ಶಿವಮೊಗ್ಗ: ನಗರದ ಶ್ರೀ ಕೃಷ್ಣರಾಜೇಂದ್ರ ನೀರು ಸರಬರಾಜು ಘಟಕಕ್ಕೆ ಇಂದು ಮೇಯರ್
ಸುನಿತಾ ಅಣ್ಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಾಗ ತಲೆದೋರುತ್ತಿರುವ ಹಿನ್ನೆಲೆಯಲ್ಲಿ
ಮಂಡ್ಲಿಯಲ್ಲಿರುವ ಸರಬರಾಜು ಘಟಕಕ್ಕೆ ಭೇಟಿ ನೀಡಿದ ಅವರು, ಮುಖ್ಯವಾಗಿ ಟಿ.ಸಿ.ಗಳು
ಸುಟ್ಟುಹೋಗುತ್ತಿರುವುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಒಂದು ವಾರದಿಂದ 3 ಟ್ರಾನ್ಸ್ ಫಾರ್ಮರಗಳು ಸುಟ್ಟು ಹೋಗಿದ್ದು, ನಗರದಲ್ಲಿ ಕುಡಿಯುವ
ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿತ್ತು. ಅಧಿಕಾರಿಗಳೊಂದಿಗೆ ಸಮಸ್ಯೆ
ಕುರಿತು ಮಾತನಾಡಿದ ಅವರು, ತಕ್ಷಣವೇ ಹೊಸ ಟಿ.ಸಿಗಳನ್ನು ಅಳವಡಿಸುವಂತೆ ಸೂಚನೆ
ನೀಡಿದರು. ಮೇಯರ್ ಸೂಚನೆ ಮೇರೆಗೆ ಟಿ.ಸಿ.ಗಳ ಅಳವಡಿಕೆಯ ಕಾರ್ಯ ಸಹ ಆರಂಭ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಜಗದೀಶ್, ಪಾಲಿಕೆ ಸದಸ್ಯರಾದ ರಾಹುಲ್ ಪಿ.
ಬಿದರೆ, ಪ್ರಭಾಕರ್ ಹಾಗೂ ಅಧಿಕಾರಿಗಳು ಇದ್ದರು.

ವರದಿ ಮಂಜುನಾಥ್ ಶೆಟ್ಟಿ…