ಶಿವಮೊಗ್ಗದ ಶೇಷಾದ್ರಿಪುರಂ ವಾಸಿಯೊಬ್ಬರು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆದಿಶಕ್ತಿ ಶೋರೂಂ ಹತ್ತಿರ ಹೋಗುತ್ತಿದ್ದಾಗ ಬೈಕಿನಲ್ಲಿದ್ದ ಅಪರಿಚಿತ ವ್ಯಕ್ತಿಗಳು ಹಿಂದಿನಿಂದ ಬಂದು ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿದ್ದು ಮೇ 25 ಘಟನೆ ನಡೆದಿತ್ತು.

ನಂತರ ದೂರುದಾರ ದೂರಿನ ಮೇರೆಗೆ ಗನ್ನೆ ಸಂಖ್ಯೆ:0069/2022 ಕಲಂ 392 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
ಪಿಐ ಕೋಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡವು ಸದರಿ ಪ್ರಕರಣದ ತನಿಖೆ ಕೈಗೊಂಡು ದಿನಾಂಕ:28-05-2022 ರಂದು ಆರೋಪಿತರಾದ 1) ಅಶೋಕ್ ಕುಮಾರ್,24 ವರ್ಷ, ಬಾವರ್ಲ ಗ್ರಾಮ, ಸ್ಯಾಂಚೋರ್‌ ತಾಲ್ಲೂಕು, ಜಾಲೋರ್‌ ಜಿಲ್ಲೆ, ರಾಜಸ್ಥಾನ ಮತ್ತು ಅಶ್ವಿನ್ ಪ್ರಜಾಪತಿ,23 ವರ್ಷ, ಕಿಲೋಪಿಯಾ ಗ್ರಾಮ, ಸ್ಯಾಂಚೋರ್‌ ತಾಲ್ಲೂಕು, ಜಾಲೋರ್‌ ಜಿಲ್ಲೆ, ರಾಜಸ್ಥಾನ ರವರನ್ನು ದಸ್ತಗಿರಿ ಮಾಡಿರುತ್ತಾರೆ.

ದಿನಾಂಕ: 09-06-2022 ರಂದು ಇನ್ನೊಬ್ಬ ಆರೋಪಿ ವಿಕಾಸ್ ಕುಮಾರ್,22 ವರ್ಷ, ಪರಾವ ಗ್ರಾಮ, ಸ್ಯಾಂಚೋರ್‌ ತಾಲ್ಲೂಕು, ಜಾಲೋರ್‌ ಜಿಲ್ಲೆ, ರಾಜಸ್ಥಾನ ಈತನನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಕೋಟೆ -02, ವಿನೋಬನಗರ-02, ದೊಡ್ಡಪೇಟೆ-01 ಮತ್ತು ತುಂಗಾನಗರ ಠಾಣೆಯ-01 ಪ್ರಕರಣ ಸೇರಿ ಒಟ್ಟು 06 ಸರಗಳ್ಳತನ ಪ್ರಕರಣಗಳು ಹಾಗೂ ಕೋಟೆ ಮತ್ತು ವಿನೋಬನಗರ ಪೊಲೀಸ್ ಠಾಣೆಯ ತಲಾ 01 ದ್ವಿ ಚಕ್ರ ವಾಹನ ಕಳವು ಪ್ರಕರಣಗಳಿಗೆ ಸೇರಿದ ಒಟ್ಟು 225 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಎರಡು ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ…