ಭಾರತೀಯ ಯೋಗ ಪದ್ಧತಿಯು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅತ್ಯಂತ ಪೂರಕವಾದದ್ದು. ನರೇಂದ್ರ ಮೋದಿಯವರು ಮೊದಲ ಬಾರಿ ಪ್ರಧಾನಿಯಾದ ನಂತರ ಭಾರತೀಯ ಯೋಗ ಪದ್ಧತಿಯ ಬಗೆಗೆ ವಿಶ್ವದ ಗಮನ ಸೆಳೆದಿದ್ದರು. ಪ್ರಪಂಚದಾದ್ಯಂತ ಹಲವು ದೇಶಗಳು ನಮ್ಮ ಯೋಗ ಪರಂಪರೆಯನ್ನು ಬಳಸಿಕೊಳ್ಳುತ್ತಿದ್ದರಾದರೂ ಅದರ ಇತಿಹಾಸವನ್ನು ಅರಿತಿರಲಿಲ್ಲ. ಮೋದಿಯವರ ಮಾತಿಗೆ ಮನ್ನಣೆ ಕೊಟ್ಟು ಈಗ ವಿಶ್ವದ ಹಲವಾರು ದೇಶಗಳು ಯೋಗದ ಮಹತ್ವ ಸಾರಲೆಂದು ಪ್ರತಿ ವರ್ಷ ಜೂನ್ 21 ರಂದು ವಿಶ್ವ ಯೋಗದಿನ ಆಚರಿಸುತ್ತಿವೆ.

ಸುವರ್ಣ ಸಹಕಾರ ಭವನ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರೂ, ಗೃಹಮಂಡಳಿ ಅಧ್ಯಕ್ಷರೂ ಆದ ಶ್ರೀ ಆರಗ ಜ್ಞಾನೇಂದ್ರ ರವರು ಭಾಗವಹಿಸಿ ಮಾತನಾಡಿದರು. ಮಂಡಲ ಬಿಜೆಪಿ ಅಧ್ಯಕ್ಷರಾದ ಬಾಳೆಬೈಲು ರಾಘವೇಂದ್ರ ನಾಯಕ್, ಕಾರ್ಯದರ್ಶಿಗಳಾದ ಹೆದ್ದೂರು ನವೀನ್, ಪಟ್ಟಣ ಬಿಜೆಪಿ ಅಧ್ಯಕ್ಷರಾದ ಅನಿಲ್ ಕುಮಾರ್, ಸಂಘಟನೆಯ ಹಿರಿಯರಾದ ಭಾರತೀಪುರ ದಿನೇಶ್ ಜೀ , ರಾಷ್ಟ್ರೀಯ ಯೋಗ ದಿನಾಚರಣೆಯ ಮಂಡಲ ಪ್ರಮುಖರಾದ ನೀಲೇಶ್ ಜವಳಿ ಹಾಜರಿದ್ದರು. ಆಯುರ್ವೇದ ವೈದ್ಯರಾದ ಡಾ|| ನಮಿತಾ ಉಡುಪ ರವರು ಈ ಕಾರ್ಯಕ್ರಮದಲ್ಲಿ ಯೋಗ ದ ಮಹತ್ವದ ಬಗೆಗೆ ಉಪನ್ಯಾಸ ನಡೆಸಿಕೊಟ್ಟರು. ಹೆಚ್ ಎಮ್ ಕೃಷ್ಣಮೂರ್ತಿ ಯವರು ಯೋಗ ಶಿಕ್ಷಣ ನೀಡಿದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153