ರಾಷ್ಟೀಯ ಸ್ವಯಂ ಸೇವಕ ಸಂಘದ ಬಗ್ಗೆ ಹಗೂರವಾಗಿ ಮಾತನಾಡುವ ಕೆಲಸವನ್ನು ಮಾಡುತ್ತಿದ್ದಾರೆ, ರಾಜಕಾರಣಕ್ಕೆ ಅದರದ್ದೇ ಆದ ವಿಷಯಗಳಿವೆ, ಅದಕ್ಕೆ ರಾಷ್ಟೀಯ ಸ್ವಯಂ ಸೇವಕ ಸಂಘವನ್ನು ಅನವಶ್ಯಕವಾಗಿ ಎಳೆಯುತ್ತಿರುವುದು ಅರ್ಥವಿಲ್ಲದ ವಿಚಾರ, ಸಂಘದ ಬಗ್ಗೆ ಮಾತನಾಡುವ ಯೋಗ್ಯತೆ ಕೂಡ ಅವರಿಗಿಲ್ಲ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.

ರಾಷ್ಟೀಯ ಸ್ವಯಂ ಸೇವಕ ಸಂಘವು ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡು ಕೋಟ್ಯಂತರ ಕಾರ್ಯಕರ್ತರ ಶ್ರಮದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅನೇಕ ಹಿರಿಯರ ತಪಸ್ಸು ಅವರ ಆಶೀರ್ವಾದದೊಂದಿಗೆ ಇಂದು ಮೋದಿ ಜಿ ಅವರ ನೇತೃತ್ವದಲ್ಲಿ ಅನೇಕ ಸಂಕಲ್ಪವನ್ನು ಜಾರಿಗೊಳಿಸಲಾಗಿದೆ.

ರಾಷ್ಟೀಯ ಸ್ವಯಂ ಸೇವಕ ಸಂಘವು ಒಂದು ದೇಶ ಭಕ್ತ ಸಂಘಟನೆ, ಹಿಂದುಸ್ತಾನದ ಶ್ರೇಯೋಭಿವೃದ್ಧಿಗಾಗಿ ಶ್ರಮ ಪಡುತ್ತಿರುವ ಸಂಸ್ಥೆ, ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಾದ ಸಂಸ್ಥೆಯಲ್ಲ.ಇದನ್ನು ವಿರೋಧ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು.ರಾಜಕೀಯ ಚಟಕ್ಕಾಗಿ ನಮ್ಮ ಮಾತೃ ಸಂಸ್ಥೆಯನ್ನು ದೂರುವುದು ದೊಡ್ಡ ತಪ್ಪು, ಇನ್ನಾದರೂ ಅದನ್ನು ತಿದ್ದುಕೊಂಡು ಮೊನ್ನೆಡೆಯಬೇಕಿದೆ.

ಕೇವಲ ಅಲ್ಪಸಂಖ್ಯಾತರ ಮತಕ್ಕಾಗಿ ಸಂಘವನ್ನು ದೂರುವ ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಅವರು ಮಾಡಿರುವ ಸಾಧನೆಯನ್ನು ಮೂಲಕ ಜನರ ಮುಂದೆ ಬರಲಿ.
ಸಂಘದ ವಿಚಾರದಲ್ಲಿ ಬೆರಳು ತೊಸಿಸುವ ಯೋಗ್ಯತೆ ಇವರಿಗಿಲ್ಲ ಎಂದರು.

ವರದಿ ಮಂಜುನಾಥ್ ಶೆಟ್ಟಿ…