ಕೋರೊನ ಕಾರಣದಿಂದಾಗಿ ಎಲ್ಲಾ ಶಾಲಾ ತರಗತಿಗಳು ಆನ್ ಲೈನ್ ನಲ್ಲಿ ನಡೆಯುತ್ತಿವೆ. ಮಲೆನಾಡಿನ ಭಾಗದ ಮಕ್ಕಳಿಗೆ ಇದರಿಂದಾಗಿ ತೊಂದರೆಯಾಗುತ್ತಿದೆ. ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆಗಳಿವೆ ಹೀಗಾಗಿ ಇಂಟರ್ ನೆಟ್ ಸರಿಯಾಗಿ ಕೆಲಸ ಮಾಡುವುದಿಲ್ಲ. ನೆಟ್ ವರ್ಕಾಗಿ ಗುಡ್ಡ ಮನೆಯ ಮಾಳಿಗೆ ಹೀಗೆ ಎತ್ತರದ ಪ್ರದೇಶಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಮಲೆನಾಡಿನ ಮಕ್ಕಳು ಆನ್ ಲೈನ್ ಪಾಠದಿಂದ ವಂಚಿತರಾಗಿದ್ದರು ಸ್ಥಳೀಯ ಮಾಧ್ಯಮಗಳು ಇದರ ಬಗ್ಗೆ ಶಿಕ್ಷಣ ಸಚಿವರ ಗಮನ ಸೆಳೆದಿದ್ದಾರೆ. ಇದರ ಫಲಶ್ರುತಿಯಿಂದಾಗಿ ಶಿಕ್ಷಣ ಸಚಿವರು ಈ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ನೆಟ್‌ವರ್ಕ್ ಆಪರೇಟರ್ ಗಳ ಸಭೆ ಕರೆಯುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಈ ಪತ್ರದಿಂದಾದರು ಮಲೆನಾಡಿನ ನೆಟ್‌ವರ್ಕ್‌ ಸಮಸ್ಯೆ ಬಗೆಹರಿಯುವುದೇ ?
ಕಾದು ನೋಡಬೇಕಿದೆ.

ಜಗತ್ತು ಎಷ್ಟು ಮುಂದುವರಿದರೂ ಕೂಡ ಮಲೆನಾಡಿನ ನೆಟ್ ವರ್ಕ್ ಸಮಸ್ಯೆ ಏಕೆ ? ಎಂದು ಅವಲೋಕಿಸುವುದಾದರೆ ಮಲೆನಾಡಿನಲ್ಲಿ ಮನೆಗಳು ತುಂಬ ದೂರ ದೂರ ಇರುತ್ತವೆ ಅದರಂತೆಯೇ ಪ್ರದೇಶದಲ್ಲಿ ಜನಸಾಂದ್ರತೆ ಕಡಿಮೆ ಇರುತ್ತದೆ ಹಾಗಾಗಿ ನೆಟ್ ವರ್ಕ್ ಆಪರೇಟರ್ ಗಳಿಗೆ ಇಲ್ಲಿ ಟವರ್ ಹಾಕುವುದು ಆಲಸ್ಯದ ವಿಷಯ. ಸರ್ಕಾರವು ಈ ನೆಟ್ ವರ್ಕ್ ಆಪರೇಟರ್ ಗಳ ಕಳ್ಳಾಟವನ್ನು ಕೊನೆಗೊಳಿಸಿ ಅಲ್ಲಿನ ಜನರಿಗೆ ಅಗತ್ಯ ಸೇವೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153