ಕೈಗಾರಿಕಾ ತರಬೇತಿ ಇಲಾಖೆ ಮತ್ತು ಉದ್ಯೋಗ ಇಲಾಖೆಯ ಸಹಯೋಗದೊಂದಿಗೆ ದಿನಾಂಕ: ೨೧.೦೪.೨೦೨೨ರಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಗಾಜನೂರಿನಲ್ಲಿ ಜರುಗಿತು ಕಾರ್ಯಕ್ರಮದ ಉಸ್ತುವಾರಿಯನ್ನು ಶ್ರೀ ಶೇಖರಪ್ಪ ಉದ್ಘಾಟಿಸಿದರು.ಶಿವಮೊಗ್ಗ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಭದ್ರಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಚಾರ್ಯರಾದ ಶ್ರೀ ಕಾಳಿದಾಸ ನಾಯಕ್ ಪ್ರಸ್ತಾವಿಕ ಬಾಷಣ ಮಾಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಶ್ರೀ ಎನ್. ಗೋಪಿನಾಥ್‌ರವರು ಮಾತನಾಡಿ ಕೇಂದ್ರ ಸರ್ಕಾರದ ಇಂತಹ ಯೋಜನೆಗಳು ತುಂಬಾ ಉಪಯುಕ್ತ ಇದರ ಪ್ರಯೋಜನ ಪಡೆದುಕೊಂಡು ಕೈಗಾರಿಕಾಭಿವೃದ್ದಿ, ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗುತ್ತದೆ ಕಲಿಕೆಯ ವೇಳೆಯೇ ದುಡಿಮೆಯಿಂದ ಸಂಪಾದನೆ ಮಾಡುವಂತಹ ಯೋಜನೆಗಳು ಇಂದಿನ ಸಮಾಜಕ್ಕೆ ಅತ್ಯವಶ್ಯವಾಗಿದೆ ಎಂದು ತಿಳಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಯೋಜನೆಗಳನ್ನು ಕೊಟ್ಟಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಜಂಟಿ ಕಾರ್ಯದರ್ಶಿ ಶ್ರೀ ಜಿ. ವಿಜಯಕುಮಾರ್ ರವರು ಮಾತನಾಡಿ ಭಾರತದಾದ್ಯಂತ ಏಕಕಾಲದಲ್ಲಿ ಇಂತಹ ಶಿಶಿಕ್ಷÄ ತರಬೇತಿ ಮೇಳಗಳು ನಡೆದು ಕೈಗಾರಿಕೋದ್ಯಮಿಗಳು ಇದರ ಸುದುಪಯೋಗವನ್ನು ಪಡೆದು ತಮ್ಮ ತಮ್ಮ ಕೈಗಾರಿಕಾ ಸಂಸ್ಥೆಗಳಿಗೆ ಅವಶ್ಯವಿರುವ ಉದ್ಯೋಗಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಸಂಬಾವನೆ ಸಹಿತ ಕೌಶಲ್ಯ ತರಬೇತಿ ನೀಡುತ್ತಿರುವುದು ಕೈಗಾರಿಕಾಭಿವೃದ್ದಿಯಲ್ಲಿ ಒಂದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯ ಸೂಚಿಸಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕೌಶಲ್ಯಾಭಿವೃದ್ದಿ ಸಮಿತಿ ಛೇರನ್ ಶ್ರೀ ಗಣೇಶ್ ಎಂ. ಅಂಗಡಿಯವರು ಮಾತನಾಡಿ ವಿದ್ಯಾರ್ಥಿಗಳು ಎಷ್ಟೇ ವಿಧ್ಯಾಬ್ಯಾಸ ಪಡೆದಿದ್ದರೂ ಉದ್ಯೋಗಪಡೆಯುವಲ್ಲಿ ಕೌಶಲ್ಯಯುತ ತರಬೇತಿ ಪಡೆದಾಗ ಮಾತ್ರ ಪರಿಣಿತ ಕಾರ್ಮಿಕರಾಗಲು ಸಾದ್ಯ. ಆಗ ಇಂತಹ ತರಬೇತಿ ಮೇಳಗಳಿಗೆ ಅರ್ಥ ಬರುತ್ತದೆ ಜಿಲ್ಲಾಮಟ್ಟದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ ಎಂದು ತಿಳಿಸಿದರು.

ಪರ್ಫೆಕ್ಟ್ ಅಲಾಯ್ ಸಂಸ್ಥೆಯ ಶ್ರೀ ಕಿರಣ್‌ರವರು ಶಿಕ್ಷಕ ತರಬೇತಿಯ ಮೌಲ್ಯ, ಅವಶ್ಯಕತೆ ಅದರ ಉದ್ದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು . ಕೇಂದ್ರ ಸರ್ಕಾರದ ಇಂತಹ ಯೋಜನೆಗಳ ಪ್ರಯೋಜಕತ್ವದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಕೌಶಲ್ಯಾಧಾರಿತ ತರಬೇತುದಾರರನ್ನು ತಯಾರು ಮಾಡುವುದರಿಂದ ಸ್ವಾವಲಂಬಿ ಭಾರತ ನಿರ್ಮಾಣ ಮಾಡುವತ್ತ ಗಮನಹರಿಸಿ ಸ್ವಂತ ಉದ್ದಿಮೆ ಸ್ಥಾಪಿಸುವುದರ ಜೊತೆಗೆ ಆರ್ಥಿಕ ಹಾಗೂ ಇತರೆ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಕೊಡುತ್ತಿದ್ದು ಅದರ ಸುಪಯೋಗವನ್ನು ಶಿಶಿಕ್ಷÄ ತರಬೇತುದಾರರು ಅದರ ಸುದುಪಯೋಗವನ್ನು ಪಡೆದುಕೊಳ್ಳಲು ಸೂಚಿಸಿದರು.

ತರಬೇತಿ ಮೇಳದಲ್ಲಿ ಸುಮಾರು 20ಕೂ ಹೆಚ್ಚು ಕೈಗಾರಿಕಾ ಸಂಸ್ಥೆಗಳು ಭಾಗವಹಿಸಿದವು ಸುಮಾರು 350ಕೂ ಹೆಚ್ಚು ಶಿಕ್ಷಕರನ್ನು ತರಬೇತಿಗೆ ಸಂದರ್ಶನ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಕೈಗಾರಿಕೆ ಉದ್ಯಮಿಗಳು ಆಯ್ಕೆ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್‌ಖಾನ್, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಹೆಚ್.ಎಂ. ಸುರೇಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ಗಣೇಶ್, ತರಬೇತುದಾರರಾದ ಶಿವಶಂಕರ್ ರೆಡ್ಡಿ, ಬೆಂಗಳೂರು ಹಾಗೂ ಇತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…