ಬಸವನಗದ್ದೆ ನ್ಯೂಸ್…

ತೀರ್ಥಹಳ್ಳಿ ತಾಲ್ಲೂಕಿನ ಬಸವನಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳಾದ ಶ್ರೀ.ಕನಕರಾಜ್ ಅನಂತಯ್ಯ ಗೌಡ ರವರು ಶಾಲಾ ಮಕ್ಕಳಿಗೆ ಆಕರ್ಷಣೀಯವಾಗಲು ಜಾರುಬಂಡೆ ,ಇನ್ನಿತರ ಆಟದ ಸಾಮಾಗ್ರಿಗಳನ್ನು ಸುಮಾರು ಒಂದು ಲಕ್ಷ ಮೌಲ್ಯದ ಸಾಮಾಗ್ರಿಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿರುತ್ತಾರೆ.

ಈ ಕಾರ್ಯಕ್ರಮ ದಲ್ಲಿ ಕನಕರಾಜ್ ಅವರ ಆತ್ಮೀಯ ಗೆಳೆಯರ ಬಳಗ, ಲಯನ್ಸ್ ರಾಜಶೇಖರಯ್ಯ ರಾಜ್ಯಪಾಲರು ಲಯನ್ಸ್ ಬೆಂಗಳೂರು , ಶ್ರೀ ಗಿರಿಧರ್, ಶ್ರೀ, ತಿಮ್ಮೇಗೌಡ, ಶ್ರೀ ಸುಪ್ರಭಾತ,ತೀರ್ಥಹಳ್ಳಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ಶ್ರೀ.ಸಿರಿಬೈಲ್ ಧರ್ಮೇಶ್, ಹಾಗೂ ಕಾರ್ಯದರ್ಶಿಯಾದ ಶ್ರೀ, ಶ್ರೀನಾಥ್ ಜೋಯಿಸ್, ಶ್ರೀ, ಮಂಜುನಾಥ್, ಹಾಗೂ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಾದ ಶ್ರೀ.ಚಂದ್ರ.ಕೆ. ಬಿ.ಹಾಗೂ ಗ್ರಾಮ ಪಂಚಾಯಿತಿ ಹಣಗೆರೆ ಅಧ್ಯಕ್ಷ ರಾದ ಶ್ರೀಮತಿ.ಯಶೋಧ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ.ಸರೋಜ ಹಾಗೂ ತಾಲೂಕು ಪಂಚಾಯತಿ ಸದಸ್ಯರಾದ ಶ್ರೀ.ಸಾಲೆಕೊಪ್ಪ ರಾಮಚಂದ್ರ ರವರು ಹಾಗೂ ಕನ್ನಂಗಿ ಶೇಷಾದ್ರಿ ಗೌಡರು ಹಾಗೂ ಗೆಳೆಯರ ಬಳಗ ಕ್ಲಬ್ ಬೆಂಗಳೂರು ಮುಂತಾದ ಸದಸ್ಯರು ಉಪಸ್ಥಿತರಿದ್ದರು.

ಶಾಲಾ ಮಕ್ಕಳಿಗೆ ದಾನಿಗಳಾದ ಶ್ರೀ.ಕನಕರಾಜ್ ರವರು , ನೋಟ್ ಬುಕ್, ಲೇಖನಿ, ಸಾಮಾಗ್ರಿಗಳನ್ನು ವಿತರಿಸಿದರು.ಬಂದಂತಹ ಅತಿಥಿಗಳು ಶಾಲೆಯ ವಾತಾವರಣ, ಮಕ್ಕಳ ಕಲಿಕೆ, ಶಿಕ್ಷಕರ ಕರ್ತವ್ಯ ನಿಷ್ಠೆ ಬಗ್ಗೆ ಪ್ರಶಂಸಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಯಶಸ್ವಿಯಾಗುತ್ತಿದ್ದಾರೆ.ಸರಕಾರಿ ಶಾಲೆ ಶಿಕ್ಷಕರು ಮೆರಿಟ್ ಆಧಾರದ ಮೇಲೆ ಆಯ್ಕೆಯಾದ ಪ್ರತಿಭಾವಂತರು ಎಂದು ಶ್ರೀ.ರಾಜಶೇಖರಯ್ಯ ರವರು ಮೆಚ್ಚುಗೆ ವ್ಯಕ್ತ ಪಡಿಸಿದರು.

ಶ್ರೀ.ಸಿರಿಬೈಲ್ ಧರ್ಮೇಶ್ ರವರು ಮಾತನಾಡಿ ಈ ಪುಟ್ಟ ಶಾಲೆಯ ವಾತಾವರಣ, ಸುಣ್ಣ ಬಣ್ಣ, ಪೀಠೋಪಕರಣಗಳು ಎಲ್ಲವೂ ಸುಸಜ್ಜಿತವಾಗಿದೆ.ಇಲ್ಲಿಯ ಶಿಕ್ಷಕರ, ಎಸ್ಡಿಎಂಸಿ ರವರ ಪಾತ್ರ ಬಹಳಿಷ್ಟಿದೆ ಎಂದು ಪ್ರಶಂಸಿದರು.

ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀ.ಸಾಲೆಕೊಪ್ಪ ರಾಮಚಂದ್ರ ರವರ ಅವಧಿಯಲ್ಲಿ 50 ಸಾವಿರ ಅನುದಾನದಲ್ಲಿ ಪೀಠೋಪಕರಣವನ್ನು ನೀಡಲಾಗಿದೆ ಎಂದು ತಿಳಿಸಿ ಸರ್ಕಾರಿ ಶಾಲೆಗಳು ಉಳಿಯಬೇಕು.ಅದನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವು ಆಗಿದೆ.ಸಮುದಾಯ, ದಾನಿಗಳು ಶಾಲೆಗಳಿಗೆ ಕೈಜೋಡಿಸಿದರೆ ಸರಕಾರಿ ಶಾಲೆಗಳು ಉಳಿಯುತ್ತವೆ ಎಂದು ತಿಳಿಸಿದರು.

ಶಿಕ್ಷಣ ಸಂಯೋಜಕರಾದ ಶ್ರೀಮತಿ.ಜ್ಯೋತಿ ರವರು ಶಿಕ್ಷಕರ ಕೊರತೆ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದು ಶಿಕ್ಷಕರನ್ನು ಪೂರೈಸಿದರೆ ಇನ್ನು ಹೆಚ್ಚಿನ ಗುಣಮಟ್ಟದ ಶಿಕ್ಷಣ ನಾವು ಮಕ್ಕಳಿಗೆ ನೀಡಬಹುದು.ಹಾಗೂ ಮಕ್ಕಳಿಗೆ ಚಿಕ್ಕಂದರಿಂದಲೇ ಸಂಸ್ಕಾರ ಕಲಿಸಬೇಕು ಎಂದು ತಮ್ಮ ಮನದಾಳದ ಮಾತುಗಳನ್ನು ನುಡಿದರು.ಬಂದಂತಹ ಎಲ್ಲಾ ಗಣ್ಯರು, ಶಾಲೆಗೆ, ಮಕ್ಕಳಿಗೆ ಶುಭ ಹಾರೈಸಿದರು.
ದಾನಿಗಳಾದ ಶ್ರೀ.ಕನಕರಾಜ್ ರವರು , ನಾನು ಈ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿ, ನನ್ನೂರಿನ ಶಾಲೆಗೆ ನಾನು ಏನಾದರೂ ಕೊಡುಗೆ ನೀಡಬೇಕು ಅಳಿಲು ಸೇವೆ ಮಾಡಿದ್ದೇನೆ ಎಂದು ಹೇಳಿದರು.ಈ ಸಮಾಜಕ್ಕೆ ನಾವು ಏನಾದರೂ ಸಹಾಯ ನೀಡಬೇಕು ಆಗ ಮಾತ್ರ ಜೀವನ ಸಾರ್ಥಕ ಎಂದು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

ಎಸ್ಡಿಎಂಸಿ ಹಾಗೂ ಶಿಕ್ಷಕ ವೃಂದದವರಿಂದ…ಶ್ರೀ.ಸುಮಿತ್ರಾ ಕನಕರಾಜ್ ದಂಪತಿಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ಶ್ರೀಮತಿ, ಅನಿತ ರವರು ಎಲ್ಲರನ್ನು ಸ್ವಾಗತಿಸಿ, ನಿರೂಪಿಸಿ ಕಾರ್ಯಕ್ರಮ ವನ್ನು ನೆರವೇರಿಸಿಕೊಟ್ಟರು. ಶ್ರೀ ಹೂವಪ್ಪ ಶಿಕ್ಷಕರು ಎಲ್ಲರನ್ನು ವಂದಿಸಿದರು. ಈ ಸಂದರ್ಭದಲ್ಲಿ ಪೋಷಕರು ಊರಿನ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…