ಪ್ರಜಾಶಕ್ತಿ.ಇನ್ ಆನ್ ಲೈನ್ ನ್ಯೂಸ್ ಪೋರ್ಟಲ್ ಶುರುವಾದದ್ದೇ ಒಂದು ರೋಚಕ.ಡೆಕ್ಕನ್ ಹೆರಾಲ್ಡ್ ಜೀ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದ್ದ ನನಗೆ ತೃಪ್ತಿಕೊಟ್ಟ ಹಾಗೂ ದೀರ್ಘಕಾಲ ಕೆಲಸ ಮಾಡಿದ ಪತ್ರಿಕೆ ಪ್ರಜಾಶ್ರೀ, ಸಂಪಾದಕರಾದ ಸುಗಂಧಿ ಸರ್ ರವರ ಮಾರ್ಗದರ್ಶನ ಅತ್ಯಮೂಲ್ಯ.

ಕೆಲ ವಿಷಯಗಳಿಂದ ಪತ್ರಿಕಾ ಮಾಧ್ಯಮದಿಂದ ದೂರ ಉಳಿದ ಸಂದರ್ಭದಲ್ಲಿ ನಮ್ಮ ಹೆಮ್ಮೆಯ ವರದಿಗಾರರು ಮಂಜುನಾಥ್ ಶೆಟ್ಟಿ ಅವರ ಆಸಕ್ತಿ ಮತ್ತೆ ಪತ್ರಿಕೆ ಶುರು ಮಾಡಲು ಪ್ರೇರೇಪಿಸಿತು .
ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಜನರ ಸಂಕಷ್ಟಗಳನ್ನು ಮುನ್ನೆಲೆಗೆ ತರಲೇಬೇಕಾದ ತುಡಿತದ ಸಾಕಾರದ ಫಲವೇ ಪ್ರಜಾಶಕ್ತಿ.ಇನ್

ಆರಂಭದ ದಿನಗಳಲ್ಲಿ ಬಂಡಿಯನ್ನು ಮುನ್ನಡೆಸಲು ಬಹಳ ಕಷ್ಟ ಪ್ರಜಾಶಕ್ತಿ ತಂಡವು ಕೂಡ ಇಂತಹ 7ಬೀಳುಗಳನ್ನು ಅನುಭವಿಸಿ ಎದುರಿಸಿ ಇಂದು ನಿಮ್ಮ ಮುಂದೆ ಒಂದು ವರ್ಷ ಪೂರೈಸಿ ನಿಂತಿದೆ.

ಒಂದು ವಿರಾಮದ ನಂತರ ಪತ್ರಿಕೋದ್ಯಮಕ್ಕೆ ಮತ್ತೆ ಕಾಲಿಡಬೇಕಾದ ಸಂದರ್ಭ, ಅಲ್ಲದೆ ಬೆಂಗಳೂರಿನಲ್ಲಿ ಕೆಲಸ ಮಾಡಿದ ಅನುಭವ, ಶಿವಮೊಗ್ಗ ಹೊಸ ಕಾರ್ಯಕ್ಷೇತ್ರ ಎಲ್ಲಾ ಕೆಲಸಗಳು ಆದಿಯಿಂದ ಶುರು ಮಾಡಬೇಕಾದ ಅನಿವಾರ್ಯ.

ಒಂದು ಮೀಡಿಯಾ ಶುರು ಮಾಡುವುದು ಅಷ್ಟು ಸುಲಭದ ಮಾತಲ್ಲ.ಶಕ್ತಿಶಾಲಿ ಸುದ್ದಿಯ ಮೂಲ ವಿದ್ದಾಗ ಮಾತ್ರ 1ಪತ್ರಿಕೆ ಜನರ ಮನಸ್ಸನ್ನು ತಲುಪಲು ಸಾಧ್ಯ. ಪ್ರಜಾಶಕ್ತಿ ತಂಡದ ಇಚ್ಛಾಶಕ್ತಿಯ ಫಲವಾಗಿ ಇಂದು ನ್ಯೂಸ್ ಪೋರ್ಟಲ್ ಗಳ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮುಂಚೂಣಿ ನೆಲೆ ನಿಲ್ಲುವಂತಾಗಿದೆ.
ಕ್ರೈಂ ರಿಪೋರ್ಟ್ ಗಳನ್ನು ಮಾಡಿದಾಗ ಅನೇಕ ಬೆದರಿಕೆ ಕರೆಗಳು ಬಂದವು ಆದರೆ ಯಾವುದಕ್ಕೂ ಎದೆಗುಂದದೆ ಸತ್ಯವನ್ನು ಜನರ ಮುಂದಿಟ್ಟಿದ್ದೇವೆ.

ಸತ್ಯವು ಯಾವಾಗಲೂ ನಿಷ್ಠುರವಾದಿ ಸತ್ಯ ಬರದಿದ್ದರಿಂದ ಅನೇಕರು ಶತ್ರುಗಳಾಗಿ ಬದಲಾದರು . ಆದರೂ ಪತ್ರಿಕಾಧರ್ಮಕ್ಕೆ ಈ ಕ್ಷಣದವರೆಗೂ ನ್ಯಾಯ ಒದಗಿಸುತ್ತಾ ಬಂದಿದ್ದೇವೆ.

ಪ್ರಜಾಶಕ್ತಿಯ ಕೆಲವು ಫಲಶ್ರುತಿಗಳನ್ನು ನೋಡುವುದಾದರೆ…

1.ಮೆಗಾನ್ ಸಂತ ಸಂಸ್ಥೆಯಲ್ಲಿ ಪಿಪಿಇ ಕಿಟ್ ಅನ್ನು ಕಾಳಸಂತೆಯಲ್ಲಿ ಮಾರುತ್ತಿರುವ ಪ್ರಕರಣವನ್ನು ಬಯಲಿಗೆಳೆದು ಅನೇಕ ರೋಗಿಗಳಿಗೆ ಪತ್ರಿಕೆ ನೆರವಾಗಿದೆ.
2.ಕರೋನ ಸಮಯದಲ್ಲಿ ಆಂಬ್ಯುಲೆನ್ಸ್ ಗಳನ್ನು ಕೆರೆಯಲ್ಲಿ ತೊಳೆಯುತ್ತಿದ್ದ ಪ್ರಕರಣವನ್ನು ಬಯಲಿಗೆಳೆದು ಕೆರೆಯನ್ನು ಕಂಟಾಮಿನೇಷನ್ ಆಗದಂತೆ ತಡೆದ ವರದಿ ಬಗ್ಗೆ ಅನೇಕರು ಪ್ರಶಂಸಿದರು. ಈ ಕೆರೆಯನ್ನು ಸ್ವತಃ ಶಾಸಕರು ದತ್ತು ಪಡೆದದ್ದು ಗಮನಾರ್ಹ ಸಂಗತಿ.
3.ಶಾಸಕರೊಬ್ಬರು ಹೇಳಿದರೂ ಕೂಡ ಅಂಬುಲೆನ್ಸ್ ಬುಕ್ಕಿಂಗ್ಗೆ ಯದ್ವಾತದ್ವಾ ಹಣದ ಬೇಡಿಕೆ ಇಡುತ್ತಿದ್ದ ಅತಿಯಾಸೆಯಿಂದ ಆಂಬ್ಯುಲೆನ್ಸ್ ಮಾಲೀಕರಿಗೆ ಕಡಿವಾಣ ಹಾಕದ ವರದಿಯನ್ನು ಅನೇಕ ಸಂತ್ರಸ್ತರು ಇಂದಿಗೂ ನೆನೆಸುತ್ತಾರೆ.
4.ಲಾಕ್ ಡೌನ್ ಸಮಯದಲ್ಲಿ ಖಾರ್ವಿ ನಡೆಸುತ್ತಿದ್ದ ಮೆಗ್ಗಾನ್ ಕೋವಿಂದ್ ವಾರಿಯರ್ಸ್ ಗೆ ಟೆಂಡರ್ ದಾರರ ಗುರುತಿನ ಚೀಟಿ ನೀಡದೆ ಪೊಲೀಸರು ಹಾಗೂ ಕರ್ಣ ವಾರಿಯರ್ಸ್ ನಡುವಿನ ಕಿತ್ತಾಟವನ್ನು ಪತ್ರಿಕೆ ಮುನ್ನೆಲೆಗೆ ತಂದಿತು.

ಹೀಗೆ ಹಲವು ಸಾರ್ವಜನಿಕ ಸಮಸ್ಯೆಗಳನ್ನು ಪ್ರಜಾಶಕ್ತಿ ಬಿತ್ತರಿಸಿತ್ತು.

ಪ್ರಜಾಶಕ್ತಿ 1ವರ್ಷದ ಪ್ರಯಾಣದಲ್ಲಿ ಸಹಕಾರ ನೀಡಿದ ಎಲ್ಲಾ ಓದುಗರಿಗೂ ಈ ಸಂದರ್ಭದಲ್ಲಿ ಪ್ರಜಾಶಕ್ತಿ ತಂಡದಿಂದ ಕೋಟಿ ಕೋಟಿ ನಮನಗಳು. ಪ್ರಜಾಶಕ್ತಿ ಗೆ ನೆರವು ನೀಡಿದ ನನ್ನ ಎಲ್ಲ ಪತ್ರಿಕಾ ಮತ್ತು ಮಾಧ್ಯಮ ಮಿತ್ರರಿಗೂ ಹೃದಯಪೂರ್ವಕ ವಂದನೆಗಳು.

ಮುಂದೆ ಕೂಡ ಪ್ರಜಾಶಕ್ತಿ ಸದಾ ಪ್ರಜೆಗಳ ಕಷ್ಟಕ್ಕೆ ಸ್ಪಂದಿಸುತ್ತಾ ನೊಂದವರ ಧ್ವನಿಯಾಗಿ ಕಾರ್ಯ ನಿರ್ವಹಿಸಲಿದೆ ಎಂಬ ಪ್ರತಿಜ್ಞೆಯೊಂದಿಗೆ.

ಟೀಮ್ ಪ್ರಜಾಶಕ್ತಿ…