“ಉದ್ದಿಮೆದಾರರಿಗೆ ಜಿ.ಎಸ್.ಟಿ. ಲೆಕ್ಕಪರಿಶೋಧನೆ ಹಾಗೂ ತಪಾಸಣೆ ಎದುರಿಸುವ ಕುರಿತು ವಿಶೇಷ ಮಾಹಿತಿ ಕಾರ್ಯಾಗಾರ – ಕೆ.ಎಸ್. ನವೀನ್ ಕುಮಾರ್, ಹಿರಿಯ ವಕೀಲರು ಹಾಗೂ ಕಾನೂನು ಸಲಹೆಗಾರರು, ಬೆಂಗಳೂರು”
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ ಕುರಿತು ವಿಶೇಷ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಹೆಸರಾಂತಯ ಅನುಭವಿ ಹಿರಿಯ ವಕೀಲರು, ಕಾನೂನು ಸಲಹೆಗಾರರು ಆದ ಶ್ರೀಯುತ ಕೆ.ಎಸ್. ನವೀನ್‌ಕುಮಾರ್ ಬಿ.ಕಾಂ.,ಎಲ್.ಎಲ್.ಬಿ., ಎಂ.ಎಲ್,ರವರು ಉದ್ಘಾಟಿಸಿದರು.
ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಜಿ.ಎಸ್.ಟಿ ಕಾನೂನಿನ ಅರಿವಿದ್ದಲ್ಲಿ ಉದ್ದಿಮೆದಾರರಿಗೆ ಯಾವುದೇ ರೀತಿಯ ಸಮಸ್ಯಯೇ ಇರುವುದಿಲ್ಲ. ಕಾನೂನಿನಡಿಯಲ್ಲಿ ಸಮನ್ಸ್ ಬಂದಾಗ ಯಾರು ಜಾರಿ ಮಾಡಿರಬೇಕು, ಯಾರಿಗೆ ಜಾರಿಮಾಡಿರಬೇಕು ಯಾರು ಅದನ್ನು ಹಾಜರಾಗಿ ಪ್ರತಿನಿಧಿಸಬೇಕು, ಹೇಗೆ ಪ್ರತಿನಿಧಿಸಬೇಕು, ಅದನ್ನು ಉದ್ಯಮಿಗಳಿಗಾಗುವ ತೊಂದರೆಗಳನ್ನು ವಿಷದವಾಗಿ ವಿಮರ್ಶಿಸಿದರು. ತೆರಿಗೆ ಇಲಾಖಾ ಅಧಿಕಾರಿಗಳು ಪರಿವೀಕ್ಷಣೆಯ ಸಮಯದಲ್ಲಿ, ಬರವಣಿಗೆಯ ರೂಪದಲ್ಲಿ ತೆಗೆದುಕೊಳ್ಳುವ ಉದ್ಯಮಿಗಳ ಹೇಳಿಕೆಗಳನ್ನು ಒತ್ತಾಯಿಸಿ ತೆಗೆದುಕೊಂಡ ಸಂದರ್ಭಗಳಲ್ಲಿ, ಉದ್ಯಮಿಗಳು ತಾವು ಕೊಟ್ಟ ಹೇಳಿಕೆಗಳನ್ನು ಯಾವ ರೀತಿಯಲ್ಲಿ ಹಿಂಪಡೆದು ಸಮಂಜಸವಾದ ಹೇಳಿಕೆಗಳನ್ನು ಪುನರ್ ಕೊಡಬೇಕೆಂದು ವಿವರವಾಗಿ ತಿಳಿಸಿದರು. ಜಿ.ಎಸ್.ಟಿ ಕಾನೂನಿನಡಿಯಲ್ಲಿ ಅಧಿಕಾರಿಗಳು ವ್ಯವಹಾರದ ಸ್ಥಳಗಳ ಪರಿಶೀಲನೆ ಸಮಯದಲ್ಲಿ ಅಧಿಕಾರದ ದುರುಪಯೋಗವಾಗದಂತೆ ವ್ಯಾಪಾರಸ್ಥರು ಯಾವ ರೀತಿಯಲ್ಲಿ ಪ್ರತಿನಿಧಿಸಬೇಕು. ಯಾವ ದಾಖಲೆಗಳನ್ನು ಒದಗಿಸಬೇಕು ಮುಂತಾದ ವಿವರವಾದ ಸಲಹೆಗಳನ್ನು ಉದ್ಯಮಿಗಳಿಗೆ ನೀಡಿದರು. ಹಾಗೆಯೇ ಜಿ.ಎಸ್.ಟಿ ಆಡಿಟ್ ವಿಚಾರವಾಗಿ(ಲೆಕ್ಕಪರಿಶೋಧನೆ) ಅದರ ಉದ್ದೇಶಗಳು, ಯಾವ ಸ್ಥಳಗಳಲ್ಲಿ ಆಡಿಟ್ ಮಾಡಬಹುದು ಅಧಿಕಾರಿಗಳಿಂದಾಗುವ ಅಧಿಕಾರದ ದುರುಪಯೋಗಗಳನ್ನು ಹಾಗೂ ಕಾನೂನಿನ ಅಡಿಯಲ್ಲಿ ಎದುರಿಸುವ ವಿಧಾನಗಳನ್ನು ತಿಳಿಸಿದರು. ಉಪಯುಕ್ತ ವಿಶೇಷ ಉಪನ್ಯಾಸದೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎನ್.ಗೋಪಿನಾಥ್‌ರವರು ವಹಿಸಿ ಮಾತನಾಡಿ ಉದ್ದಿಮೆದಾರರು ಹಲವಾರು ತೆರಿಗೆ ಸಂಬಂಧಿತ ವಿಷಯಗಳಲ್ಲಿ ತೊಂದರೆಗಳನ್ನು ಅನುಭವಿಸುತ್ತಿದ್ದು ಕಾನೂನಿನ ಮಾಹಿತಿಯ ಕೊರತೆ ಇದ್ದು, ಇಂತಹ ಉತ್ತಮ ಕಾರ್ಯಾಗಾರಗಳನ್ನು ನಡೆಸಿದಾಗ ಮಾಹಿತಿಯನ್ನು ಪಡೆದು ತಮ್ಮ ಉದ್ದಿಮೆಗಳನ್ನು ದೈರ್ಯದಿಂದ ಮುನ್ನೆಡೆಸಿಕೊಂಡು ಹೋಗಬಹುದೆಂದು ಸಭಿಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಚರ‍್ಟಡ್ ಅಕೌಂಟೆಂಟ್ ಶ್ರೀ ನಾಗರಾಜ್ ಸಿಂಗ್ ಸ್ವಾಗತ ಕೋರಿದರು, ತೆರಿಗೆ ಸಲಹಾ ಸಮಿತಿಯ ಛರ‍್ಮನ್‌ರವರಾದ ಇ. ಪರಮೇಶ್ವರ್ ಪ್ರಸ್ತಾವಿಕ ನುಡಿ ನುಡಿದು ಸಂಘವು ನಡೆದು ಬಂದ ದಾರಿಯನ್ನು ವಿವರಿಸಿ ಈ ಕಾರ್ಯಕ್ರಮವು ಉದ್ದಿಮೆದಾರಿರಿಗೆ ಒಂದು ಉಪಯುಕ್ತ ಮಾಹಿತಿ ಕಾರ್ಯವಾಗಿದ್ದು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದ ಶ್ರೀ ಎಂ. ರಾಜುರವರಿಗೆ ವಿಶೇಷವಾಗಿ ವಂದನೆಗಳನ್ನು ತಿಳಿಸಿದರು, ನಿರ್ದೇಶಕರರಾದ ಶ್ರೀ ಎಂ. ರಾಜುರವರು ಅತಿಥಿಗಳ ಪರಿಚಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯದರ್ಶಿ, ವಸಂತ್ ಹೋಬಳಿದಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಹ-ಕಾರ್ಯದರ್ಶಿ ಶ್ರೀ ಜಿ. ವಿಜಯಕುಮಾರ್ ವಂದನಾರ್ಪಣೆ ಸಲ್ಲಿಸಿ ವ್ಯಾಪಾರದ ಸಮಯ ಹಾಗೂ ವೀಕೆಂಡ್‌ನಲ್ಲೂ ಇಷ್ಟೊಂದು ಸಭಿಕರು ಸೇರಿರುವುದು ಕಾರ್ಯಾಗಾರದ ಪ್ರಾಮುಖ್ಯತೆ ಅದರ ಮಹತ್ವವನ್ನು ತೋರಿಸುತ್ತದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಖಜಾಂಚಿ ಮಧುಸೂದನ ಐತಾಳ್, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಜೆ.ಆರ್. ವಾಸುದೇವ, ಮಾಜಿ ಅಧ್ಯಕ್ಷರಾದ ಡಿ.ಎಂ. ಶಂಕರಪ್ಪರವರು, ನಿರ್ದೇಶಕರುಗಳಾದ ಬಿ.ಆರ್ ಸಂತೋಷ್, ಎಸ್.ಎಸ್. ಉದಯಕುಮಾರ್, ಕೆ.ಎಸ್. ಸುಕುಮಾರ್, ಪ್ರದೀಪ್ ವಿ. ಎಲಿ, ಗಣೇಶ್ ಎಂ. ಅಂಗಡಿ, ಮರಿಸ್ವಾಮಿ, ರಮೇಶ್ ಹೆಗಡೆ ಮಾಜಿ ಅಧ್ಯಕ್ಷರುಗಳು ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ಲೆಕ್ಕಪರಿಶೋಧಕರು, ತೆರಿಗೆ ಸಲಹೆಗಾರರು, ವೃತ್ತಿಪರರು, ಸದಸ್ಯರು ಹಾಗೂ ನಗರದ ಸಾರ್ವಜನಿಕರು ಉಪಸ್ಥಿತರಿದ್ದು ಇದರ ಸದುಪಯೋಗವನ್ನು ಪಡೆದುಕೊಂಡರು.