777 CHARLI
ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 CHARLIE ಚಿತ್ರವು ಇಂದು ವಿಶ್ವಾದ್ಯಂತ ತೆರೆ ಕಂಡಿದೆ.ಅದರಂತೆ ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರ ಹಾಗೂ ಭಾರತ ಸಿನಿಮಾಸ್ ಚಿತ್ರಮಂದಿರದಲ್ಲಿ ತೆರೆಕಂಡಿದೆ. ಚಿತ್ರದಲ್ಲಿ ನಾಯಕನಟರಾಗಿ ರಕ್ಷಿತ್ ಶೆಟ್ಟಿ ಅಭಿನಯಿಸಿದ್ದು ನಾಯಕಿಯಾಗಿ ಸಂಗೀತ ಶೃಂಗೇರಿ ಅವರು ನಟಿಸಿದ್ದಾರೆ.







ವಿಶೇಷ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಅವರು ಅಭಿನಯಿಸಿದ್ದಾರೆ.ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಮತ್ತು ಗುಪ್ತಾ ರವರು ಬಂಡವಾಳ ಹೂಡಿದ್ದಾರೆ.ಕಿರಣ್ ರಾಜ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಶೇಷವೆಂದರೆ ಚಾರ್ಲಿ ಎನ್ನುವ ಶ್ವಾನ ಚಿತ್ರಕ್ಕೆ ಶಕ್ತಿ ಮತ್ತು ಮೆರುಗು ತಂದು ಕೊಟ್ಟಿದೆ.ಚಿತ್ರದಲ್ಲಿ ಬಹು ತಾರಾಂಗಣದಲ್ಲಿ ನಟನಟಿಯರು ಅಭಿನಯಿಸಿದ್ದಾರೆ. ಒಟ್ಟಿನಲ್ಲಿ ಚಿತ್ರದ ಫಸ್ಟ್ ಡೇಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.ಚಿತ್ರವು ಯಶಸ್ವಿಯಾಗಲಿ ಎಂದು ಶಿವಮೊಗ್ಗ ಅಭಿಮಾನಿ ಬಳಗ ಹಾರೈಸುತ್ತಾರೆ.