ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ನಿವಾಸಿಯೊಬ್ಬರು ತಮ್ಮ ಹೊಸ ಮನೆಯ ಗೃಹ ಪ್ರವೇಶದ ಖರ್ಚಿಗೆಂದು ತನ್ನ ಸ್ನೇಹಿತನ ಹತ್ತಿರ 1,00,000/- ರೂ ಹಣ ಪಡೆದುಕೊಂಡು ಲಗೇಜ್ ವಾಹನದಲ್ಲಿ ತಮ್ಮ ಊರಿಗೆ ಹೊರಟಿದ್ದು ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾರಂದೂರಿನ ಹತ್ತಿರ ಕೃಷಿ ಇಲಾಖೆಯ ಮುಂಭಾಗ ರಸ್ತೆಯಲ್ಲಿ ಹೋಗುತ್ತಿದ್ದಾಗ, ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ ವ್ಯಕ್ತಿಗಳು ಅಡ್ಡಹಾಕಿ 50,000/- ರೂ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ನಂತರ ಆ ವ್ಯಕ್ತಿಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರಿನ ಮೇರೆಗೆ ಗುನ್ನೆ ಸಂಖ್ಯೆ 0074/2022 ಕಲಂ 394 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ಪಿಐ ಪೇಪರ್ ಟೌನ್ ಪೊಲೀಸ್ ಠಾಣೆ, ಪಿಎಸ್ಐ ಮತ್ತು ಸಿಬ್ಬಂಧಿಗಳ ತಂಡವು ಸದರಿ ಪ್ರಕರಣದ ತನಿಖೆ ಕೈಗೊಂಡು ದಿನಾಂಕಃ- 11-05-2022 ರಂದು ಪ್ರಕರಣದ ಆರೋಪಿತರಾದ 1)ಬಸವರಾಜ, 24 ವರ್ಷ, ಕೆಂಚೇನಹಳ್ಳಿ, ಭದ್ರಾವತಿ, 2)ಭರತ್, 24 ವರ್ಷ, ಯರಗನಾಳ್, ಶಿವಮೊಗ್ಗ ಮತ್ತು 3)ಪವನ್, 26 ವರ್ಷ, ಕೆಂಚೇನಹಳ್ಳಿ, ಭದ್ರಾವತಿ ರವರುಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ ರೂ 37,000/- ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ 02 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

ವರದಿ ಮಂಜುನಾಥ್ ಶೆಟ್ಟಿ…