ಶಿವಮೊಗ್ಗ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಕೆಲವು ಪ್ರದೇಶದಲ್ಲಿ ಮನೆಗಳು ಹಾನಿಗೀಡಾಗಿವೆ . ಪಾಲಿಕೆಯ ವತಿಯಿಂದ ತುರ್ತು ಪರಿಹಾರ ಹಾಗೂ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಯಡಿಯಲ್ಲಿ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು.

ಸ್ಮಾರ್ಟ್ ಸಿಟಿಯ ಕಾಮಗಾರಿಯಿಂದಾಗಿ ಜೆಸಿಬಿ ಯಂತ್ರ ಬಳಕೆಯಿಂದ ಮರಗಳ ಬೇರುಗಳು ನಾಶವಾಗಿದ್ದು ಹಲವೆಡೆ ಮರಗಳು ನೆಲಕ್ಕುರುಳುತ್ತಿವೆ. ಈ ರೀತಿಯ ತುರ್ತು ಸಂದರ್ಭಗಳಲ್ಲಿ ನಾಗರೀಕರ ಸಮಸ್ಯೆಗಳ ಪರಿಹಾರಕ್ಕಾಗಿ 24 /7 ಸಹಾಯವಾಣಿ ಪ್ರಾರಂಭಿಸುವುದು ಹಾಗೂ ಸಂಬಂಧಪಟ್ಟ ವಾರ್ಡ್ಗಳ ಕಂದಾಯ ನಿರೀಕ್ಷಕರ ಆರೋಗ್ಯ ನಿರೀಕ್ಷಕರ ಎಂಜಿನಿಯರ್ ಗಳನ್ನು ಒಳಗೊಂಡಂತೆ ಕಾರ್ಯಪಡೆಯನ್ನು ಕೂಡಲೇ ರಚಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮಾಡಲಾಯಿತು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ರಮೇಶ್ ಹೆಗಡೆ ರಂಗೇಗೌಡರು ಉಪಸ್ಥಿತರಿದ್ದರು

ವರದಿ ಮಂಜುನಾಥ್ ಶೆಟ್ಟಿ…