ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮೇ 16 ರಿಂದ ಆರಂಭವಾದ ಮಿನಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯ ಕ್ರೀಡಾಪಟುಗಳಾದ ಜೈನ್ ಪಬ್ಲಿಕ್ ಶಾಲೆಯ ಮದಿಯಾ ಇಬ್ರಾಹಿಂ 46-49kg, ಸವಳಂಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಲ್ಲಿಕಾರ್ಜುನ್ 58-61kg,
ಬೊಮ್ಮನಕಟ್ಟೆಯ ರಾಮಕೃಷ್ಣ ಶಾಲೆಯ ವಂಶಿ 61-64kgಮತ್ತು ಕಸ್ತೂರಿಬಾ ಶಾಲೆಯ ಕಾವ್ಯ 49-52kg ವಿಭಾಗಗಳಲ್ಲಿ ತೃತೀಯ
ಪದಕವನ್ನು ಪಡೆದು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಈ ಸಂದರ್ಭದಲ್ಲಿ ಕ್ರೀಡಾಪಟುಗಳ ಕೋಚ್ ವೆಂಕಟೇಶ್ ರವರಿಗೆ ಹಾಗೂ ಕ್ರೀಡಾಪಟುಗಳಿಗೆ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವಮೊಗ್ಗ ವಿನೋದ್ ರವರು ಅಭಿನಂದಿಸಿದ್ದು ಕಳೆದ ಬಾರಿ ನಡೆದ ಮಿನಿ ಒಲಿಂಪಿಕ್ಸ್ ನಲ್ಲಿ ಜಿಲ್ಲೆಗೆ 1ಪದಕ ಬಂದಿದ್ದು ಈ ವರ್ಷ 4ಪದಕಗಳು ಬಂದಿದ್ದು ಸಂತಸವಾಗಿದು ಜಿಲ್ಲೆಯಲ್ಲಿ ಬಾಕ್ಸಿಂಗ್ ಕ್ರೀಡೆ ಯಶಸ್ಸಿನತ್ತ ಸಾಗುತ್ತಿದು ಇದರಿಂದ ಜಿಲ್ಲೆಯಲ್ಲಿನ ಮಕ್ಕಳು ಹಾಗೂ ಯುವ ಪೀಳಿಗೆ ಮತ್ತು ಶಾಲೆಗಳು ಬಾಕ್ಸಿಂಗ್ ಕ್ರೀಡೆಯ ಕಡೆ ಒಲವು ತೋರುತ್ತಿದ್ದು ಸರ್ಕಾರ ಮತ್ತು ಸ್ಥಳೀಯ ಕ್ರೀಡಾ ಇಲಾಖೆ ಬಾಕ್ಸಿಂಗ್ ತರಬೇತಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಇನ್ನೂ ಹೆಚ್ಚಿನ ಸಾಧನೆಗಳನ್ನು ತೋರುವಲ್ಲಿ ಸಹಕಾರವಾಗುವುದು.