ಇಂದು ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್ ವತಿಯಿಂದ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಸೈಕಲ್ ಜಾಥಾ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಸೈಕಲ್ ಜಾಥಾವನ್ನು ಉದ್ಘಾಟಿಸಿದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಎನ್ ಗೋಪಿನಾಥ್ ರವರು ಮಾತನಾಡುತ್ತಾ ಸೈಕಲ್ ಬಳಸುವುದರಿಂದ ನಮ್ಮ ದೇಹದ ಪ್ರತಿ ಯೊಂದು ಭಾಗವು ಹುರಿಗೊಂಡು, ಆರೋಗ್ಯವಾಗಿರುತ್ತದೆ. ಪರಿಸರಕ್ಕೆ ಪೂರಕ ಆಗಿರುವ ಸೈಕಲ್ ಬಳಸುವುದು ಇಂದಿನ ದಿನಗಳಲ್ಲಿ ಅವಶ್ಯಕತೆವಾಗಿದೆ ಎಂದರು.
ಶಿವಮೊಗ್ಗ ಸೈಕಲ್ ಕ್ಲಬ್ಬಿನ 156ನೇ ಕಾರ್ಯಕ್ರಮ ಇದಾಗಿದ್ದು ಸಕ್ರಿಯವಾಗಿ ನಗರದಲ್ಲಿ ಸೈಕಲ್ ಬಳಕೆ ಪ್ರಮಾಣವನ್ನು ಹೆಚ್ಚಿಸುತ್ತಿರುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಶಿವಮೊಗ್ಗ ಸೈಕಲ್ ಕ್ಲಬ್ಬಿನ ಕಾರ್ಯವನ್ನು ಶ್ಲಾಘಿಸಿದರು
ಹಾಗೂ ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ನಮ್ಮ ಸಮಾಜಕ್ಕೆ ಒಂದು ಉತ್ತಮ ಕೊಡುಗೆ ಎಂದರು. ಇಂದು ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ ವಾಗಿದ್ದು ಜೀವನ್ಮರಣ ಹೋರಾಟದಲ್ಲಿ ಇರುವ ವ್ಯಕ್ತಿಗೆ ರಕ್ತದ ಅವಶ್ಯಕತೆ ಇದ್ದು ಅಂತಹ ಅವಶ್ಯಕತೆಯನ್ನು ಪೂರೈಸುತ್ತಿರುವ ಸೈಕಲ್ ಕ್ಲಬ್ ಶಿವಮೊಗ್ಗಕ್ಕೆ ಒಂದು ಮಾದರಿಯಾಗಿದೆ ಎಂದು ತಿಳಿಸಿದರು.
ಶಿವಮೊಗ್ಗ ಸೈಕಲ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀಕಾಂತ್ ನಗರದ ನಾಗರೀಕರ ಸಹಕಾರದಿಂದ ಸಂದರ್ಭಕ್ಕೆ ಅನುಕೂಲ ವಾಗುವ ಸಮಾಜಮುಖಿ ಕಾರ್ಯಗಳನ್ನು ಸೈಕಲ್ ಕ್ಲಬ್ ಮಾಡುತ್ತಲ್ಲಿದ್ದು, ವರ್ಷದಲ್ಲಿ ಎರಡು ಬಾರಿ ಮೇ ಮತ್ತು ನವಂಬರ್ ಒಂದರಂದು ರಕ್ತದಾನ ಶಿಬಿರ ಏರ್ಪಡಿಸುತ್ತಿದ್ದು ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ನೆರವೇರುತ್ತಿದೆ, ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಪದಾಧಿಕಾರಿಗಳಾದ ಗಿರೀಶ್ ಕಾಮತ್, ನರಸಿಂಹಮೂರ್ತಿ, ಮಹಮ್ಮದ್ ರಫಿ, ವಿಜಯಕುಮಾರ್, ಹರೀಶ್ ಪಾಟೀಲ್,
ವೈಹೆಚ್ ಐಎ ಛೇರ್ಮನ್ ವಾಗೇಶ್, ಸಹಾಸ ಅಕಾಡಮಿಯ ವಿಜಯೇಂದ್ರ ರಾವ್ ರಕ್ತದಾನಿಗಳಾದ ಧರಣೇಂದ್ರ ದಿನಕರ್ ಮುಂತಾದವರು ಉಪಸ್ಥಿತರಿದ್ದರು.
ರಕ್ತದಾನ ಶಿಬಿರದಲ್ಲಿ ಭಾರತೀಯ ರೆಡ್ ಕ್ರಾಸ್ ಘಟಕದ ಸಂಜೀವಿನಿ ಬ್ಲಡ್ ಬ್ಯಾಂಕ್ ವತಿಯಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.