ಶಿವಮೊಗ್ಗ: 13 ವರ್ಷಗಳ ಹಿಂದೆ ಜನರ ಆರೋಗ್ಯದ ದೃಷ್ಠಿಯಿಂದ ಪ್ರಾರಂಭವಾದ ವ್ಯಾಲ್ಯೂ ಪ್ರಾಡಕ್ಟ್ ಪ್ರೈ. ಲಿ. ಸಂಸ್ಥೆ ಅಮೃತ್ ನೋನಿ ಉತ್ಪನ್ನಗಳ ಮೂಲಕ ಜನಪ್ರಿಯಗೊಂಡಿದ್ದು, ಸಂಸ್ಥೆಯ ಅಮೃತೋತ್ಸವ -2022, 13 ನೇ ವರ್ಷದ ವಾರ್ಷಿಕೋತ್ಸವ ಹಾಗೂ 3 ನೇ ಬೃಹತ್ ಕೈಗಾರಿಕಾ ಘಟಕದ ಉದ್ಘಾಟನೆ ಮೇ 8 ರಂದು ಬೆಳಗ್ಗೆ 10.30 ಕ್ಕೆ ರಾಮಿನಕೊಪ್ಪದ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವ್ಯಾಲ್ಯೂ ಪ್ರಾಡಕ್ಟ್ ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಕೆ. ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ಶ್ರೀನಿವಾಸ್ ಮೂರ್ತಿ ಮಾತನಾಡಿ ಅಮೃತ್ ನೋನಿ ಉತ್ಪನ್ನಗಳು ದೇಶಾದ್ಯಂತ ಲಕ್ಷಾಂತರ ಗ್ರಾಹಕರನ್ನು ಹೊಂದಿದ್ದು, ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಪ್ರತಿ ಉತ್ಪನ್ನವು ಜಿಎಂಪಿ, ಐಎಸ್ಒ ಸರ್ಟಿಫೈಡ್ ಆಗಿದ್ದು, ಲ್ಯಾಬ್ ಟೆಸ್ಟ್ ಗೆ ಒಳಪಟ್ಟಿರುತ್ತದೆ. ಅಮೃತ್ ನೋನಿ ಡಿ ಪ್ಲಸ್, ಅಮೃತ್ ನೋನಿ ಆರ್ಥೋ ಪ್ಲಸ್, ಅಮೃತ್ ನೋನಿ ಪವರ್ ಪ್ಲಸ್, ಅಮೃತ್ ನೋನಿ ಸ್ತ್ರೀ ಸಂಜೀವಿನಿ, ಅಮೃತ್ ನೋನಿ ಪೇಯ್ನ್ ಆಯಿಲ್ ಮತ್ತು ಅಮೃತ್ ನೋನಿ ಗ್ಯಾಸ್ಟ್ರಿನ್ ಉತ್ಪನ್ನಗಳು ಜನಪ್ರಿಯತೆ ಗಳಿಸಿದ್ದು, ಡಯಾಬಿಟೀಸ್, ಅರ್ಥೈಟೀಸ್, ಅಸ್ತಮಾ, ಹೆಣ್ಣು ಮಕ್ಕಳ ಮುಟ್ಟಿನ ಸಮಸ್ಯೆ, ಗ್ಯಾಸ್ಟ್ರಿಕ್ ಹಾಗೂ ರೋಗ ನಿರೋಧಕ ಶಕ್ತಿ ಕೊರತೆ ಇಂತಹ ಆರೋಗ್ಯಸ ಸಮಸ್ಯೆಗಳಿಗೆ ಹೆಚ್ಚು ಸಹಕಾರಿಯಾಗಿದೆ ಎಂದರು.
ಇದೀಗ ಬೇರೆ ರಾಜ್ಯಗಳ ಬೇಡಿಕೆಯ ಪೂರೈಕೆಗಾಗಿ ಹಾಗೂ ಇತರೆ ಉತ್ಪನ್ನಗಳ ತಯಾರಿಕೆಗಾಗಿ ಗ್ರಾಹಕರ ಬೇಡಿಕೆ ಪೂರೈಸಲು ಅಮೃತ್ ನೋನಿಯ ಮೂರನೇ ಬೃಹತ್ ಕೈಗಾರಿಕಾ ಘಟಕವನ್ನು ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಉದ್ಘಾಟಿಸಲಿದ್ದಾರೆ. ಎನ್.ಎ.ಬಿ.ಎಲ್. ಲೈಸೆನ್ಸ್ ಗೆ ಅನುಸಾರವಾಗಿ ಮೂರನೇ ಘಟಕದಲ್ಲಿ ಎಲ್ಲಾ ಸೌಲಭ್ಯಗಳಿರುವ ಲ್ಯಾಬ್ ಅನ್ನು ಅಮೃತ್ ಲ್ಯಾಬ್ಸ್ ಹೆಸರಲ್ಲಿ ತೆರೆಯಲಾಗಿದೆ. ಈ ಘಟಕದಲ್ಲಿ ಮೊದಲೆರಡು ಘಟಕಗಳ ಎರಡರಷ್ಟು ಉತ್ಪನ್ನ ತಯಾರಿಸುವ ಸಾಮರ್ಥ್ಯ ಹೊಂದಿದ್ದು, ಮುಂದಿನ ದಿನಗಳಲ್ಲಿ ಸುಮಾರು 200 ಉದ್ಯೋಗಾವಕಾಶಗಳು ದೊರೆಯಲಿವೆ. ನಮ್ಮ ಸಂಸ್ಥೆಯ ಸಂಶೋಧನಾ ತಂಡದಿಂದ ಇನ್ನೂ ಹೆಚ್ಚಿನ ಉತ್ಪನ್ನಗಳು ಮಾರುಕಟ್ಟೆಗೆ ಬರಲಿದೆ ಎಂದರು.
ವ್ಯಾಲ್ಯೂ ಪ್ರಾಡಕ್ಟ್ ಸಂಸ್ಥೆ ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಆಂಟಿ ಕ್ಯಾನ್ಸರ್ ಹಾಗೂ ಹಾಗೂ ಟ್ಯೂಮರ್ ಪ್ರಾಪರ್ಟಿ ಹೊಂದಿರುವ ಗಿಡ ಮೂಲಿಕೆಗಳಿಂದ ಕೂಡಿದ ಅಮೃತ್ ನೋನಿ ಆಯುಕೇರ್ ಎಂಬ ಅದ್ಭುತವಾದ ಉತ್ಪನ್ನವನ್ನು ಇದೇ ದಿನ ಲೋಕಾರ್ಪಣೆಗೊಳಿಸಲಾಗುವುದು ಎಂದರು.ಸಂಸ್ಥೆಯ ಉತ್ಪನ್ನಗಳು ದೇಶದ ಗಮನಸೆಳೆಯಲು ಬೆನ್ನೆಲುಬಾಗಿ ನಿಂತ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ರೈತರು, ವೈದ್ಯರು, ವಿಜ್ಞಾನಿಗಳು, ತಂತ್ರಜ್ಞರು, ಪತ್ರಿಕೋದ್ಯಮಿಗಳು, ವಿತರಕರು, ಸಂಸ್ಥೆಯನ್ನು ಈ ಮಟ್ಟಿಗೆ ಬೆಳೆಸಲು ಕಾರಣರಾದವರನ್ನು ಹಾಗೂ ಸಮಾಜಕ್ಕೆ ಜೀವ ನವೆಸಿದ ಸಾಧಕರನ್ನು ಅಮೃತೋತ್ಸವದ ಈ ಶುಭ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಅಮೃತೋತ್ಸವ 2022, ಅಮೃತ್ ನೋನಿಯ ಬಗ್ಗೆ ಸಂಶೋಧನೆ, ವೈದ್ಯರ ನುಡಿ, ಗ್ರಾಹಕರ ಅನುಭವ, ಅಮೃತ್ ನೋನಿ ಬೆಳೆದು ಬಂದ ಹಾದಿಯ ಬಗ್ಗೆ ಒಂದು ಕಿರುಹೊತ್ತಿಗೆ ಬಿಡುಗಡೆ ಮಾಡಲಾಗುವುದು. ನೋನಿಯತ್ತ ಜಗದ ಚಿತ್ತ –ನೋನಿ ಕೃಷಿ ಹಾಗೂ ಔಷಧಿಯ ಮಹತ್ವದ ಕುರಿತು ಮೂರನೇ ಆವೃತ್ತಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ, ಕೃಷಿ ಸಚಿವ ಬಿ.ಸಿ. ಪಾಟೀಲ್, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಕೆ.ಎಸ್. ಈಶ್ವರಪ್ಪ, ಎಸ್. ರುದ್ರೇಗೌಡ, ಕೆ.ಬಿ. ಅಶೋಕ್ ನಾಯ್ಕ್, ಡಿ.ಎಸ್. ಅರುಣ್, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಎ.ಎಸ್. ಅಂಬುಜಾಕ್ಷಿ, ಮಾರ್ಕೇಂಟಿಂಗ್ ಸಂಸ್ಥೆ ಓಂ ಶ್ರೀ ಎಂಟರ್ ಪ್ರೈಸಸ್ ನಿರ್ದೇಶಕ ನಾರಾಯಣ್ ಉಪಸ್ಥಿತರಿದ್ದರು.