ಶಿವಮೊಗ್ಗ: ಕೇರಳದ ಕಾಸರಗೋಡಿನ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯವು ನೀಡುವ ಕನ್ನಡ ಪಯಸ್ವಿನಿ ಪ್ರಶಸ್ತಿ 2022 ಶಿವಮೊಗ್ಗದ ಡಾ.ಕೆ.ಜಿ .ವೆಂಕಟೇಶ್ ರವರಿಗೆ ಅವರ ಸಂಶೋಧನಾ ಲೇಖನಗಳಿಗಾಗಿ ದೊರೆತಿದೆ.
ದಿನಾಂಕ 21/5/22ರಂದು ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ ವೇದಿಕೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ನೀಡಲಾಯಿತು. ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ವಾಮನರಾವ್ ಬೇಕಲ್ ಮತ್ತು ಕೋಶಾಧ್ಯಕ್ಷರಾದ ಸಂಧ್ಯಾರಾಣಿ ಟೀಚರ್ ರವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ರಾಮರಾಜ ಕ್ಷತ್ರಿಯ ಯಾನೆ ಕೋಟೆಗಾರ್ ಸೇವಾ ಸಂಘದ ಗೌರವಾಧ್ಯಕ್ಷರಾದ ನಿರಂಜನ ಕೊರಕೋಡು ಅಧ್ಯಕ್ಷರಾದ ಕಮಲಾಕ್ಷ ಕಲ್ಲುಗದ್ದೆ ಶುಭಕೋರಿದರು.
ಮುಖ್ಯ ಅತಿಥಿಗಳಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿ ಬಾಗಿಲು, ಸತೀಶ್ ಕೂಡ್ಲು ,ವಿದ್ಯಾನಂದ ಹೂಡೆ ,ಕಮಲಾಕ್ಷ ಅಣಂಗೂರು ,ಉದಯವಾಣಿ ಪತ್ರಿಕೆಯ ಕಾಸರಗೋಡು ವರದಿಗಾರರಾದ ಪ್ರದೀಪ್ ಬೇಕಲ್ ಭಾಗವಹಿಸಿದ್ದರು. ಕಾರ್ಯದರ್ಶಿ ಜಗದೀಶ್ ಕೂಡ್ಲು ನಿರ್ವಹಣೆ ಮಾಡಿದರು.
ಕೇರಳದಲ್ಲಿ ಹರಿಯುವ ಚಂದ್ರಗಿರಿ ನ ಉಗಿದಿಯು ಕರ್ನಾಟಕದಿಂದ ಹರಿಯುತ್ತಿದ್ದು ಅದಕ್ಕೆ ಕರ್ನಾಟಕ ದಲ್ಲಿ ಪಯಶ್ವಿನಿ ಎಂಬ ಹೆಸರು ಇದ್ದು ಅದೇ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.ಈಹಿಂದೆ ಪ್ರಶಸ್ತಿಯು ಹಿರಿಯ ವಿದ್ವಾಂಸರಾದ ಕೆ.ವಿ.ತಿರುಮಲೇಶ್ ,ಡಿ.ನರಸಿಂಹಭಟ್,ಡಾ.ಕಯ್ಯಾರ ಕಿಯ್ಯಣ್ಣರೈ , ರಾಮಕೃಷ್ಣ ಮಯ್ಯ ಸಿರಿಬಾಗಿಲು, ಶೇಣಿ ಗೋಪಾಲಕೃಷ್ಣ ಭಟ್,ಮುಂತಾದವರಿಗೆ ಅವರ ಸಾಧನೆಗಳಿಗಾಗಿ ದೊರೆತಿದೆ.
ಡಾ.ಕೆ.ಜಿ. ವೆಂಕಟೇಶ್ ಮಾತನಾಡಿ ಕನ್ನಡ ನಾಡು ಮತ್ತು ಕೇರಳದ ಬಾಂಧವ್ಯದ ಬಗ್ಗೆ ತಿಳಿಸಿ ಕನ್ನಡ ಭಾಷೆ ಮತ್ತು ಸಂಸ್ಕøತಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಕನ್ನಡದ ಕಲೆಗಳ ಪರಿಚಯವನ್ನು ಮಾಡಿಕೊಟ್ಟರು.ನಂತರ ಗ್ರಂಥಾಲಯದಲ್ಲಿರುವ ವಿಶೇಷ ಪುಸ್ತಕಗಳನ್ನು ನೋಡಿ ರೆವರೆಂಡ್ ಕಿಟ್ಟಲ್ ರವರ ನಿಘಂಟಿನ ಮೂಲಪ್ರತಿಯನ್ನು ಗುರುತಿಸಿ.ಸಂತೋಷಗೊಂಡು ಗ್ರಂಥಾಲಯಕ್ಕೆ ಇನ್ನೂ ಅನೇಕ ಗ್ರಂಥಗಳನ್ನು ನೀಡುವುದಾಗಿ ತಿಳಿಸಿದರು.ಕನ್ನಡದ ಬಗ್ಗೆ ಇರುವ ಪ್ರೀತಿಗಾಗಿ ಗ್ರಂಥಾಲಯ ಸ್ಥಾಪನೆ ಮಾಡಿ 20 ವರ್ಷದಿಂದ ಅದನ್ನು ನಡೆಸಿಕೊಂಡು ಉಚಿತವಾಗಿ ವಿದ್ಯಾರ್ಥಿಗಳಿಗೆ ಸಂಶೋಧಕರಿಗೆ ಪುಸ್ತಕವನ್ನು ನೀಡುವುದು ಶ್ಲಾಘನೀಯ ಕಾರ್ಯ ಎಂದರು.