ಶಿವಮೊಗ್ಗ: ನಗರದಿಂದ ಸುಮಾರು 60 ಕಿಲೋಮೀಟರ್ ದೂರವಿರುವ ಪಾತ್ರೆಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ಜೆಸಿಐ ಶಿವಮೊಗ್ಗ ಶರಾವತಿ ಸಂಸ್ಥೆ ದತ್ತು ಪಡೆದು ತಿಂಗಳಿಗೆ ಒಂದು ಕಾರ್ಯಕ್ರಮದಂತೆ ಪ್ರತಿ ತಿಂಗಳು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ದಿಟ್ಟ ಹೆಜ್ಜೆ ಇಟ್ಟಿದೆ.
ಈ ತಿಂಗಳು ಶಾಲೆಗೆ ಸುಣ್ಣ-ಬಣ್ಣ ಕಲಾಕೃತಿಯ ಚಿತ್ರಗಳನ್ನು ಜೆಸಿಐ ಶಿವಮೊಗ್ಗ ಶರಾವತಿ ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿಗಳು ಸದಸ್ಯರು, ಸದಸ್ಯರ ಮಕ್ಕಳು, ಸ್ಥಳೀಯ ಗ್ರಾಮಸ್ಥರು ಸೇರಿ ಸುಣ್ಣ-ಬಣ್ಣ ಬಳಿದಿದ್ದು. ಮುಂದಿನ ತಿಂಗಳುಗಳಲ್ಲಿ ಕುರ್ಚಿ ಬೆಂಚು, ಸ್ಮಾರ್ಟ್ ಕ್ಲಾಸ್, ಇ ಲೈಬ್ರರಿ, ತರಕಾರಿಗಳ ಕೈತೋಟ, ಗುಣಮಟ್ಟದ ಶಿಕ್ಷಣ ದ ಅಭಿವೃದ್ಧಿಯ ಗುರಿಯನ್ನು ಹೊಂದಿದ್ದಾರೆ.ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕರು ಮೆಚ್ಚುವಂತ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಗ್ರಾಮಸ್ಥರ ಮಕ್ಕಳಿಗೆ ಜೆಸಿಐ ಶಿವಮೊಗ್ಗ ಶರಾವತಿ ಮಕ್ಕಳಿಗೆ ಕ್ರಿಕೆಟ್ ಟೂರ್ನಿಮೆಂಟ್ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸೌಮ್ಯ ಅರಳಪ್ಪ, ಕಾರ್ಯದರ್ಶಿ ಮಮತಾ ಶಿವಣ್ಣ, ಉಪಾಧ್ಯಕ್ಷ ಸ್ವಪ್ನ ಸಂತೋಷ್, ದಿವ್ಯ ಪ್ರವೀಣ್, ಶೋಭಾ ಸತೀಶ್, ಕಾರ್ಯಕ್ರಮದ ಆಯೋಜಕರಾದ ಸುದರ್ಶನ್ ತಾಯಿ ಮನೆ, ಸಂಸ್ಥಾಪಕ ಅಧ್ಯಕ್ಷ ಜ್ಯೋತಿ ಅರಳಪ್ಪ, ಸಿದ್ದರಾಮಣ್ಣ, ಮೋಹನ್, ಸಮಾಜಸೇವಕರಾದ ಚಿರಂಜೀವಿ ಬಾಬು, ನವೀನ್ ತಲಾರಿ, ಲೋಹಿತ್, ಈ ಕಾರ್ಯದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಆದ ಪ್ರಭಾಕರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಜಗದೀಶ್, ಸದಸ್ಯರಾದ ಅರುಣ್, ಪ್ರವೀಣ್, ಸುಮಲತ, ಭವಾನಿ, ಸುಮ, ಕಾವ್ಯಾ, ವಿಜಯಾ, ರಜಿನಿ, ಸವಿತ, ಮಾಲತಿ, ಮಂಜು, ಆಶಾ, ರವಿ, ರೂಪಾ, ಆದರ್ಶ, ಪ್ರಕಾಶ್, ರಾಜು ಉಪಸ್ಥಿತರಿದ್ದರು.