ಶಿವಮೊಗ್ಗ: ವಿಶ್ವದಾದಿಯರ ದಿನವನ್ನು ಇಲ್ಲಿನ ಸೆಕ್ಯೂರ್ ಆಸ್ಪತ್ರೆಯಲ್ಲಿ ಸರಳವಾಗಿ ಆಚರಿಸಲಾಯಿತು.ದಾದಿಯರೇ ದೇವರು, ಅವರ ಸೇವೆ ಭಗವಂತನಿಗೆ ಪ್ರಿಯವಾಗುತ್ತದೆ. ಅಲ್ಲದೇ ರೋಗಿಗಳು ಬೇಗನೇ ಗುಣವಾಗಲು ಸಹಾಯಕವಾಗುತ್ತದೆ ಎಂದು ಆಸ್ಪತ್ರೆಯ ವೈದ್ಯ ರು ತಿಳಿಸಿದರು.
ಇದೇ ಸಂದರ್ಭದಲ್ಲಿ 35 ವರ್ಷಗಳ ನರ್ಸಿಂಗ್ ಸೇವೆಯನ್ನು ಸಲ್ಲಿಸಿರುವ ಖಾತುನಥ್ ಸಾಬ್ ಇವರನ್ನು ಆಹ್ವಾನಿಸಿ ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಕಿರಿಯ ನರ್ಸ್‌ಗಳಿಗೆ ವೃತ್ತಿ ಜೀವನದ ಹಾದಿ ಹಾಗೂ ಅದರ ಪರಿಕಲ್ಪನೆಯನ್ನು ತಿಳಿಸಿ ಕೊಡುತ್ತಾ ರೋಗಿಗಳೇ ನಮ್ಮ ದೇವರು ಅವರ ಮುಖದಲ್ಲಿ ನಗುವನ್ನು ಮೂಡಿಸುವ ಆರೈಕೆಯನ್ನು ವಿಶ್ವದ ಎಲ್ಲಾ ದಾದಿಯಂದಿರು ಮಾಡಬೇಕೆಂದು ವೈದ್ಯರು ಮನವಿ ಮಾಡಿದರು.
ಶೂರೆನ್ಸ್ ನೈಟಿಂಗೇಲ್ ಅವರನ್ನು ನೆನೆಸುತ್ತಾ ಎಲ್ಲಾ ದಾದಿಯಂದಿರಿಗೂ ಪ್ರೋತ್ಸಾಹಿಸಿದರು. ಕಾರ್ಯಕ್ರಮದಲ್ಲಿ ಸೆಕ್ಯೂರ್ ಆಸ್ಪತ್ರೆಯ ವೈದ್ಯರಾದ ಡಾ. ಸೌರಭ್ ಸಿ. ಹಿರೇಮಠ, ಡಾ. ಹರೀಶ್ ಕೆ. ಆರ್., ಡಾ. ವಿನಾಯಕ್ ಪಿ ಹೆಗ್ಗಡೆ, ಡಾ. ಅಭಿಷೇಕ್ ನುಚ್ಚಿನ್, ಡಾ. ಅಪರ್ಣಾ ಕೆ.ಎಸ್. ಹಾಗೂ ಸೆಕ್ಯೂರ್ ಆಸ್ಪತ್ರೆಯ ಆಡಳಿತಾಧಿಕಾರಿ ಶಿವಕುಮಾರ್ ಕೆ.ಸಿ. ಇದ್ದರು. ಎಲ್ಲಾ ನರ್ಸ್ ಸಿಬ್ಬಂಧಿಗಳಿಗೆ ಉಡುಗೊರೆ ನೀಡಲಾಯಿತು.