ಶಿವಮೊಗ್ಗ ನಗರದ, ಬಿ.ಹೆಚ್.ರಸ್ತೆಯ ಕರ್ನಾಟಕ ಸಂಘ ಪಕ್ಕದ ಸರ್ಕಾರಿ ಕನ್ನಡ ಮತ್ತು ಆಂಗ್ಲ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆ (ಮೈನ್ ಮಿಡ್ಲ್ ಸ್ಕೂಲ್) ಶಾಲಾ ಆವರಣವು ಸ್ವಚ್ಛತೆಯಿಂದ ಕಣ್ಣುಗೊಳಿಸುತ್ತಿತು, ಸಣ್ಣ ಸಣ್ಣ ಪುಟಾಣಿ ಮಕ್ಕಳು ಹೊರಬಾರದ ಹೊರೆಯ ಒತಂತೆ ತಮ್ಮ ಪಾಠದ ಚೀಲವ ಒತ್ತಿಕೊಂಡು ಶಾಲೆಯ ಆವರಣದಲ್ಲಿ ಬರುತ್ತಿದ್ದಂತೆ, ಹೊಂಗೆಯ ಮರಗಳು ತಣ್ಣನೆ ಗಾಳಿಯ ಬಿಸುತ್ತಾ ಕರೆದರೆ, ಕೆಂಪನೆ ಹೂವುಗಳು ತುಂಬಿದ ಗುಲ್ಮೊರ್ ಮರಗಳು ಹೂವುಗಳನ್ನು ಮೇಲಿಂದ ಸುರುಸುತ್ತ ಸ್ವಾಗತ ಕೋರಿದರು.

ಶಿಕ್ಷಕರು, ಹಾಗೂ ಅಡಿಗೆಯವರು ಅಂಗಳದಲ್ಲಿ ರಂಗೋಲಿಯ ಚಿತ್ತಾರವ ಬಿಡಿಸಿ, ಮಾವಿನ ತೊರಣ ಕಟ್ಟಿ, ಬಾಗಿಲಿಗೆ ಹೂವಿನ ಮಾಲೆಯ ಹಾಕಿ, ಮಕ್ಕಳಿಗೂ ಹಾಗೂ ಪೋಷಕರಿಗೆ ಸ್ವಾಗತ ಕೋರಿದರು.

ಮೈನ್ ಮಿಡ್ಲ್ ಸ್ಕೂಲ್ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ಶಾಲೆಗೆ ಬಂದಂತಹ ಮಕ್ಕಳಿಗೆ ಹೂವನ್ನು ನೀಡಿ ಸ್ವಾಗತಿಸಿ, ನಂತರ ತರಗತಿಯಲ್ಲಿ ಹೋಗಿ ಸಿಹಿಯನ್ನು ಹಂಚಿದರು.

ಆವರಣದಲ್ಲಿ ಇರುವ ಸರ್ಕಾರಿ, ಕನ್ನಡ, ತಮಿಳು, ಉರ್ದು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಹಾಗೂ ಪದವಿ ಪೂರ್ವ ಕಾಲೇಜು ಶಿಕ್ಷಕರಿಗೆ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಸಿಹಿಯನ್ನು ಹಂಚಿ ಸ್ವಾಗತ ಕೋರಲಾಯಿತು.

ಈ ಸಂದರ್ಭದಲ್ಲಿ ಮೈನ್ ಮಿಡ್ಲ್ ಸ್ಕೂಲ್ SDMC ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಕೆ. ಮುಖ್ಯ ಶಿಕ್ಷಕರಾದ ಶ್ರೀ ಮತಿ ಶಾಂತಾ ಬಾಯಿ, ಸಹ ಶಿಕ್ಷಕರಾದ ಶ್ರೀ ಮತಿ ಕವಿತಾ, ಶ್ರೀ ಮತಿ ಸ್ವರ್ಣ ಗೌರಿ, ಶ್ರೀ ಪ್ರಕಾಶ್, ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…