ಶಿರಾಳಕೊಪ್ಪ : ನಮ್ಮ ನೆಚ್ಚಿನ -ಮೆಚ್ಚಿನ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜಿಯವರು ವಾರಣಾಸಿಯ ಪುಣ್ಯನೆಲದಲ್ಲಿ ನಿಂತು ಹೇಳಿದ ಮಾತು ವಿರೋಧ ಗೆದ್ದವರೇ ವೀರಶೈವರು, ವೀರಶೈವ ಪರಂಪರೆಯ ಪಂಚ ಪೀಠಗಳು
ಏಕ ಭಾರತ- ಶ್ರೇಷ್ಠ ಭಾರತದ ಮಾರ್ಗದರ್ಶಕರು ಎಂಬ ಮಾತುಗಳು ವೀರಶೈವ ಧರ್ಮದ ಶ್ರೇಷ್ಠತೆ, ಜನಪ್ರಿಯತೆ, ಹಾಗು ಈ ದೇಶದ ಇತಿಹಾಸದಲ್ಲಿ ಅದಕ್ಕಿರುವ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ ಎಂದು ಸಂಸದರಾದ ಬಿ. ವೈ. ರಾಘವೇಂದ್ರ ಅವರು ತಿಳಿಸಿದರು.

ಶ್ರೀ ರಂಬಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದ ನಂತರ ಶಿರಾಳಕೊಪ್ಪ ಹೈಸ್ಕೂಲ್ ಮೈದಾನದಲ್ಲಿ ನೆಡೆದ ಧರ್ಮ ಸಭೆ ಕಾರ್ಯಕ್ರಮವನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು ಶ್ರೀಗಳ ಸಮ್ಮುಖದಲ್ಲಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ವೀರಶೈವ ಮಠಗಳು ಅನಾದಿ ಕಾಲದಿಂದ ಧರ್ಮ ರಕ್ಷಣೆ,ಸಮಾಜ ಸುಧಾರಣೆ, ವಿದ್ಯೆ, ಆರೋಗ್ಯ ಹೀಗೆ ನಾನಾ ದಾಸೋಹ- ದಾನಗಳಲ್ಲಿ ತೊಡಗಿವೆ. ಅವುಗಳು ನಮ್ಮ ಸಮಾಜ ಸಂಕಷ್ಟ ಎದುರಿಸಿದಾಗಲೆಲ್ಲ ಮಾರ್ಗದರ್ಶನ ನೀಡಿ, ಜನ ಸಮೂಹವನ್ನು ಪೊರೆದಿವೆ. ಈ ಹಿನ್ನಲೆಯಲ್ಲಿ
ನಾವೆಲ್ಲಾ ನಮ್ಮ ಪರಮ ಪೂಜ್ಯ ಸ್ವಾಮೀಜಿಗಳಿಗೆ ಸದಾ ಕೃತಜ್ಞರಾಗಿರಬೇಕಿದೆ.
ನಾಡಿನ ಪಂಚಾಚಾರ್ಯರು, ಶ್ರೀ ಸಿದ್ದಾಂತ ಶಿಖಾಮಣಿ ಗ್ರಂಥ, ನಮ್ಮೆಲ್ಲರ ಬದುಕಿನ ದಾರಿದೀಪಗಳು. ಗುರುವಿಲ್ಲದೆ ಯಾವುದೇ ಗುರಿ ಮುಟ್ಟಲು ಅಸಾಧ್ಯ. ಗುರುಗಳ ಆಶೀರ್ವಾದವೇ ನಮಗೆ
ಸದಾ ಶ್ರೀರಕ್ಷೆ ಒದಗಿಸುತ್ತದೆ. ಈ ಹಿನ್ನಲೆಯಲ್ಲಿ ನಾವು ಸದಾ ಗುರುಪಂಪರೆ, ಗುರು ಪೀಠಗಳಿಗೆ ಬದ್ಧರಾಗಿರಬೇಕು.

ಈ ಕನ್ನಡದ ಪುಣ್ಯ ನೆಲದಲ್ಲಿ ರೂಪುಗೊಂಡ, ದಾಸೋಹದ ಪರಿಕಲ್ಪನೆ ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಒಂದು ಮಾನವೀಯ ಗುಣವಾಗಿದೆ. ಅನ್ನ, ಶಿಕ್ಷಣ, ಆರೋಗ್ಯ ಹೀಗೆ
ಈ ದಾಸೋಹದ ಪರಿಕಲ್ಪನೆ ಹಲವು ರೂಪದಲ್ಲಿ ನಮ್ಮ ಸಮಾಜವನ್ನು ಕಾಪಾಡುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಸಮಾಜ ಮೊರೆ ಹೋದದ್ದು ಈ ವ್ಯವಸ್ಥೆಗೆ. ಇದು ನಮ್ಮ ಹಿರಿಯರ ದೂರದೃಷ್ಟಿಯನ್ನು ಸೂಚಿಸುತ್ತದೆ ಎಂದರು.

ದಿವ್ಯ ಸಾನಿಧ್ಯವನ್ನು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರು. ತಾಲೂಕಿನ ವಿವಿಧ ಮಠದ ಹರಗುರು ಚರಮೂರ್ತಿಗಳು.ಶಾಸಕರು, ವಿಧಾನಪರಿಷತ್ ಸದಸ್ಯರು, ಮತ್ತಿತರ ಮುಖಂಡರು ಉಪಸ್ಥಿತರಿದ್ದರು.