ಸಾಗರ ನ್ಯೂಸ್…

ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೊಂಬೆ ಗ್ರಾಮದ ವಾಸಿಯೊಬ್ಬರು ತೋಟದಲ್ಲಿ ಬೆಳದ ಸುಮಾರು 675 ಕೆಜಿಯ ಅಡಿಕೆಯನ್ನು ಕಟಾವು ಮಾಡಿ 12 ಚೀಲಗಳಲ್ಲಿ ತುಂಬಿ ಮನೆಯ ಬಳಿ ಉಗ್ರಾಣದಲ್ಲಿ ಸಂಗ್ರಹಿಸಿ ಇಟ್ಟಿದ್ದು ದಿನಾಂಕ 01-06-2022 ರಂದು ಅಡಿಕೆಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0232/2022 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತದೆ.

ಪಿ.ಐ ಸಾಗರ ಗ್ರಾಮಾಂತರ ಮತ್ತು ಸಿಬ್ಬಂದಿಗಳ ತಂಡವು ಸದರಿ ಪ್ರಕರಣದ ತನಿಖೆ ಕೈಗೊಂಡು ದಿನಾಂಕಃ- 05-06-2022 ರಂದು ಪ್ರಕರಣದ ಆರೋಪಿಗಳಾದ 1)ಯಶೋದರ@ ಗುಂಡ, 23 ವರ್ಷ, ಅದರಂತೆ ಗ್ರಾಮ ಸಾಗರ, 2)ಮಂಜುನಾಥ @ ಮಂಜ, 28 ವರ್ಷ, ಅದರಂತೆ ಗ್ರಾಮ, ಸಾಗರ, 3) ಅರುಣ 27 ವರ್ಷ, ಅದರಂತೆ ಗ್ರಾಮ, ಸಾಗರ, 4)ಸಂದೇಶ@ ಸ್ಯಾಂಡಿ, 22 ವರ್ಷ, ಅದರಂತೆ ಗ್ರಾಮ, ಸಾಗರ, 5) ಶಶಾಂಕ್ @ ಪುಟ್ಟ, 21 ವರ್ಷ, ಸಾಗರ ಟೌನ್, 6) ಕಾರ್ತಿಕ, 20 ವರ್ಷ, ಸಾಗರ ಟೌನ್, 7) ಸಂದೀಪ 24 ವರ್ಷ, ಅದರಂತೆ ಗ್ರಾಮ, ಸಾಗರ, 8)ಶಾರೂಕ್ ಅಲಿ, 24 ವರ್ಷ, ಅಣಲೆಕೊಪ್ಪ ಸಾಗರ ರವರುಗಳನ್ನು ದಸ್ತಗಿರಿ ಮಾಡಿ ಸದರಿ ಆರೋಪಿತರಿಂದ ಮೇಲ್ಕಂಡ ಪ್ರಕರಣವೂ ಸೇರಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಒಟ್ಟು 07 ಅಡಿಕೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 5,00,000/- ರೂ ಗಳ 805 ಕೆಜಿ ಸಿಪ್ಪೆ ಗೋಟು ಅಡಿಕೆ, 70 ಕೆಜಿ ಚಾಲಿ ಅಡಿಕೆ, 349 ಕೆಜಿ ಕೆಂಪು ಅಡಿಕೆ ಮತ್ತು 200 ಕೆಜಿ ಬಿಳಿ ಗೋಟು ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ 01 ಓಮಿನಿ ವಾಹನ ಮತ್ತು 02 ಬೈಕ್ ವಶಪಡಿಸಿಕೊಂಡಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ…