ಏಪ್ರಿಲ್ 22 ವಿಶ್ವ ಭೂಮಿ ದಿನದ ಪ್ರಯುಕ್ತ ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ತ್ಯಾವರೇಕೊಪ್ಪದ ಹುಲಿ ಮತ್ತು ಸಿಂಹ ಧಾಮದಾಲ್ಲಿ ಬೆಳಗಿನ ಜಾವ ಪಕ್ಷಿ ವೀಕ್ಷಣೆ ಮಾಡಲಾಯಿತು. ಸಂಪನ್ಮೂಲ ವ್ಯಕ್ತಿ ಅನಿಲ್ ಮತ್ತು ಅವರ ಸಂಗಡಿಗರಾದ ಪ್ರಸಾದ್, ದಿವ್ಯ, ಗಗನ್ ಅವರು ಜೆಸಿಐ ಸದಸ್ಯರಿಗೆ ಪಕ್ಷಿಗಳ ಬಗ್ಗೆ ಪಕ್ಷಿ ತಳಿಗಳ ಬಗ್ಗೆ ವಿವರಣೆ ನೀಡಿದರು.

ಪಕ್ಷಿವೀಕ್ಷಣೆ ಸುಂದರವಾದ ಕಾರ್ಯಕ್ರಮವಾಗಿತ್ತು ಹಸಿರಿನ ಮಧ್ಯೆ, ಶುದ್ಧಗಾಳಿ, ಪರಿಶುದ್ಧ ವಾತಾವರಣ ಪಕ್ಷಿವೀಕ್ಷಣೆ ಯಿಂದ ದೊರಕಿತ್ತು ಎಂದು ಜೆಸಿಐ ಸದಸ್ಯರು ಸಂತೋಷ ವ್ಯಕ್ತಪಡಿಸಿದರು.
ಹುಲಿ ಮತ್ತು ಸಿಂಹಧಾಮ ಕ್ಕೆ ಬರುವ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಜೆಸಿ ಚಿರಂಜೀವಿ ಬಾಬು, ಜೆಸಿ ಕೀರ್ತನ , ಜೆಸಿ ನಿಹಾಲ್ ಚಿತ್ರಕಲಾ ಸ್ಪರ್ಧೆಯ ನಿರ್ವಹಣೆ ಮಾಡಿದರು.
“ಪ್ಲಾಸ್ಟಿಕ್ ಫ್ರೀ ಮಲ್ನಾಡ್” ಅಭಿಯಾನಕ್ಕೆ ಜೆಸಿ ಪ್ರಸಾದ್ ಪ್ರಾಣಿ ದಯಾ ಸಂಘ, ಜೆಸಿ ಜ್ಯೋತಿ ಅರಳಪ್ಪ ಸಂಸ್ಥಾಪಕ ಅಧ್ಯಕ್ಷರು ಜೆಸಿಐ ಶಿವಮೊಗ್ಗ ಶರಾವತಿ. ಜೆಸಿ ಮಮತಾ ಶಿವಣ್ಣ ಜೆಸಿಐ ಶಿವಮೊಗ್ಗ ಶರಾವತಿ ಇವರು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಜೆಸಿ ಸೌಮ್ಯ ಅರಳಪ್ಪ ಅಧ್ಯಕ್ಷತೆ ವಹಿಸಿದ್ದರು.

ಶ್ರಮದಾನದ ಮೂಲಕ ಹುಲಿ ಮತ್ತು ಸಿಂಹ ಧಾಮ ದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಜೆಸಿ ಅರ್ಜುನ್ ಅಧ್ಯಕ್ಷರು ಜೆಸಿಐ ಶಿವಮೊಗ್ಗ ಶ್ರೀರಕ್ಷೆ, ಜೆಸಿ ಮಂಜುನಾಥ್ ಕಾರ್ಯದರ್ಶಿ ಜೆಸಿಐ ಶಿವಮೊಗ್ಗ ಶ್ರೀರಕ್ಷೆ, ಜೆಸಿ ನವೀನ್ ತಲಾರಿ , ಜೆಸಿ ಸಿದ್ದರಾಮಣ್ಣ, ಜೆಸಿ ಪಾಲಾಕ್ಷ. ಹುಲಿ ಮತ್ತು ಸಿಂಹಧಾಮ ಶಿಕ್ಷಣ ಅಧಿಕಾರಿ ಇಷಾ ಶೇಕ್,
ವಿಶ್ವ ಭೂಮಿ ದಿನದ ವಿವಿಧ ಕಾರ್ಯಕ್ರಮಕ್ಕೆ ಭಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಲಿ ಸಹಕರಿಸಿದ ಎಲ್ಲಾ ಜೆಸಿಐ ಸದಸ್ಯರಿಗೂ, ಪರಿಸರ ಪ್ರೇಮಿಗಳಿಗೆ, ಹುಲಿ ಮತ್ತು ಸಿಂಹಧಾಮ ಅಧಿಕಾರಿಗಳಿಗೆ, ಜೆಸಿ ಸೌಮ್ಯ ಅರಳಪ್ಪ , ಅಧ್ಯಕ್ಷರು , ಜೆಸಿ ಮಮತ ಶಿವಣ್ಣ, ಕಾರ್ಯದರ್ಶಿಗಳು ಜೆಸಿಐ ಶಿವಮೊಗ್ಗ ಶರಾವತಿ ಇವರು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ…