ಮನಸ್ಸಿಗೆ, ದೇಹಕ್ಕೆ ಕಸುವು ಕೊಡುವ ಚಾರಣ ಹಿಮಾಲಯದಲ್ಲಿ ದೊರಕುತ್ತದೆ. ರಾಷ್ಟ್ರೀಯ ಚಾರಣಗಳಲ್ಲಿ ‘ಸರ್ ಪಾಸ್’ ಚಾರಣಗಳ ರಾಜ. ಆ ಅನುಭವ ಅನುಭವಿಸಿಯೇ ನೋಡಬೇಕು ಎಂದು ತರುಣೋದಯ ಘಟಕದ ಛೇರ್ಮನ್ ವಾಗೇಶ್ ತಿಳಿಸಿದರು.
ತರುಣೋದಯ ಘಟಕದ ಹತ್ತುಜನರ ತಂಡ ಹಿಮಾಲಯ ಚಾರಣ ಕೈಗೊಂಡಿದ್ದು ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಶುಭ ಕೋರಿ ಮಾತನಾಡುತ್ತಿದ್ದರು.
ಎರಡು ವರ್ಷದಿಂದ ತಡೆ ಹಿಡಿದಿದ್ದ ಚಾರಣ ಮತ್ತೆ ಪ್ರಾರಂಭಗೊಂಡಿದೆ, ಎಲ್ಲರಿಗೂ ಸಂತೋಷ ತಂದಿದೆ. ನಮ್ಮ ಘಟಕದಿಂದ ನೂರಾರು ಸದಸ್ಯರು ಪ್ರತಿ ವರ್ಷ ಪಾಲ್ಗೊಳ್ಳುತ್ತಾರೆ ಎಂದರು.
ರಾಜ್ಯದ ಮಾಜಿ ಉಪಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಕೈ-ಕಾಲು ಗಟ್ಟಿ ಇರುವುದು ಗೊತ್ತಾಗುವುದು ಚಾರಣ ಮಾಡಿದಾಗ.ಮನಃಸ್ಸಿಗೆ ಮುದ ನೀಡುವುದರೊಂದಿಗೆ, ಮನೊಉಲ್ಲಾಸ ಹೊಂದಲು ಸಾದ್ಯ.ಇಂತಹ ಚಾರಣ ಜೀವನದ ಒಮ್ಮೆ ಮಾತ್ರ ದೊರಕುತ್ತದೆ. ಅದನ್ನು ಅನುಭವಿಸಿಯೇ ತೀರಬೇಕು. ಅತ್ಯಂತ ಕಡಿಮೆ ವೆಚ್ಛದಲ್ಲಿ, ಸುರಕ್ಷಿತವಾಗಿ ಹೊಗಿ ಬರಲು ಯೂತ್ ಹಾಸ್ಟೆಲ್ಸ್ ಉತ್ತಮ ಅವಕಾಶ ಒದಗಿಸುತ್ತಿದೆ ಎಂದರು.
ಭಾರತಿ ಗುರುಪಾದಪ್ಪ ರವರಿಂದ ಪ್ರಾರ್ಥನೆ, ದಿವ್ಯರವರಿಂದ ಸ್ವಾಗತ, ಸುರೇಶ್ ಕುಮಾರ್ ರವರಿಂದ ಪ್ರಾಸ್ಥಾವಿಕ ನುಡಿ ಮತ್ತು ಮಲ್ಲಿಕಾರ್ಜುನ್ ರವರಿಂದ ವಂದನಾರ್ಪಣೆ ನೆರವೇರಿತು.