ಶಿವಮೊಗ್ಗ: ಆಸ್ಪತ್ರೆಗೆ ಬರುವ ರೋಗಿಗಳನ್ನು ಗುಣಮುಖವಾಗಿಸುವಲ್ಲಿ ನರ್ಸ್ಗಳ ಪಾತ್ರ ದೊಡ್ಡದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ಅಧ್ಯಕ್ಷ ಸತೀಶ್‌ಚಂದ್ರ ಹೇಳಿದರು.

ಶಿವಮೊಗ್ಗ ನಗರದಲ್ಲಿ ಸರ್ಜಿ ಆಸ್ಪತ್ರೆ ಹಾಗೂ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ಎಲ್ಲ ದಿನಗಳಲ್ಲಿ ಹಗಲು ಇರುಳು ಎನ್ನದೇ ಅಪರಿಚಿತರ ಜೀವನಕ್ಕಾಗಿ ದುಡಿದು, ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸದೇ ಇತರರ ಆರೈಕೆಯಲ್ಲಿ ಸದಾ ತಮ್ಮ ಸಮಯವನ್ನು ಮೀಸಲಿಡುತ್ತಾರೆ ಎಂದು ತಿಳಿಸಿದರು.
ಬರುವ ಎಲ್ಲ ರೋಗಿಗಳಿಗೂ ಉತ್ತಮ ಸೇವೆ ನೀಡುತ್ತ ಹಬ್ಬ ಹರಿದಿನಗಳನ್ನು ಮರೆತು ನಿಸ್ವಾರ್ಥ ಸೇವೆಯನ್ನು ರೋಗಿಗಳೊಂದಿಗೆ ಕಳೆಯುತ್ತಿರುವುದು ನಿಜಕ್ಕೂ ಮಹತ್ವದ ಕೆಲಸ ಎಂದು. ರೋಗಿಗಳು ಗಾಢÀ ನಿದ್ರೆಯಲ್ಲಿದ್ದರೂ, ಅವರು ಎಚ್ಚರವಿದ್ದು, ರೋಗಿಗಳ ನಿಗಾವಹಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ ಎಂದರು.

ರೋಟರಿ ಸಂಸ್ಥೆಯ ಜಿ.ವಿಜಯ್‌ಕುಮಾರ್ ಮಾತನಾಡಿ, ವೈದ್ಯರು ಹಾಗೂ ರೋಗಿಗಳ ನಡುವಿನÀ ಸಂಬAಧವನ್ನು ಬೆಸೆಯುವ ಕೊಂಡಿಯಾಗಿ ದಾದಿಯರು ಒಳ್ಳೆಯ ಕೆಲಸ ಮಾಡುತ್ತಾರೆ. ಇಂದು ಅಂತರಾಷ್ಟ್ರೀಯ ದಾದಿಯರ ದಿನಾಚರಣೆಯ ಪ್ರಯುಕ್ತ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಯಿAದ, ಸರ್ಜಿ ಆಸ್ಪತ್ರೆಯ 15 ಜನ ದಾದಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಬಹಳ ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಸರ್ಜಿ ಆಸ್ಪತ್ರೆಗಳ ಸಮೂಹದ ವೈದ್ಯಕೀಯ ನಿರ್ದೇಶಕ ಡಾ. ಧನಂಜಯ ಸರ್ಜಿ ಮಾತನಾಡಿ, ರೋಗಿಗಳ ಚಿಕಿತ್ಸೆ ಸಮಯದಲ್ಲಿ ವೈದ್ಯರ ಮಹತ್ವ ಎಷ್ಟಿದೆಯೋ, ಅಷ್ಟೇ ಮಹತ್ವ ದಾದಿಯರದೂ ಇದೆ. ವೈದ್ಯರು ಮೆದುಳಾದರೆ, ದಾದಿಯರು ಹೃದಯವಿದ್ದಂತೆ. ಮೆದುಳು ಮತ್ತು ಹೃದಯ ಎರಡೂ ಮನುಷ್ಯನಿಗೆ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ರೋಗಿಗೂ ಸಹ. ಹಾಗಾಗಿ ದಾದಿಯರ ಸೇವೆ ಅತಿ ಶ್ರೇಷ್ಠವಾದದ್ದು, ಇಂತಹ ದಾದಿಯರ ಸೇವೆಯನ್ನು ಗುರುತಿಸಿ, ಜೆಸಿಐ ಸಂಸ್ಥೆಯವರು ದಾದಿಯರಿಗೆ ಸನ್ಮಾಸಿದ್ದು ಬಹಳ ಶ್ಲಾಘನೀಯ ಎಂದು ನುಡಿದರು.

ಅಂತರಾಷ್ಟ್ರೀಯ ದಾದಿಯರ ದಿನಾಚರಣೆ ಪ್ರಯುಕ್ತ ಉತ್ತರಿ ಮೇರಿ, ಭಾರತಿ, ಅಣ್ಣಯ್ಯ, ಶಶಿಕಲಾ ಎಸ್.,
ಕೃಷ್ಣ ನಾಯ್ಕ್, ವೀಣಾ ಎನ್.ಎ, ಚೈತ್ರಾ ಎಸ್.ಎನ್., ಭಾಗ್ಯಶ್ರೀ, ಅಸ್ಮತ್, ಭಾಗ್ಯಶ್ರೀ, ಮಧು, ರೂಪಾ,
ದೇವರಾಜ್, ರಶ್ಮಿ, ಮಾಲಿನಿ ಅವರಿಗೆ ಸನ್ಮಾನಿಸಲಾಯಿತು.
ಆಸ್ಪತ್ರೆಯ ನಿರ್ದೇಶಕಿ ನಮಿತಾ ಸರ್ಜಿ, ವೈದ್ಯಕೀಯ ಅಧೀಕ್ಷಕ ಡಾ. ಸತೀಶ್ ಹೆಚ್.ಎಸ್., ಅನುಷ್‌ಗೌಡ, ಸಂತೋಷ್‌ಕುಮಾರ್, ಕಿಶೋರ್‌ಕುಮಾರ್, ಡಾ. ಲಲಿತಾ ಭರತ್ ಹಾಗೂ ಸರ್ಜಿ ಆಸ್ಪತ್ರೆಯ ಸಮೂಹಗಳ ಎಲ್ಲಾ ವೈದ್ಯರುಗಳು, ದಾದಿಯರು ಹಾಗೂ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…