ಶಿವಮೊಗ್ಗ ನಗರದ ಕುಂಬಾರ ಬೀದಿಯಲ್ಲಿ ಮಣ್ಣಿನಲ್ಲಿ ಆಧುನಿಕ ರೀತಿಯಲ್ಲಿ ತಯಾರಾದ ಉತ್ಪನ್ನಗಳ ಹೋಲ್ ಸೇಲ್ ಹಾಗೂ ರಿಟೇಲ್ ರಿಯಾಯತಿ ದರದಲ್ಲಿ ದೊರೆಯುವ ಪೋಟರಿ ಡೆವಲಪ್ಮೆಂಟ್ ಸೆಂಟರ್ ಮಳಿಗೆ ಇಂದು ಪ್ರಾರಂಭ ಆಯಿತು.ಇದು ಕರ್ನಾಟಕದ ಮೊದಲ ಮಳಿಗೆ ಆಗಿದೆ, ಇದನ್ನು ನಗರದ ಭಾಜಪ ಯುವ ಮುಖಂಡರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರುಗಳು ಆದ ಕೆ.ಈ.ಕಾಂತೇಶ್ ರವರು ಉದ್ಘಾಟನೆ ಮಾಡಿದರು.ನಗರದ ಉಪಮೇಯರ್ ಗನ್ನಿ ಶಂಕರಣ್ಣನವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಮಹಾಕಾರ್ಯಕ್ಕೆ ನೂತನ ಮೂಲ್ಯ ರವರ ಕಾರ್ಯ ಅತ್ಯಮೂಲ್ಯ.

ಕಾರ್ಯಕ್ರಮದಲ್ಲಿ ಕರ್ನಾಟಕ ಕುಂಬಾರ ಯುವ ಸೈನ್ಯದ ರಾಜ್ಯ ಕೋಶಾಧ್ಯಕ್ಷರಾದ ಶ್ರೀ ರಾಜಶೇಖರ್, ಚಿತ್ರದುರ್ಗ ಜಿಲ್ಲಾ ಓಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷರು, ಕರ್ನಾಟಕ ಕುಂಬಾರ ಯುವ ಸೈನ್ಯದ ರಾಜ್ಯ ಗೌರವಾಧ್ಯಕ್ಷರು ಆದ ಶ್ರೀ ಪ್ರವೀಣ್ ಕುಮಾರ್ ಕೆ.ಟಿ.ರವರು, ಪಾಟರಿ ಡೆವಲಪ್ಮೆಂಟ್ ಸೆಂಟರ್ ನ ಪಾಲುದಾರರಾದ ಶ್ರೀಮತಿ ಚಂದ್ರಕಲಾ. ಕೆ. ಜಿ. ಹಾಗೂ ಶ್ರೀಮತಿ ಶಿಲ್ಪಾ ಗದೀಗೇಶ್ ಕುಂಬಾರವರು, ಗದಿಗೇಶ್ ರವರು, ಶ್ರೀ ಕುಂಬೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಶ್ರೀ ಕುಂಬೇಶ್ವರ ಮಡಿಕೆ ಕೈಗಾರಿಕಾ ಸಂಘದ ನಿರ್ದೇಶಕರಾದ ಜಿ.ವೀರೇಶ್ ರವರು, ಶ್ರೀ ಕುಂಬೇಶ್ವರ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಹಾಗೂ ಶ್ರೀ ಕುಂಬೇಶ್ವರ ಮಡಿಕೆ ಕೈಗಾರಿಕಾ ಸಂಘದ ಉಪಾಧ್ಯಕ್ಷರು ಆದ ಶ್ರೀ ಹಾಲೇಶ್ ರವರು, ಶ್ರೀ ಕುಂಬೇಶ್ವರ ಪತ್ತಿನ ಸಹಕಾರ ಸಂಘದ ಹಾಗೂ ಶ್ರೀ ಕುಂಬೇಶ್ವರ ಮಡಿಕೆ ಕೈಗಾರಿಕಾ ಸಂಘದ ನಿರ್ದೇಶಕರಾದ ಹೆಚ್. ಈ.ತಿಪ್ಪೇಶ್ ರವರು,ಶ್ರೀ ಕುಂಬೇಶ್ವರ ಮಡಿಕೆ ಕೈಗಾರಿಕಾ ಸಂಘದ ಅಧ್ಯಕ್ಷರಾದ ಷಣ್ಮುಖಪ್ಪರವರು, ಶ್ರೀ ಕುಂಬೇಶ್ವರ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಹಾಗೂ ಶ್ರೀ ಕುಂಬೇಶ್ವರ ಮಡಿಕೆ ಕೈಗಾರಿಕಾ ಸಂಘದ ನಿರ್ದೇಶಕರಾದ ಎಂ.ಚಂದ್ರಶೇಖರ್ ರವರು, 30ನೇ ವಾರ್ಡ್ ನ ಅಧ್ಯಕ್ಷರಾದ ಪ್ರಕಾಶ್ ರವರು, ಆಟೋ ರವಿರವರು, ಸಮಾಜ ಬಾಂದವರೂ, ಸಾರ್ವಜನಿಕರು ಬಂದು ಪ್ರೋತ್ಸಾಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ ಮಂಜುನಾಥ್ ಶೆಟ್ಟಿ…