ಶಿಕಾರಿಪುರ ನ್ಯೂಸ್…
ಕರ್ನಾಟಕ ರಾಜಕಾರಣ ಕ್ಷೇತ್ರದಲ್ಲಿ ಸರಳ ಸಜ್ಜನಿಕೆ ಮತ್ತು ಮೌಲ್ಯಾಧಾರಿತ ರಾಜಕಾರಣಿ ಹಾಗೂ ಸಾರ್ವಜನಿಕ ಸೇವೆಗೆ ಅತ್ಯುತ್ತಮ ಮಾದರಿ ದಾರಿಯನ್ನುನಿರ್ಮಿಸಿ ತಾನೇ ಸ್ವತಃ ಆ ಕಠಿಣ ಯಾತ್ರೆಯಲ್ಲಿ ಹಾದುಹೋಗುವ ಮೂಲಕ ರಾಜ್ಯದ ರಾಜಕೀಯಮುತ್ಸದ್ದಿಗಳಾಗಿ ಹೊರಹೊಮ್ಮಿದವರು ಕೆ ವಿ ನರಸಪ್ಪನವರು ಎಂದು ನಿಕಟಪೂರ್ವಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರದಂದು ಪಟ್ಟಣದ ಜೈನ ಮಂದಿರದಲ್ಲಿ ನಾಗರೀಕ ವೇದಿಕೆ, ಕರ್ನಾಟಕ ಅಧ್ಯಯನ ಕೇಂದ್ರ, ಜನಪರ ಸಂಘಟನೆಗಳ ಮತ್ತು ನರಸಪ್ಪನವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ, ಮಾಜಿವಿಧಾನ ಪರಿಷತ್ ಸಭಾಪತಿ ದಿ,ಕೆ ವಿ ನರಸಪ್ಪನವರ ಜನ್ಮ ಶತಮಾನೋತ್ಸವ ಹಾಗೂ ಜನಾನುರಾಗಿಕೆ ವಿ ನರಸಪ್ಪ ಬದುಕು ಮತ್ತು ಸಾಧನೆಯ ಕುರಿತು ಪುಸ್ತಕ ಬಿಡುಗಡೆ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆ ವಿ ನರಸಪ್ಪನವರು 1956 ರಿಂದ1968 ರ ತನಕ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, 1960 ರಿಂದ 62 ರಲ್ಲಿ ವಿಧಾನಪರಿಷತ್ ಸಭಾಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಜನನ ಸ್ವಾತಂತ್ರ್ಯ ಪೂರ್ವದಲ್ಲಿಏಸೂರು ಕೊಟ್ಟರು ಈಸೂರು ಕೊಂಡೆವು ಎಂದು ಘೊಷಣೆ ಕೂಗಿದ ತಾಲ್ಲೂಕಿನ ಈಸೂರು ಗ್ರಾಮದನೆರೆಯ ಗ್ರಾಮವಾದ ಗಾಮ ಗ್ರಾಮದಲ್ಲಾಯಿತು. 1942 ರ ಕ್ವಿಟ್ ಇಂಡಿಯಾ ಚಳುವಳಿ ದುರಂತದಸಂದರ್ಭದಲ್ಲಿ ನರಸಪ್ಪನವರು ಆಗ ತಾನೇ ಬಿಎ ಪದವಿ ಮುಗಿಸಿದ ಅವರು ಈಸೂರು ದಂಗೆಯಲ್ಲಿಪಾಲ್ಗೊಂಡ ಅವರು ಬ್ರಿಟಿಷ್ ಸರ್ಕಾರದ ಕಣ್ಣಿಗೆ ಬೀಳದೆ ಪಾರಾಗಿದ್ದರು.
ಮಹಾತ್ಮ ಗಾಂಧೀಜಿ ರವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸ್ವಾತಂತ್ರ್ಯಹೋರಾಟಗಾರರಲ್ಲಿ ಒಬ್ಬರಾಗಿದ್ದರು. ನರಸಪ್ಪನವರು ಓರ್ವ ದಕ್ಷ ಆಡಳಿತಗಾರರಾದ ಅವರುಸಹಕಾರಿ ಧುರೀಣರಾಗಿ ಜನಾನುರಾಗಿಯಾಗಿ ಜೀವನವನ್ನು ನಡೆಸಿದರು. ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಶಿಕಾರಿಪುರದ ಟಿಎಪಿಸಿಎಂಎಸ್ ನ ಸ್ತಾಪಕ ಅಧ್ಯಕ್ಷರಾಗಿ ಆಯ್ಕೆಯಾಗಿ ದಶಕಗಳಕಾಲ ಸತತವಾಗಿ ಕಾರ್ಯನಿರ್ವಹಿಸಿದ ಅವರು ತಮ್ಮ ಜೀವಿತಾವಧಿಯಲ್ಲಿ ಸಾಮರಸ್ಯದಿಂದಬಾಳಿದವರು ಅನ್ನೋದು ಮರೆಯುವಂತಿಲ್ಲ.
ಮಾನ್ಯ ಕೆ ವಿ ನರಸಪ್ಪನವರ ಜೊತೆ ನಿಕಟ ಸಂಪರ್ಕ ಹೊಂದಿದ್ದ ನಾನು ವಾರದಲ್ಲಿ ಎರಡುಮೂರು ದಿನ ಒಂದೆರೆಡು ಗಂಟೆಯ ಕಾಲ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದದ್ದು ಆ ಸಂದರ್ಭನನಗೀಗಲೂ ನೆನಪಿದೆ. ಈ ಒಡನಾಟದ ನೆನಪಿಗಾಗಿ ನರಸಪ್ಪನವರು ಮರಣಾನಂತರ ನರಸಪ್ಪ ಸ್ಮಾರಕಭವನ ನಿರ್ಮಾಣಕ್ಕೆ ಚಾಲನೆ ನೀಡಿ, ಭವನವನ್ನು ಕೂಡ ನಿರ್ಮಿಸಲಾಗಿದೆ ಎಂದು ಹೇಳಿದರು.
ಸಂಸದ ಬಿ ವೈ ರಾಘವೇಂದ್ರರವರು ಮಾತನಾಡಿ, ದಿವಂಗತ ಕೆ ವಿ ನರಸಪ್ಪನವರುಪಕ್ಷಾತೀತ,ದ್ವೇಷಾತೀತ ರಾಜಕಾರಣಿಗಳಾಗಿದ್ದು, ಸಾಮಾಜಿಕ ಕಳಕಳಿಯನ್ನು ಹೊತ್ತು ಅನೇಕಕೆಲಸ ಕಾರ್ಯಗಳನ್ನು ಮಾಡಿದ ಅವರ ಕೆಲವು ಸಂಗತಿಗಳನ್ನ, ಜೀವನ ಶೈಲಿಯನ್ನು ನಮ್ಮಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಾಧನೆಗೆ ಜಾರಿಯಾಗುತ್ತದೆ ಎಂದ ಅವರು, ಈಗಿರುವನರಸಪ್ಪ ಸ್ಮಾರಕ ಬಯಲು ರಂಗಮಂದಿರವು ತುಂಬಾ ಹಳೆಯದಾಗಿದ್ದು, ಈಗಾಗಲೇ ಶಿತಿಲಾವಸ್ತೆಗೆಬಂದಿದ್ದು, ಅದನ್ನು ತೆರವುಗೊಳಿಸಿ ಪುನಃ ಅದೇ ಜಾಗದಲ್ಲಿ ಸುಮಾರು ಐದು ಕೋಟಿ ರೂಪಾಯಿವೆಚ್ಚದಲ್ಲಿ ನೂತನವಾಗಿ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡುವ ಚಿಂತನೆ ನಡೆದಿದ್ದು,ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ರಾಜ್ಯ ಸರ್ಕಾರದ ಮುಖ್ಯಮಂತ್ರಿಬಸವರಾಜ್ ಬೊಮ್ಮಾಯಿರವರ ಬಳಿ ಚರ್ಚೆ ನಡೆಸಲಿದ್ದಾರೆ ಇನ್ನೊಂದು ವರ್ಷದಲ್ಲಿ ಅದರಜೀರ್ಣೋದ್ಧಾರ ಗೊಳಿಸಲಾಗುವುದು ಎಂದು ತಿಳಿಸಿದರು.
ನಂತರ ಮಾತನಾಡಿದ ಹಿರಿಯ ನ್ಯಾಯವಾದಿಗಳು, ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್ರವರು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಒಬ್ಬ ಶಾಸಕ ಮಾಡದೇ ಇರುವಂತಹ ಕೆಲಸವನ್ನವಿಧಾನ ಪರಿಷತ್ ಸದಸ್ಯರಾಗಿ ಕೆ ವಿ ನರಸಪ್ಪನವರು ಮಾಡಿದ್ದಾರೆ. ರಾಜ್ಯದಲ್ಲಿಅತ್ಯುತ್ತಮ ಶಾಸಕರನ್ನ, ಸಂಸದರನ್ನ ಕಾಣಬಹುದು ಆದರೆ ಕ್ರಿಯಾಶೀಲ ವಿಧಾನ ಪರಿಷತ್ಸದಸ್ಯರನ್ನ ನೋಡಿರುವುದಿಲ್ಲ. ಅವರು ಕಟ್ಟಿದ ಸಂಸ್ಥೆಗಳು ಒಂದೇ ಎರಡೇ,ಶಿಕಾರಿಪುರದಲ್ಲಿ ಪುರಸಭೆ ಮತ್ತು ಅದರ ಪ್ರಥಮವಾಗಿ ಅಧ್ಯಕ್ಷರಾದರು, ಈ ಊರಿನಲ್ಲಿಹೇಸ್ಕೂಲ್ ನಿರ್ಮಾಣ ಅವರು ಅಧ್ಯಕ್ಷರಾಗಿದ್ದಾಗ, ಇಲ್ಲಿನ ಟಿಎಪಿಸಿಎಂಎಸ್ ನಅಧ್ಯಕ್ಷರಾಗಿದ್ದರು, ಶಿವಮೊಗ್ಗ ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು,ವಿಧಾನ ಪರಿಷತ್ ಸದಸ್ಯರಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ಮೈಸೂರು ಸಂಸ್ಥಾನದಹಣಕಾಸಿನ ನಿರ್ದೇಶಕರಾಗಿದ್ದರು, ಕೃಷಿ ಸಹಕಾರಿ ಧುರೀಣರಾಗಿ, ಅಂಜನಾಪುರ ಕೆರೆಯ ನೀರಿನಸಂಗ್ರಹಣೆಗೆ ಏಕೈಕವಾಗಿ ಹೋರಾಟ ನಡೆಸಿ ಅಲ್ಲಿ ಡ್ಯಾಂ ನಿರ್ಮಾಣ ಮಾಡಿಸುತ್ತಾರೆ.
ಇಲ್ಲಿನ ಪೌರವಿಹಾರ ಸಂಸ್ಥೆಯನ್ನು ಸ್ಥಾಪಿಸಿದರು, ಇನ್ನೂ ಅನೇಕ ಸಾಮಾಜಿಕ ಕಳಕಳಿಯನ್ನುಹೊತ್ತು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಜನಾನುರಾಗಿಯಾಗಿ ಸೇವೆ ಸಲ್ಲಿಸಿದಮಹಾನ್ ಚೇತನರ ಜೀವನ ಚರಿತ್ರೆಯ ಪುಸ್ತಕವನ್ನು ಈಗ ಅವರ ಕುಟುಂಬಸ್ಥರು ಸೇರಿನರಸಪ್ಪರವರ ಮರಣಾನಂತರ ಅದು ಮುವತ್ತು ವರ್ಷಗಳ ನಂತರ ಬಿಡುಗಡೆ ಮಾಡಲಿದ್ದಾರೆ ಎಂದರೆಎಷ್ಟೊಂದು ವಿಪರ್ಯಾಸ ಮತ್ತು ಬೇಸರದ ಸಂಗತಿಯಾಗಿದೆಯಲ್ಲವೆ ಎಂದು ಅಸಮಾಧಾನವ್ಯಕ್ತಪಡಿಸಿದರು.
ಅವರು ಕಟ್ಟಿದ ಸಂಸ್ಥೆಗಳು ಏನಾಯ್ತು, ಪುರಸಭೆಯವರಾಗಲಿ, ಪೌರವಿಹರದವರಾಗಲಿ ಏಕೆ ಈಕೆಲಸ ಮಾಡಲಿಲ್ಲ ಪ್ರಶ್ನಿಸಿದ ಅವರು ಚರಿತ್ರೆಯನ್ನ ಮರೆತವರು ಚರಿತ್ರೆಯನ್ನುಸೃಷ್ಟಿಸಲಾರರು ಎಂದು ಸಭೆಯಲ್ಲಿ ವೇದಿಕೆ ಹಂಚಿಕೊಂಡ ಗಣ್ಯರಿಗೆ ಟಾಂಗ್ ಕೊಟ್ಟ ಅವರು,ನರಸಪ್ಪನವರು ಮರಣಾನಂತರ ನರಸಪ್ಪರವರ ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳು ಸೇರಿನರಸಪ್ಪರವರ ಜೀವನ ಚರಿತ್ರೆಯ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.
ವೇದಿಕೆಯಲ್ಲಿ ಕೃಷ್ಣಮೂರ್ತಿ ಶಿಕಾರಿಪುರ, ಕೆ ವಿ ನರಸಪ್ಪನವರು ಪುತ್ರರಾದ ಎನ್ ಅರುಣ್ಕುಮಾರ್, ಎನ್ ಭಾಸ್ಕರ್, ಎನ್ ರವಿ, ಮೋಹನ್ ಪುತ್ರಿ ದೇವಿಕಾ, ಕನ್ನಡ ಜಾನಪದ ಸಾಹಿತ್ಯಪರಿಷತ್ತಿನ ಅಧ್ಯಕ್ಷ ಪಾಪಯ್ಯ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷಹುಚ್ರಾಯಪ್ಪ ಮತ್ತು ದಿವಂಗತ ಕೆ ವಿ ನರಸಪ್ಪನವರ ಕುಟುಂಬ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.