ಕರೋನ ಅಲೆಗಳಿಂದ ನೊಂದಿರುವ ಜನರ ಸೇವೆಗೆ ಸರ್ಕಾರದ ನೆರವಿನೊಂದಿಗೆ, ದಾನಿಗಳ, ಸಂಘ-ಸಂಸ್ಥೆಗಳ ನೆರವು ಅತ್ಯಗತ್ಯ. ಇದರಿಂದ ಉತ್ತಮ ಕಾರ್ಯ ಮಾಡಲು ಸಾಧ್ಯ ಎಂದು ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ ರವರು ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕ, ನನ್ನ ಕನಸಿನ ಶಿವಮೊಗ್ಗ, ರೋ.ಪೂರ್ವದ ಸಹಯೋಗದೊಂದಿಗೆ ಮೇಗನ್ ಆಸ್ವತ್ರೆಗೆ ಆಕ್ಸಿಜನ್ ಪ್ಲೋಮೀಟರ್ ಸ್ವೀಕರಿಸಿ ಮಾತನಾಡುತ್ತಿದ್ದರು. ನಮ್ಮ ಸರ್ಕಾರಿ ಆಸ್ವತ್ರೆಗೆ ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ರೋಗಿಗಳು ಆಗಮಿಸುತ್ತಿದ್ದು, ಇದಕ್ಕೆ ಕಾರಣ ನಮ್ಮ ಸಿಬ್ಬಂದಿಗಳ ನಿಸ್ವಾರ್ಥ ಸೇವೆಗೆ ಹೆಸರು ವಾಸಿಯಾಗಿದೆ ಎಂದರು.

ಈ ಸಂಧರ್ಭದಲ್ಲಿ ಹಾಜರಿದ್ದ ಅಧೀಕ್ಷಕರಾದ ಡಾ.ಶ್ರೀಧರ್ ಮಾತನಾಡುತ್ತಾ, ಇಂತಹ ಕೊಡುಗೆಗಳು ಅತ್ಯುತ್ತಮ ವಾಗಿ ಕಾರ್ಯ ನಿರ್ವಹಿಸಲು ಸಹಕಾರಿ. ಈಗಾಗಲೆ ಉತ್ತಮ ಕಾರ್ಯ ದಿಂದ ನಮ್ಮ ಮೆಗನ್ ಆಸ್ವತ್ರೆ ಹೆಸರುಗಳಿಸಿದೆ. ಸಾರ್ವಜನಿಕರ ಸಹಕಾರದಿಂದ ಮುಂದೆಯೂ ನಮ್ಮ ಸಿಬ್ಬಂದಿ ಉತ್ತಮ ಕಾರ್ಯ ಮಾಡಲು ಕಂಕಣ ಬದ್ದರಾಗಿದ್ದೇವೆ ಎಂದರು. ನನ್ನ ಕನಸಿನ ಶಿವಮೊಗ್ಗದ ಗೋಪಿನಾಥ್ ಮಾತನಾಡುತ್ತಾ, ಆಕ್ಸಿಜನ್ ಸಿಲೆಂಡರ್ ಗಳಿಗೆ ಅಳವಡಿಸುವ ಈ ಆಕ್ಸಿಜನ್ ಪ್ಲೋ ಮೀಟರ್ ಗಳು ಹೆಚ್ಚು ಉಪಯೋಗ ಮಾಡುವುದರಿಂದ ಬೇಗ ಹಾಳಾಗುತ್ತವೆ. ಈಗ ಇದರ ಅವಶ್ಯಕತೆ ಹೆಚ್ಚು ಇರುವುದರಿಂದ, ತಕ್ಷಣ ಸ್ವಂದಿಸಿ ಕೊಡುಗೆಯಾಗಿ ನೀಡಲಾಗಿದೆ ಎಂದರು.

ರಾಜ್ಯ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸುಮಾರು ಮುವತ್ತೆಂಟು ಸಾವಿರ ರೂಪಾಯಿ ಮೊತ್ತದ ಫ್ಲೋ ಮೀಟರ್ ಗಳನ್ನು ಕೊಡುಗೆಯಾಗಿ ನೀಡಲು ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕದ ಸದಸ್ಯರು, ನನ್ನ ಕನಸಿನ ಶಿವಮೊಗ್ಗ, ರೋಟರಿ ಪೂರ್ವ, ಸಹಕಾರ ನೀಡಿರುವುದಾಗಿ ತಿಳಿಸಿದರು. ಈ ಸಂಧರ್ಭದಲ್ಲಿ ಲಕ್ಷ್ಮೀಗೋಪಿನಾಥ್, ಲಕ್ಷ್ಮೀ, ದಿಲೀಪ್ ನಾಡಿಗ್, ರೊ.ಗಣೇಶ್, ಪ್ರೋ.ವಿಜ್ಞೇಶ್, ಮಲ್ಲಿಕಾರ್ಜುನ್ ಇತರರು ಇದ್ದರು. ಎಸ್.ಎಸ್.ವಾಗೇಶ್ ಸ್ವಾಗತಿಸಿದರು, ಸುನೀಲ್ ಕುಮಾರ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153