ಶಿವಮೊಗ್ಗ: ಬೆಂಗಳೂರಿನ ಪ್ರತಿಷ್ಠಿತ ಚಿನ್ನ-ಬೆಳ್ಳಿ, ವಜ್ರ ವ್ಯಾಪಾರಿಗಳಾದ ಶ್ರೀ ಕೃಷ್ಣಯ್ಯ ಚಿಟ್ಟೆ ಗ್ರೂಪ್ ವತಿಯಿಂದ ಇಂದು ನಗರದ ರಾಯಲ್ ಆರ್ಕಿಡ್ ನಲ್ಲಿ
ಆಯೋಜಿಸಿದ್ದ ಬಂಗಾರದ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ವಿಧಾನ ಪರಿಷತ್
ಸದಸ್ಯ ಡಿ.ಎಸ್. ಅರುಣ್ ಹಾಗೂ ಅಖಿಲ ಭಾರತ ವೀರಶೈವ ಸಮಾಜದ ರಾಜ್ಯಾಧ್ಯಕ್ಷೆ ಎಸ್.ವೈ.
ಅರುಣಾದೇವಿ ಚಾಲನೆ ನೀಡಿದರು.
ಇಂದಿನಿಂದ ಏಪ್ರಿಲ್ 24ರ ವರೆಗೆ ಮೂರು ದಿನಗಳ ಕಾಲ ಆಯೋಜಿಸಿರುವ ಈ ಮೇಳದಲ್ಲಿ
ಅಂತರಾಷ್ಟ್ರೀಯ ಗುಣಮಟ್ಟದ ಆಭರಣಗಳು ದೊರೆಯಲಿವೆ. ಬೆರಗುಗೊಳಿಸುವ ರೋಮಾಂಚನ ನೀಡುವ ಸೃಜನಶೀಲತೆಯ ನವನವೀನ ವಿನ್ಯಾಸದ ಬಂಗಾರ, ಬೆಳ್ಳಿ, ವಜ್ರದ ಆಭರಣಗಳು ಲಭ್ಯವಿದೆ.
ದಕ್ಷಣ ಭಾರತ ರಾಜ್ಯಗಳ ಸಾಂಪ್ರದಾಯಿಕ ಉದ್ದನೆಯ ಹಾರ, ವಿವಿಧ ಆಕರ್ಷಕ ನೆಕ್ಲೆಸ್ ಗಳು,ಹಳೆಯ ಕಾಲದ ಕಾಸಿನ ಸರಕ್ಕೆ ಹೊಸ ಮೆರಗು ಕೊಟ್ಟ ಒಡವೆಗಳು ಲಕ್ಷ್ಮೀ ಕಾಸಿನ ಸರಗಳು ಇಲ್ಲಿವೆ.
ಭಾರತದ ಏಕೈಕ ಪ್ರೀಮಿಯಂ ಐಷಾರಾಮಿ ಅಪರೂಪದ ಯು.ಡಿ. ಫರ್ಮ್ಯೂಮ್ ಇಲ್ಲಿವೆ. ಭಾರತೀಯ
ಸುಗಂಧದ್ರವ್ಯದ ವಿಶೇಷ ಪರಿಮಳದ ಫರ್ಮ್ಯೂಮ್ ಇದಾಗಿದೆ.
ಹಾಗೆಯೇ 150 ವರ್ಷಗಳ ಇತಿಹಾಸ ಶ್ರೀ ಕೃಷ್ಣಯ್ಯ ಚಿಟ್ಟೆ ಗ್ರೂಪ್ ಗೆ ಇದ್ದು, 1869ರಲ್ಲಿ ಪ್ರಾರಂಭಗೊಂಡಿದೆ. ವಿಶ್ವದಾದ್ಯಂತ ಗ್ರಾಹಕರ ವಿಶ್ವಾಸ ಗಳಿಸಿದ್ದು, 150
ವರ್ಷಗಳ ಸಂಸ್ಥೆ ಪೂರೈಸಿದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಯಾಗಿ 100 ಗ್ರಾಂ. ಚಿನ್ನ ಕೊಂಡರೆ ಅದರಲ್ಲಿ 10 ಗ್ರಾಂ. ಚಿನ್ನಕ್ಕೆ ಪ್ರತಿ ಗ್ರಾಂ.ಗೆ 1869
ರೂ.ಗಳನ್ನು ಮಾತ್ರ ಪಡೆಯಲಾಗುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.
ಪ್ರದರ್ಶನ ಮತ್ತು ಮೇಳಕ್ಕೆ ಚಾಲನೆ ನೀಡಿದ ಎಸ್.ವೈ. ಅರುಣಾದೇವಿಯವರು ಮಾತನಾಡಿ,
ಭಾರತೀಯ ಸಂಸ್ಕೃತಿಯಲ್ಲಿ ಆಭರಣಗಳಿಗೆ ವಿಶೇಷ ಮಹತ್ವವಿದೆ. ಚಿನ್ನ, ವಜ್ರದ ಆಭರಣಗಳು
ವ್ಯಕ್ತಿಯ ಸೌಂದರ್ಯಕ್ಕೆ ಮೆರುಗು ನೀಡುತ್ತವೆ. ವಿವಿಧ ವಿನ್ಯಾಸಗಳ ಆಭರಣಳ ತಯಾರಿಕೆಯಲ್ಲಿ ಶ್ರೀ ಕೃಷ್ಣಯ್ಯ ಚಿಟ್ಟೆ ಗ್ರೂಪ್ ಜನಪ್ರಿಯ ಸಂಸ್ಥೆಯಾಗಿದೆ. ವಿಶೇಷವಾಗಿ ಸಾಂಪ್ರದಾಯಿಕ ಒಡವೆಗಳನ್ನು ತಯಾರಿಸಿ, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಸಾರ್ವಜನಿಕರು ಸಾಂಪ್ರದಾಯಿಕ ಆಭರಣಗಳನ್ನು ಖರೀದಿಸಿ, ಧರಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಯೂ
ರಿಯಾಯಿತಿ ದರದೊಂದಿಗೆ ಒಡವೆಗಳನ್ನು ಮಾರಾಟ ಮಾಡುತ್ತಿರುವುದು ವಿಶೇಷವಾಗಿದೆ. ಇಲ್ಲಿ
ಅಂತಾರಾಷ್ಟ್ರೀಯ ಗುಣಮಟ್ಟದ ಒಡವೆಗಳ ಜೊತೆಗೆ ಸುಗಂಧದ್ರವ್ಯಗಳು ಲಭ್ಯವಿದೆ. ಹಳೆ ಮತ್ತು ಹೊಸ ತಲೆಮಾರಿನ್ನು ಮೇಳೈಸಿಕೊಂಡ ಆಭರಣಗಳು ಗಮನ ಸೆಳೆಯುತ್ತವೆ. ಇದನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಬ್ರಾಂಡ್ ಮುಖ್ಯಸ್ಥ ತೇಜಸ್, ಸ್ಟೋರ್ ಹೆಡ್ ಗಳಾದ ಪ್ರಸಾದ್ ಮತ್ತು ಗೋಪಾಲ್ ಉಪಸ್ಥಿತರಿದ್ದರು.
ಶ್ರೀ ಕೃಷ್ಣಯ್ಯ ಚಿಟ್ಟಿ ಸಂಸ್ಥೆಯ ವಿಶೇಷ ಆಬರಣ ಕಸುಮಲ…
ಇದು ಕೃಷ್ಣಯ್ಯಶೆಟ್ಟಿ ಚಿನ್ನಾಭರಣ ಮಳಿಗೆಯ ವಿಶೇಷ ಆಭರಣಗಳಲ್ಲೊಂದು. ಈ ಆಭರಣವು ನಕ್ಲೆಸ್ ಮಾದರಿಯದ್ದಾಗಿದ್ದು, ಇದರಲ್ಲಿ ನೀಲ ವಜ್ರ ಮತ್ತು ರೂಬಿ ಹಾಗೂ ಎಮರೆಲ್ಡ್ ಇವೆರೆಡರಿಂದ ಕೂಡಿದೆ.
ಕಸುಮಲ ಎಂದರೆ ಸಾಕ್ಷಾತ್ ಲಕ್ಷ್ಮೀದೇವಿ ಧರಿಸುವ ಆಭರಣ. (ಸ್ವತಃ ಕೃಷ್ಣಯ್ಯಶೆಟ್ಟಿ
ಸಂಸ್ಥೆಯೇ ತಯಾರಿಸಿದ್ದು, ಇದು ದಕ್ಷಿಣ ಭಾರತದ ಸಾಂಪ್ರದಾಯಿಕ ಆಭರಣ. ವಿಶೇಷವಾಗಿ
ಇದನ್ನು ಮದುವೆ ಹಾಗೂ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಈ ಆಭರಣವು ಈಗ ಇಲ್ಲಿ ನಡೆಯುತ್ತಿರುವ ಪ್ರದರ್ಶನ ಹಾಗೂ ಮಾರಾಟದಲ್ಲಿ ಲಭ್ಯವಿದ್ದು, ಮಲೆನಾಡಿಗರು ಇದರ
ಸದುಪಯೋಗ ಪಡೆದುಕೊಳ್ಳಬಹುದು.
ಇದರ ಜೊತೆಗೆ ‘ಯು.ಡಿ. ಫರ್ಮ್ಯೂಮ್’ ಎಂಬ ಭಾರತದ ಏಕೈಕ ಪ್ರೀಮಿಯಮ್ ಲೆಕ್ಸೂರಿ ಸೆಂಟ್
ಕೂಡ ಇಲ್ಲಿ ಲಭ್ಯವಿದೆ. ಇದರಲ್ಲಿ ಖಚಿತ ೨೪ ಕ್ಯಾರೆಟ್‌ನ ಗೋಲ್ಡ್ ಫ್ಲೆಕ್ಸ್ ಅಡಕವಾಗಿದೆ.