ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿದ ಅಕಾಲಿಕ ಭಾರಿ ಮಳೆಯಿಂದಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಇರುವ ನೈಸರ್ಗಿಕ ಮತ್ತು ಹರಿದ್ರ ನದಿಯ ಹಳ್ಳಗಳು ತುಂಬಿ ಹರಿದ ಪರಿಣಾಮ ಹಳ್ಳದ ನೀರಿನ ಜೊತೆಗೆ ಗಿಡಗಂಟೆಗಳು ಸಹ ಹರಿದುಬಂದು ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ನ ಸ್ಟೀಲ್ ಗೆ ಅಳವಡಿಸಲಾದ ಸ್ವಯಂ ಚಾಲಿತ ಗೇಟ್ ಗೆ ಕಸಕಡ್ಡಿಗಳು ಹಾಗೂ ನೀರಿನ ರಭಸಕ್ಕೆ ಹರಿದುಬಂದ ಗಿಡಗಂಟೆಗಳು ಸಿಕ್ಕಿಹಾಕಿಕೊಂಡ ಪರಿಣಾಮ ಪಿಕಪ್ ಗೆ ಹರಿದುಬರುತ್ತಿರುವ ನೀರು ಹೊರಹೋಗದೆ ಸಂಗ್ರಹ ವಾದ್ದರಿಂದ ಹಿನ್ನೀರಿಗೆ ಹೊಂದಿಕೊಂಡಿರುವ ಗ್ರಾಮಗಳಿಗೆ ನೀರು ನುಗ್ಗಿ ರಸ್ತೆ ಸಂಪರ್ಕ ಕಡಿತವಾಗಿದೆ. ಹಾಗೂ ಹಿನ್ನೀರಿನಿಂದ ಗ್ರಾಮದ ರೈತರ ಹೊಲಗದ್ದೆಗಳಿಗೆ ನೀರು ನುಗ್ಗಿ ರೈತರ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ಈ ಹಿಂದೆ ದೇವರಬೆಳಕೆರೆ ಪಿಕಪ್ ಡ್ಯಾಮ್ ಗೆ ಭೇಟಿ ನೀಡಿದಾಗ ಸಮಸ್ಯೆಯ ಕುರಿತು ರೈತರು ಗಮನಕ್ಕೆ ತಂದಿದ್ದರು ಆ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಮುಖ್ಯಕಾರ್ಯದರ್ಶಿಯವರಿಗೆ ಗೆಟ್ ಅಳವಡಿಸುವಂತೆ ಹಾಗೂ ಕಾಮಗಾರಿಗೆ ಅನುಮೋದನೆ ನೀಡುವಂತೆ ಸೂಚಿಸಿದ್ದು, ಅದರಂತೆ ಸುಮಾರು 40 ಲಕ್ಷದ ಕಾಮಗಾರಿಗೆ ಅನುಮೋದನೆ ದೊರಕಿದ್ದು, ಈ ನಿಟ್ಟಿನಲ್ಲಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಯಿತು ಹಾಗೂ ಹಿನ್ನೀರಿನಿಂದ ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಇಂಜಿನಿಯರ್ ಗಳು, ಹಾಗೂ ಎಂಜಿನಿಯರುಗಳು, ಗ್ರಾಮಸ್ಥರು, ರೈತ ಮುಖಂಡರು, ನೀರು ಬಳಕೆದಾರರ ಸಂಘದ ಅಧ್ಯಕ್ಷರುಗಳು, ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…