ಶಿವಮೊಗ್ಗ ನಗರದಲ್ಲಿ ಹಲವು ಇಲಾಖೆಗಳಲ್ಲಿ ಸತತವಾಗಿ ಕಳೆದ ನಾಲ್ಕು ವರ್ಷಗಳಿಂದ ಬಗೆಹರಿಸಲಾಗದ ಸಮಸ್ಯೆಗಳಿದ್ದು ಇಲ್ಲಿನ ಆಡಳಿತ ವ್ಯವಸ್ಥೆಗ ನಾಗರಿಕರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ.
ಶಿವಮೊಗ್ಗ ನಗರದಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಫಲಾನುಭವಿಗಳಿಗೆ 1590 ಮನೆಗಳು ದಿನಾಂಕ 28-5- 2018ರಂದು ಅನುಮೋದನೆ ಗೊಂಡಿದ್ದು ಯೋಜನೆ ಪ್ರಕ್ರಿಯೆ ಪೂರ್ಣಗೊಳ್ಳಲು ಟೆಂಡರ್ ಅನುಮೋದನೆಗೊಂಡ ದಿನದಿಂದ ಎರಡು ವರ್ಷಗಳ ಅವಧಿಗೆ ನಿಗದಿಪಡಿಸಲಾಗಿತ್ತು. ಈ ಪ್ರಕ್ರಿಯೆ ಅಡಿಯಲ್ಲಿ ಒಟ್ಟು 800 ಮನೆಗಳ ಕಾಮಗಾರಿ ಪ್ರಾರಂಭವಾಗಿದ್ದು ಈ ಪೈಕಿ 350 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು 970 ಮನೆಗಳು ಪೂರ್ಣಗೊಂಡಿರುತ್ತದೆ ಇದಕ್ಕೆ ಮುಖ್ಯಕಾರಣ ಸರ್ಕಾರದಿಂದ ಹಣ ಬಿಡುಗಡೆ ಆಗದೆ ಇರುವುದು ಆಗಿರುತ್ತದೆ ಸರ್ಕಾರದಿಂದ ಮೂರು ಕೋಟಿ 20 ಲಕ್ಷ ಹಣ ಬಿಡುಗಡೆ ಆಗಬೇಕಾಗುತ್ತದೆ ಫಲಾನುಭವಿಗಳಿಗೆ ಸಂಬಂಧಪಟ್ಟ ಗುತ್ತಿಗೆದಾರರು ಮನೆಕಟ್ಟಿ ಕೊಡದೆ ಸತಾಯಿಸುತ್ತಿದ್ದಾರೆ ಇದಕ್ಕೆ ಸರ್ಕಾರವೇ ಆಗಿರುತ್ತದೆ ಆದ್ದರಿಂದ ತಕ್ಷಣ ಹಣ ಬಿಡುಗಡೆ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ.

ಆಶ್ರಯ ಯೋಜನೆ ಅಡಿಯಲ್ಲಿ ಶಿವಮೊಗ್ಗ ನಗರದ ನಾಗರಿಕರಿಗೆ ಆಶ್ರಯ ಸಮಿತಿ ವತಿಯಿಂದ ಗೋವಿಂದಪುರ ಹಾಗೂ ಗೋಪಿಶೆಟ್ಟಿಕೊಪ್ಪ ಗ್ರಾಮದಲ್ಲಿ ಸುಮಾರು 4.5 ಎಕರೆ ವಿಸ್ತೀರ್ಣದಲ್ಲಿ 4836 ಜಿ+2 ಮಾದರಿ ಮನೆಗಳನ್ನು ನಿರ್ಮಾಣ ಮಾಡುವ ಯೋಜನೆ 2017ರಲ್ಲಿ ಹಮ್ಮಿಕೊಳ್ಳಲಾಗಿದ್ದು ಶೇಕಡಾ 70 % ತಮ್ಮ ಪಾಲಿನ ವಂತಿಗೆ ಹಣವನ್ನು ನೀಡಿ ಇಲ್ಲಿಗೆ ನಾಲ್ಕು ವರ್ಷಗಳೇ ಕಳೆದಿದೆ ಇನ್ನು ಕೂಡ ಯಾರಿಗೂ ಆಶ್ರಯ ಮನೆಗಳ ಹಸ್ತಾಂತರ ಆಗಿರುವುದಿಲ್ಲ ಈ ವಿಷಯವಾಗಿ ಮಾನ್ಯ ವಸತಿ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು ಪ್ರತಿಯನ್ನು ಲಗತ್ತಿಸಲಾಗಿದೆ.

ನಗರದಲ್ಲಿ ಕಳೆದ ಸಾಕಷ್ಟು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದ್ದು ಈ ವಿಷಯದ ಬಗ್ಗೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಹಾಗೂ ಮೆಸ್ಕಾಂ ಶಿವಮೊಗ್ಗ 2 ಇಲಾಖೆಗೂ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಹಾಗೂ ಶಿವಮೊಗ್ಗ ನಗರ ಆಡಳಿತದ ನಿರ್ಲಕ್ಷ ಧೋರಣೆಯೇ ಕಾರಣವಾಗಿರುತ್ತದೆ. ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ಕೂಡ ಮನವಿ ಮಾಡಿ ಕುಡಿಯುವ ನೀರಿನ ವಿ ನಿರ್ವಹಣೆಗೆ ಮತ್ತು ಕಾಮಗಾರಿಗೆ ಪ್ರತ್ಯೇಕ ವಿಭಾಗ ಮಾಡಿ ಪ್ರತಿ ವಿಭಾಗಕ್ಕೆ ಬೇರೆಬೇರೆ ಅಧಿಕಾರಿಗಳನ್ನು ನಿಯೋಜಿಸಬೇಕಾಗಿ ಇದರ ಬಗ್ಗೆ ಆದಷ್ಟು ಬೇಗ ಸಭೆಯನ್ನು ನಡೆಸಲು ಮನವಿ ಮಾಡಿದ್ದೆವು. ಇದುವರೆಗೂ ಕುಡಿಯುವ ನೀರಿನ ಸಮಸ್ಯೆಗೆ ಯಾವುದೇ ಸಭೆ ಕರೆದಿರುವುದಿಲ್ಲ. ಪ್ರತಿನಿತ್ಯ ನಾಗರಿಕರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ದಯವಿಟ್ಟು ಶಿವಮೊಗ್ಗ ನಗರದ ಅಭಿವೃದ್ಧಿ ದೃಷ್ಟಿಯಿಂದ ಮೇಲೆ ತಿಳಿಸಿರುವ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ನಗರದಲ್ಲಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಬೇಕಾಗಿ ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತಿದ್ದೇವೆ.

ವರದಿ ಮಂಜುನಾಥ್ ಶೆಟ್ಟಿ…