“ಕರ್ನಾಟಕ ಎಲೆಕ್ಟ್ರಿಕಲ್ ವೆಹಿಕಲ್ ಮ್ಯಾನುಫ್ಯಾಕ್ಚರರ್ಸ್ ಅಂಡ್ ಡೀಲರ್ಸ್ ಅಸೋಸಿಯೇಷನ್” ನ ತಂಡದೊಂದಿಗೆ (ಎಲೆಕ್ಟ್ರಿಕಲ್ ವಾಹನಗಳ ಉತ್ಪಾದಕರ ದಂಡ) KSSIDC ಯ ಉಪಾಧ್ಯಕ್ಷರಾದ ಎಸ್ ದತ್ತಾತ್ರಿ ರವರು ನಿನ್ನೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ‘ಶ್ರೀ ನಿತಿನ್ ಗಡ್ಕರಿ’ ರವರನ್ನು ನವದೆಹಲಿಯ ಅವರ ಸ್ವಗೃಹದಲ್ಲಿ ಭೇಟಿ ಮಾಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿರುವಂತಹ ಅನೇಕ ಸಮಸ್ಯೆಗಳ ಬಗ್ಗೆ ಹಾಗೂ ಸರ್ಕಾರದ ವತಿಯಿಂದ ಇನ್ನಷ್ಟು ರಿಯಾಯಿತಿಗಳ ಬಗ್ಗೆ ಚರ್ಚಿಸಿದ್ದಾರೆ.

ಅತಿ ಸಣ್ಣ ವಾಹನದ (RTO ರಿಜಿಸ್ಟ್ರೇಷನ್ ಇಲ್ಲದ ಎಲೆಕ್ಟ್ರಿಕ್ ವಾಹನದ) ವೇಗದ ಮಿತಿಯನ್ನು 25 ಕಿ.ಮೀ ನಿಂದ 40 ಕಿ.ಮೀ ಗೆ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಅನುಮತಿ ನೀಡುವಂತೆ ವಿನಂತಿಸಿ, ಕರ್ನಾಟಕದಲ್ಲಿ ಖಾಸಗಿಯವರು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಇರುವ ಕಾನೂನು ತೊಡಕುಗಳನ್ನು ಸರಳೀಕರಣಗೊಳಿಸಲು ಅವರಲ್ಲಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಎಲೆಕ್ಟ್ರಿಕಲ್ ವೆಹಿಕಲ್ ಮ್ಯಾನುಫ್ಯಾಕ್ಚರರ್ಸ್ ಅಂಡ್ ಡೀಲರ್ಸ್ ಅಸೋಸಿಯೇಷನ್ ನ ಕಾರ್ಯದರ್ಶಿಗಳು ಹಾಗೂ ನರೇಂದ್ರ ಮೋದಿ ವಿಚಾರ ಮಂಚ್ ನ ರಾಜ್ಯಾಧ್ಯಕ್ಷರಾದ ಶ್ರೀ ಕೆ.ಆರ್. ವೆಂಕಟೇಶ್, ಖ್ಯಾತ ಇ- ಅಶ್ವ ಆಟೋಮೋಟಿವ್ ಪ್ರೈ. ಲಿ. ನ ಮಾಲೀಕರಾದ ಶ್ರೀ ವಿಕಾಸ್ ಗುಪ್ತ, ಸುಭಾಷ್ ಆಟೋಮೋಟಿವ್ ಪ್ರೈ. ಲಿ. ನ ಮಾಲೀಕರಾದ ಶ್ರೀ ನಾಗೇಶ್, ರಾಜೀವ್ ತಿವಾರಿ, ದೇಶಮುಖ್, ರಾನಡೆ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…