ಶಿವಮೊಗ್ಗ ನಗರದಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಯಿಂದ ನಿರಂತರ ಒಂದು ವಾರದ ಪ್ರಯಾಸ್ ಸಪ್ತಾಹ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಭಾನುವಾರ ಗಾಜನೂರಿನಲ್ಲಿ ಉದ್ಘಾಟನೆಯಾದ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ನೂರಾರು ಮಹಿಳೆಯರು ಮತ್ತು ಹೆಣ್ಣುಮಕ್ಕಳು ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿದ್ದಾರೆ.

ಭಾನುವಾರ ಶಿವಮೊಗ್ಗದ ಖ್ಯಾತ ಶಸ್ತ್ರಚಿಕಿತ್ಸಕ ಡಾಕ್ಟರ್ ರೋಶನ್ ರವರು ಶಿವಮೊಗ್ಗದ ಹೊರವಲಯದ ಗಾಜನೂರಿನ, ಸುಮಾರು 75 ಸ್ವಸಹಾಯ ಮಹಿಳಾ ಗುಂಪಿಗೆ ಮುಟ್ಟಿನ ನೈರ್ಮಲ್ಯ ಮತ್ತು ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್ ಜಾಗೃತಿ ಮಾಹಿತಿಯನ್ನು ಏರ್ಪಡಿಸಿದರು. ಮಹಿಳೆಯರು ಇದರ ಲಾಭ ಪಡೆದರು.
ಸೋಮವಾರ ಜೆಸಿಐ ಶಿವಮೊಗ್ಗ ಶರಾವತಿ ಸಂಸ್ಥೆಯಿಂದ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಮುಟ್ಟಿನ ನೈರ್ಮಲ್ಯದ ಜಾಗೃತಿ ಮಾಹಿತಿಯನ್ನು ಏರ್ಪಡಿಸಿ, ಸುಮಾರು 100 ಹುಡುಗಿಯರು ಭಾಗವಹಿಸಿದ್ದರು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯ ಖ್ಯಾತ ವೈದ್ಯೆ ಡಾ ದ್ರಾಕ್ಷಾಯಿಣಿ ರವರು ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು.

ಮಂಗಳವಾರ ನಮ್ಮ ಸಂಸ್ಥೆಯ ಮೂಲಕ, ಯೋಗ ಶಿಕ್ಷಕಿ ಶ್ರೀಮತಿ ಅನುರಾಧಾ ಪ್ರಸಾದ್ ರವರಿಂದ ಯೋಗದಿಂದ ಋತುಚಕ್ರದ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆಂದು ಕಲಿಸುವ ಸಲುವಾಗಿ ಸ್ವಸಹಾಯ ಮಹಿಳಾ ಗುಂಪಿಗೆ ಯೋಗ ತರಗತಿಯನ್ನು ಏರ್ಪಡಿಸಲಾಯಿತು ಮತ್ತು ಶಿವಮೊಗ್ಗ ಗ್ರಾಮಾಂತರ ಅಂಬ್ಲೇಬೈಲುನಲ್ಲಿ 50 ಮಹಿಳೆಯರು ಭಾಗವಹಿಸಿದರು.
ಬುಧವಾರ ಶಿವಮೊಗ್ಗದ ಬೆಂಕಿನಗರದ ಸ್ವಸಹಾಯ ಮಹಿಳಾ ಗುಂಪಿಗೆ ಸ್ತ್ರೀರೋಗ ತಜ್ಞೆ ಡಾ ಪ್ರಕೃತಿ ಮಂಚಾಲೆ ಋತುಸ್ರಾವದ ನೈರ್ಮಲ್ಯದ ಜಾಗೃತಿ ಮಾಹಿತಿಯನ್ನು ಏರ್ಪಡಿಸಿದ್ದು, ಸುಮಾರು 75 ಮಹಿಳೆಯರು ಇದರ ಪ್ರಯೋಜನವನ್ನು ಪಡೆದುಕೊಂದಿದರೆ.

ಗುರುವಾರ ನಗರದ ಹೊಯ್ಸಳ ಕಾಲೇಜಿನ ವಿದ್ಯಾರ್ಥಿಗಳಿಗೆ ವೈದ್ಯೆ ಪ್ರಕೃತಿ ಮಂಚಾಲೆ ಅವರು ಋತುಸ್ರಾವದ ನೈರ್ಮಲ್ಯದ ಅರಿವಿನ ಮಾಹಿತಿಯನ್ನು ಉಪನ್ಯಾಸದ ಮೂಲಕ ನೀಡಿದರು, ಸುಮಾರು 70 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶುಕ್ರವಾರ ಶಿವಮೊಗ್ಗದ ಕೃಷಿನಗರದಲ್ಲಿರುವ ತರಳಬಾಳು ಹಾಸ್ಟೆಲ್ ಬಾಲಕಿಯರಿಗೆ ವೈದ್ಯೆ ದ್ರಾಕ್ಷಾಯಿಣಿ ಸ್ತ್ರೀರೋಗ ತಜ್ಞೆ ಅವರಿಂದ ಋತುಸ್ರಾವ ನೈರ್ಮಲ್ಯದ ಅರಿವಿನ ಮಾಹಿತಿಯ ಕಾರ್ಯಕ್ರಮ ನಡೆಸಿಕೊಟ್ಟರು. ಸುಮಾರು 100 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು.

ಶನಿವಾರ BCM ಹಾಸ್ಟೆಲ್ ಶಿವಮೊಗ್ಗದ ಕೃಷಿನಗರದ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಿ ಋತುಸ್ರಾವ ನೈರ್ಮಲ್ಯದ ಬಗ್ಗೆ ಅರಿವಿನ ಕಾರ್ಯಕ್ರಮದ ಮೂಲಕ, ಪ್ರಯಾಸ್ ಸಪ್ತಾಹವನ್ನು ಮುಕ್ತಾಯಗೊಳಿಸಲಾಯಿತು.
ಜೆಸಿಐ ಶಿವಮೊಗ್ಗ ಶರಾವತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಪ್ರಯಸ್ ಸಪ್ತಾಹಕ್ಕೆ ಸಹಕರಿಸಿದ ವೈದ್ಯರಿಗೆ, ಹಾಸ್ಟೆಲ್ ಸಿಬ್ಬಂದಿಗಳಿಗೆ, ಸ್ವಸಹಾಯ ಸಂಘದ ಮಹಿಳೆಯರಿಗೆ ಮತ್ತು ಜೆಸಿ ಸದಸ್ಯರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ…