ಶಿವಮೊಗ್ಗ: ವಿದ್ಯಾನಗರದಲ್ಲಿರುವ ಪ್ರತಿಷ್ಠಿತ ಶಿವಮೊಗ್ಗ ಕಂಟ್ರಿ ಕ್ಲಬ್ ಆವರಣದಲ್ಲಿ ಮೇ 1 ರಂದು ಕ್ಲಬ್ ನ ರಜತ ಮಹೋತ್ಸವ ಅಚರಣೆ ಮತ್ತು ನೂತನ ಕ್ರೀಡಾ ಸಂಕೀರ್ಣದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಂಟ್ರಿ ಕ್ಲಬ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಐದು ಕೋಟಿ ರೂ. ವೆಚ್ಚದಲ್ಲಿ ಕ್ಲಬ್ ಆವರಣದಲ್ಲಿ ದೊಡ್ಡ ಕ್ರೀಡಾ ಸಂಕೀರ್ಣ ನಿರ್ಮಾಣ ಪೂರ್ಣಗೊಂಡಿದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕ್ರೀಡಾ ಸಂಕೀರ್ಣ ಉದ್ಘಾಟಿಸಲಿದ್ದಾರೆ ಎಂದರು.1991ರಲ್ಲಿ ಸಮಾನ ಮನಸ್ಕರು ಸೇರಿ ತುಂಗಾ ನದಿ ತೀರದಲ್ಲಿ ಮೂರುವರೆ ಎಕರೆ ಪ್ರದೇಶದಲ್ಲಿ ಆರಂಭವಾದ ಶಿವಮೊಗ್ಗ ಕಂಟ್ರಿ ಕ್ಲಬ್ ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಕ್ಲಬ್ ಆಗಿ ರೂಪುಗೊಂಡಿದೆ. ಪ್ರಭಾವಿ ಸಂಸ್ಥೆಯಾಗಿ ಸದೃಢವಾಗಿ ರೂಪುಗೊಳ್ಳುತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಕ್ಲಬ್‌ನಲ್ಲಿ 1200 ಸದಸ್ಯರು ಇದ್ದು, ಎಲ್ಲ ಸದಸ್ಯರ ಸಹಕಾರದಿಂದ ಸಕಲ ರೀತಿಯಲ್ಲಿ ಅನುಕೂಲ ಹಾಗೂ ಸೌಲಭ್ಯ ಒದಗಿಸಲಾಗುತ್ತಿದೆ.1200 ಸಕ್ರಿಯ ಸದಸ್ಯರಿಗೆ ಕ್ರೀಡಾ ಚಟುವಟಿಕೆಗೆ ಪೂರಕವಾಗಿ ಅನುಕೂಲವಾಗುವಂತೆ ಕ್ರೀಡಾ ಸಂಕೀರ್ಣ ರೂಪಿಸಲಾಗಿದೆ. ರೆಸ್ಟೋರೆಂಟ್‌ವ್ಯವಸ್ಥೆ ಇದೆ. ಎಲ್ಲ ಸದಸ್ಯರ ಕನಸು ಹಾಗೂ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕ್ಲಬ್ ವೇದಿಕೆಯಾಗಿ ಕೆಲಸ ಮಾಡಿದೆ ಎಂದರು.
ಕ್ಲಬ್‌ನಲ್ಲಿ ಸದಸ್ಯರ ಅನುಕೂಲಕ್ಕಾಗಿ ಎಲ್ಲಾ ಸೌಲಭ್ಯ ಒಳಗೊಂಡಿರುವ ನೂತನ ಕ್ರೀಡಾ ಸಂಕೀರ್ಣದಲ್ಲಿ ಒಳಾಂಗಣ ಶೆಟಲ್ ಕೋರ್ಟ್, ಬ್ಯಾಂಕೆಟ್ವ್ ಹಾಲ್, ಹೋಂ ಥಿಯೇಟರ್, ಸ್ಕಾ÷್ವರ್ಷ್, ಬಿಲ್ಲಿಯರ್ಡ್, ಬೌಲಿಂಗ್, ಮೋಶನ್ ಕ್ರಿಕೆಟ್, ಕೇರಂ, ಚೆಸ್, ಅಧ್ಯಯನ ಕೊಠಡಿ,ಜಿಮ್, ಸೇರಿದಂತೆ ಉತ್ತಮ ಹಾಗೂ ಆತ್ಯಾಧುನಿಕ ಸೌಕರ್ಯದ ವ್ಯವಸ್ಥೆ ರೂಪಿಸಲಾಗಿದೆ ಎಂದರು.ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರೋಜರ್ ಬಿನ್ನಿ,ಉಪಾಧ್ಯಕ್ಷ ಜೆ.ರಘುರಾಮ್, ಸೂಡಾ ಅಧ್ಯಕ್ಷ ನಾಗರಾಜ್, ಮಾಜಿ ಹಾಕಿ ರಾಷ್ಟಿçÃಯ ನಾಯಕ ಧನರಾಜ್ ಪಿಳ್ಳೆ, ಮೇಯರ್ ಸುನೀತಾ ಅಣ್ಣಪ್ಪ ಪಾಲ್ಗೊಳ್ಳುವರು. ಶಿವಮೊಗ್ಗ ಹಾಗೂ ರಾಜ್ಯದ ಪ್ರಮುಖ ಜನಪ್ರತಿನಿಧಿಗಳು ಭಾಗವಹಿಸುವರು ಎಂದರು.ಎಲ್ಲ ಸದಸ್ಯರ ಸಹಕಾರ, ಮಾರ್ಗದರ್ಶನ, ಪ್ರೋತ್ಸಾಹದಿಂದ ಕ್ರೀಡಾ ಸಂಕೀರ್ಣದ ನಿರ್ಮಾಣ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಆಶಯವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ನ ನೂತನ ಕ್ರೀಡಾ ಸಂಕೀರ್ಣದ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಭೂಪಾಳಂ ಎಸ್.ಶಶಿಧರ್, ಕಾರ್ಯದರ್ಶಿ ಜಿ.ಎನ್.ಪ್ರಕಾಶ್, ಉಪಾಧ್ಯಕ್ಷ ಎಚ್.ಜಿ.ಅಶೋಕ್, ಖಜಾಂಚಿ ಮದನ್‌ಲಾಲ್, ನಿರ್ದೇಶಕರಾದ
ಡಾ.ಸತೀಶ್ ಕುಮಾರ್ ಶೆಟ್ಟಿ ,ಬಿ.ಆರ್.ಅಮರ್‌ನಾಥ್, ಎಸ್.ಕೆ.ಕುಮಾರ್, ಎ.ಮಂಜುನಾಥ್,ಡಾ. ವೈ.ವಿ.ಶಶಿಧರ್ ಉಪಸ್ಥಿತರಿದ್ದರು.