ಶಿವಮೊಗ್ಗ ನಗರದಲ್ಲಿ ಇಸ್ಪೀಟ್ ಕ್ಲಬ್‌ಗಳು ಹಾಗೂ ಓಸಿ ಜೂಜಾಟ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಂದು ಸರ್ಕೂಟ್ ಹೌಸ್‌ನಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಶಿವಮೊಗ್ಗ ಸಿಟಿ ಕ್ಲಬ್ ಹಿಂಭಾಗದಲ್ಲಿ ರೋರ‍್ಸ್ ಕ್ಲಬ್‌ನಲ್ಲಿ ಕಳೆದ ಹಲವಾರು ವರ್ಷಗಳಿಂದ ಇಸ್ಪೀಟ್ ಆಡಿಸುತ್ತಿದ್ದು ಮತ್ತು ಅಲ್ಲಿಯೇ ಮದ್ಯಪಾನ ಹಾಗೂ
ಧೂಮಪಾನ ನಡೆಯುತ್ತಿದೆ. ಪಕ್ಕದಲ್ಲಿ ಜಿಲ್ಲಾ ಗ್ರಂಥಾಲಯಕ್ಕೆ ಬರುವ ಕಾಲೇಜು
ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.ಪಕ್ಕದಲ್ಲೆ ಸರ್ಕಾರಿ ಕಾಲೇಜು ಸಹ ಇದ್ದು ಮತ್ತು ಗ್ರಂಥಾಲಯಕ್ಕೆ ಬರುವ
ಸಾರ್ವಜನಿಕರಿಗೆ ಸಹ ತೊಂದರೆಯಾಗುತ್ತಿದೆ.
ಶಿವಮೊಗ್ಗದಲ್ಲಿ ಓಸಿ ಜೂಜಾಟ ಹಾವಳಿ ಹೆಚ್ಚಾಗಿದೆ.
ಆದ್ದರಿಂದ ರೋರ‍್ಸ್ ಕ್ಲಬ್ ಮತ್ತು ಓಸಿ ಅಡ್ಡೆಗಳನ್ನು ನಿಲ್ಲಿಸಲು ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಾಗೂ
ಆಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ವಾಟಳ್ ಮಂಜುನಾಥ್, ನಿತೀನ್ ರೆಡ್ಡಿ,
ರವಿ ಸಾಧುಶೆಟ್ಟಿ, ಮಾರುತಿ ನವೀನ್, ಕುಮಾರ್ ಪೈಲ್ವನ್ ಲೋಕೇಶ್ ಅಕ್ಬರ್ ಪಾಷಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.