ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ರಾಜಪೂತ್ ಸಭಾದ ವತಿಯಿಂದ ಇಂದು ಬೆಳಗ್ಗೆ ವಿನೋಬನಗರದ 100 ಅಡಿ ರಸ್ತೆಯಲ್ಲಿರುವ ಮಹಾರಾಣಾ ಪ್ರತಾಪಸಿಂಹ ವೃತ್ತದಲ್ಲಿ ಪ್ರತಾಪಸಿಂಹರ 482 ನೇ ಜಯಂತ್ಯುತ್ಸವ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್, ರಾಣಾ ಪ್ರತಾಪಸಿಂಹರು ದೇಶ, ಧರ್ಮ, ಸಂಸ್ಕೃತಿ ರಕ್ಷಿಸಲು ತಮ್ಮ ಜೀವವನ್ನೇ ಪಣವಾಗಿಟ್ಟವರು. ಅವರ ಹೋರಾಟವನ್ನು ಇಡೀ ದೇಶ ಗೌರವಿಸುತ್ತದೆ. ಅವರ ಆದರ್ಶಗಳನ್ನು ಇಂದಿನ ಯುವ ಜನಾಂಗ ಪಾಲಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಏರ್ಪಡಿಸಿರುವುದು ಸ್ವಾಗತಾರ್ಹವಾಗಿದೆ. ರಕ್ತದಾನ ಇಂದು ಮಹಳ ಮುಖ್ಯವಾಗಿದೆ. ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮವೂ ಬೀರುವುದಿಲ್ಲ. ಹಲವರ ಜೀವ ಉಳಿಸಲು ರಕ್ತದಾನ ನೆರವಾಗುತ್ತದೆ. ಪ್ರತಿಯೊಬ್ಬ ಆರೋಗ್ಯವಂತರೂ ರಕ್ತದಾನ ಮಾಡುವಂತೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ರಾಜಪೂತ್ ಸಭಾದ ಅಧ್ಯಕ್ಷ ದೀಪಕ್ ಸಿಂಗ್, ಗೌರವಾಧ್ಯಕ್ಷ ಎಸ್.ಎಂ. ವಿಶ್ವನಾಥ್ ಸಿಂಗ್, ಭರತರಾಜ್ ಸಿಂಗ್, ರಘುವೀರ್ ಸಿಂಗ್, ರಾಜಾ ಸಿಂಗ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…