ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಯೋಗದಿಂದ ಸಕಲ ಖಾಯಿಲೆಗಳೆಲ್ಲವೂ ದೂರವಾಗುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಶಿವಗಂಗಾ ಯೋಗಕೇಂದ್ರದ ಟ್ರಸ್ಟಿಗಳಾದ ಎಸ್.ರುದ್ರೇಗೌಡರು ನುಡಿದರು.

ಅವರು ಇಂದು ಬೆಳಿಗ್ಗೆ ನಗರದ ಜಿಲ್ಲಾಪಂಚಾಯತ್ ಆವರಣದಲ್ಲಿ ಶ್ರೀ ಶಿವಗಂಗಾ ಯೋಗಕೇಂದ್ರ, ರಾಘವಶಾಖೆ ವತಿಯಿಂದ ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ವಿಶೇಷ ಉಚಿತ ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಶಿಬಿರಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಯೋಗಾರಾಧನೆ, ದೇಹ, ಮನಸ್ಸು, ಉಸಿರನ್ನು ಸಂಯೋಜನೆಗೊಳಿಸಿ ಉತ್ತಮ ಆರೋಗ್ಯಕ್ಕೆ ನಾಂದಿಯಾಗಿದೆ ಎಂದು ನುಡಿದರು.

ಶಿಬಿರವನ್ನು ರಾಜ್ಯಪ್ರಶಸ್ತಿ ಪುರಸ್ಕೃತರಾದ ಡಾಕ್ಟರ್ ಎನ್.ಎಲ್.ನಾಯಕ ಉದ್ಘಾಟಿಸಿ ಮಾತನಾಡುತ್ತ ಯೋಗ ಮಾನವ ಜನಾಂಗದ ಆರೋಗ್ಯ ಶಾಂತಿ ನೆಮ್ಮದಿ ಜೊತೆಗೆ ದೈಹಿಕ ಮತ್ತು ಮಾನಸಿಕ ರೋಗಕ್ಕೆ ಅಗತ್ಯವಾಗಿ ಬೇಕಾಗಿದೆ. ಮಾತ್ರೆಯಿಂದ ಗುಣಪಡಿಸಲಾಗದ ಖಾಯಿಲೆಯ ಸಮಸ್ಯೆಗಳನ್ನು ಯೋಗದಿಂದ ಪರಿಹರಿಸಿಕೊಳ್ಳಬಹುದು. ನಿರಂತರ ಯೋಗ ನಮ್ಮ ಜೀವನ ಶೈಲಿಯನ್ನು ಬದಲಿಸುತ್ತೇವೆ. ಪ್ರತಿಯೊಬ್ಬರು ತಪ್ಪದೇ ಯೋಗ, ಪ್ರಾಣಾಯಾ, ಧ್ಯಾನದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯರವರು ನಗರದ ೨೮ಕೇಂದ್ರಗಳಲ್ಲಿ ಹಲವಾರು ವರ್ಷಗಳಿಂದ ಉಚಿತ ಯೋಗ ತರಬೇತಿ ನೀಡುತ್ತಿದ್ದೇವೆ.ಇದಕ್ಕೆ ಶಿವಮೊಗ್ಗದ ಜನತೆ ಹಾಗೂ ನಮ್ಮ ಕೇಂದ್ರದ ಟ್ರಸ್ಟಿಗಳು, ಶಿಕ್ಷಕರು, ಹಿತೈಶಿಗಳ ಸಹಕಾರ ಎಂದು ಸ್ಮರಿಸಿ ಶಿಬಿರಾರ್ಥಿಗಳಿಗೆ ಯೋಗಾಭ್ಯಾಸ, ಧ್ಯಾನ, ಪ್ರಾಣಾಯಾಮದ ಅದ್ಭುತ ಲಾಭಗಳನ್ನು ತಿಳಿಸಿದರು.

ಸಮಾರಂಭದಲ್ಲಿ ಮಹಾನಗರಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ, ರ‍್ಯವೈಶ್ಯ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ಬೆಲಗೂರು, ಯೋಗಕೇಂದ್ರದ ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್, ಬಿ.ಎ.ರಂಗನಾಥ್, ಕಾಟನ ಜಗದೀಶ್, ರಾಘವ, ಶಾಖೆಯ ಶಿಕ್ಷಕರಾದ ಜಿ.ಎಸ್.ಓಂಕಾರ್, ವಿಜಯಕೃಷ್ಣ, ಜಿ.ವಿಜಯಕುಮಾರ್, ಶ್ರೀನಿವಾಸ, ವಿಠಲರಾವ್, ಕೇಶವ, ನರಸೂಜಿರಾವ್, ಮಹೇಶ್, ಹರೀಶ್ ಹೆಚ್.ಕೆ, ಶಿವಕುಮಾರ್, ಅನುರಾಧ, ಬಸವರಾಜ್, ಸುಧಕರ್, ವಿಣಾಶಿವಕುಮಾರ್, ಮಂಜುಳ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…