ಇಂದು ಶಿವಮೊಗ್ಗದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರ ಜತೆ ಸಭೆ ನಡೆಸಿದ ಮಾನ್ಯ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ಎಲ್ಲಾ ಸಂಘ ಸಂಸ್ಥೆಗಳ ಮುಖ್ಯಸ್ಥರ ಜೊತೆ ಅನ್ ಲಾಕ್ ಬಗ್ಗೆ ಚರ್ಚಿಸಿದರು. ಸಂಘ ಸಂಸ್ಥೆಗಳ ಮುಖ್ಯಸ್ಥರ ಬೇಡಿಕೆ ಏನಿತ್ತು
ಕೈಗಾರಿಕೆಗಳ ಸಂಸ್ಥೆಯಿಂದ ಈಗಿರುವ 50% ಕಾರ್ಮಿಕರಿಂದ 75% ಗೆ ಹೆಚ್ಚಿಸಲು ಮನವಿ
ಬಂಗಾರದ ಅಂಗಡಿ ಹಾಗೂ ಬಂಗಾರ ತಯಾರಿಕಾ ಕೆಲಸಗಾರರಿಗೆ ಅನುಮತಿ
ದಿನಸಿ ವರ್ತಕರಿಗೆ ವಾರದ ಎಲ್ಲಾ ದಿನ ತಯಾರಿಸಲು ಅನುಮತಿಗಾಗಿ ಮನವಿ
ಗಿರವಿ ಅಂಗಡಿಗೆ ಅವಕಾಶಕ್ಕೆ ಮನವಿ
ಕಲ್ಯಾಣ ಮಂದಿರ ಗಳಿಗೆ ಅವಕಾಶ ನೀಡಲು ಮನವಿ
ಸ್ಟುಡಿಯೋ ಗಳು ತೆರೆಯಲು ಮನವಿ
ಕಬ್ಬಿಣದ ಅಂಗಡಿಗಳಿಗೆ 2ಗಂಟೆಯ ತನಕ ಅವಕಾಶಕ್ಕಾಗಿ ಮನವಿ
ಗಾಂಧಿಬಜಾರ್ ಅಂಗಡಿಗಳು ದಿನವೂ ತೆಗೆಯುವಂತೆ ಮನವಿ
ಬೀದಿ ಬದಿ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಲು ಮನವಿ
ಸವಿತಾ ಸಮಾಜ ದವರಿಂದ ಅಂಗಡಿ ತೆರೆಯಲು ಮನವಿ
ಟೈಲರ್ ಗಳಿಗೆ ಅಂಗಡಿ ತೆರೆಯಲು ಮನವಿ
ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಈಶ್ವರಪ್ಪ ಹಾಗೂ ಜಿಲ್ಲಾಧಿಕಾರಿಗಳು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದರು . ಮಾರ್ಗಸೂಚಿಯ ಮುಖ್ಯಾಂಶಗಳು
ಜವಳಿ ಹಾಗೂ ಚಿನ್ನದಂಗಡಿಗೆ ಅವಕಾಶವಿಲ್ಲ
ಚಿನ್ನದ ಕೆಲಸ ಮಾಡುವವರಿಗೆ ಮಾತ್ರ ಅವಕಾಶ
ಬಂಗಾರ ಗಿರವಿ ಅಂಗಡಿಗಳಿಗೆ ಅವಕಾಶ 6ಗಂಟೆಯಿಂದ ರಿಂದ 12 ಗಂಟೆ
ಬೀದಿಬದಿ ವ್ಯಾಪಾರಿಗಳಿಗೆ ಆಹಾರ ಪದಾರ್ಥಗಳನ್ನು ಹೊರತುಪಡಿಸಿ ವ್ಯಾಪಾರ ಮಾಡಲು ಅನುಮತಿ 6ಗಂಟೆಯಿಂದ ರಿಂದ 12 ಗಂಟೆ
ಟೈಲರ್ ಗಳಿಗೆ ಅಂಗಡಿ ತೆರೆಯಲು ಅನುಮತಿ 6ಗಂಟೆಯಿಂದ ರಿಂದ 12 ಗಂಟೆ
ಹಾರ್ಡ್ ವೇರ್ ಅಂಗಡಿ ತೆರೆಯಲು ಅನುಮತಿ 6ಗಂಟೆಯಿಂದ ರಿಂದ 2 ಗಂಟೆ
ಪಾರ್ಕ್ ಗಳಲ್ಲಿ ವಾಕಿಂಗ್ ಹಾಗೂ ಯೋಗಾಭ್ಯಾಸಕ್ಕೆ ಅನುಮತಿ
ಹೇರ್ ಕಟಿಂಗ್ ಸಲೂನ್ ಗಳಿಗೆ ಅನುಮತಿಯಿಲ್ಲ
ಕಲ್ಯಾಣ ಮಂದಿರ ಗಳಿಗೆ ಅವಕಾಶವಿಲ್ಲ, ಹೋಟೆಲಲ್ಲಿ ಪಾರ್ಸಲೇ ಗೆ ಮಾತ್ರ ಅನುಮತಿ
ಯಾವುದೇ ಅಂಗಡಿಗಳಲ್ಲಿ ಜನ ಗುಂಪು ಸೇರಿದರೆ ಅಂಗಡಿ ಮಾಲೀಕರೇ ನೇರ ಹೊಣೆ. ಜನರು ಮಾತು ಕೇಳುತ್ತಿಲ್ಲ ಎಂದು ಮಾಲೀಕರು ಸಬೂಬು ನೀಡುವ ಹಾಗಿಲ್ಲ. ಜನಜಂಗುಳಿ ಆದರೆ ಪೊಲೀಸರು ಅಂಗಡಿಗೆ ಬೀಗ ಹಾಕಲಾಗುತ್ತದೆ. ನಂತರ ಹದಿನೈದು ದಿನಗಳ ಕಾಲ ಆ ಅಂಗಡಿ ತೆರೆಯುವಂತಿಲ್ಲ
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ