನಮ್ಮ ದೇಹದಲ್ಲಿರುವ ಕೊಬ್ಬಿನ ಅಂಶ ಕಡಿಮೆ ಆಗಿ ಸದಾ ಆರೋಗ್ಯದಿಂದರಲು ಸಹಕಾರಿಯಾಗಿರುತ್ತದೆ ಆದ್ದರಿಂದ ಎಲ್ಲರೂ ರಕ್ತದಾನ ಮಾಡಿ ರಕ್ತದ ಕೊರತೆಯನ್ನು ನೀಗಿಸೋಣ ಎಂದು ಕರೆ ನೀಡಿದರು. ರಕ್ತದಾನ ಶಿಬಿರದಲ್ಲಿ ಲಯನ್ಸ್ ಕ್ಲಬ್ ಶಿವಮೊಗ್ಗ ಉಪಾಧ್ಯಕ್ಷ ವಿರೂಪಾಕ್ಷ ಎಸ್.ಡಿ. ಕಾರ್ಯದರ್ಶಿ ಶ್ರೀನಿಧಿ, ಖಚಾಂಚಿ ರೋಹಿತ್, ಸದಸ್ಯರಾದ ಸುಬ್ಬರಾವ್, ಮೋಹನ್, ಪೂಜ, ರೇಣುಕಾ, ದಿವ್ಯ, ಸಹನ, ಭೂಮಿಕ ಉಪಸ್ಥಿತರಿದ್ದರು.